Pradeep K Vijayan: ಕಾಲಿವುಡ್ ಖ್ಯಾತ ನಟ ಪ್ರದೀಪ್ ಕೆ.ವಿಜಯನ್ ನಿಧನವಾಗಿದ್ದಾರೆ. ನಟನ ಸಾವು ಅಭಿಮಾನಿಗಳಿಗೆ ದುಃಖ ತಂದಿದೆ. ವಿಜಯನ್ ಅವರ ಸಾವಿನ 2 ದಿನಗಳ ನಂತರ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಹೌದು.. ಪ್ರದೀಪ್ ಕೆ.ವಿಜಯನ್ ಕಳೆದ 10 ವರ್ಷಗಳಿಂದ ತಮಿಳು ಸಿನಿರಂಗದಲ್ಲಿ ಸಕ್ರಿಯವಾಗಿದ್ದರು. ನಟನೆ ಮತ್ತು ಮುಖಭಾವ ಹಾಗು ಮಾತಿನ ಶೈಲಿಯ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ತೆಕಿಟಿ ಚಿತ್ರದ ಮೂಲಕ ಬಹಳ ಜನಪ್ರಿಯರಾದ ನಟ, ಏರು ನಾನ್ ಕೂತ್ತು, ಮೇಸಯ್ಯ ಮುರುಕ್ಕು, ಮೇಯಾದ ಮಾನ್ ಮುಂತಾದ ಚಿತ್ರಗಳ ಮೂಲಕ ಗಮನಸೆಳೆದರು.
ಇದನ್ನೂ ಓದಿ:ಏಕಾಏಕಿ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಖ್ಯಾತ ಆ್ಯಂಕರ್..! ಫೋಟೋಸ್ ವೈರಲ್
ಕಳೆದ ಎರಡು ದಿನಗಳಿಂದ ಪ್ರದೀಪ್ ಅವರನ್ನು ಸಂಪರ್ಕಿಸಲು ಆತನ ಸ್ನೇಹಿತರು ಪ್ರಯತ್ನಿಸುತ್ತಿದ್ದರು. ಆದರೆ ನಟ ಫೋನ್ ಎತ್ತಿರಲಿಲ್ಲ. ಬಳಿಕ ಆತನನ್ನು ಹುಡುಕಿಕೊಂಡು ಮನೆಗೆ ಬಂದು ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಅಲ್ಲದೇ ಮನೆಯಿಂದ ದುರ್ವಾಸನೆ ಬಂದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದಾಗ ಶವವಾಗಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ನಟ ಮೃತಪಟ್ಟಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ವಿಜಯನ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ:ನಟ ದುನಿಯಾ ವಿಜಯ್ ಮತ್ತು ಪತ್ನಿ ನಾಗರತ್ನ ಡಿವೋರ್ಸ್ ಕೇಸ್; ಇಂದು ಬರಲಿದೆ ತೀರ್ಪು
ವಿಜಯ್ ಸೇತುಪತಿ ಅಭಿನಯದ ಮಹಾರಾಜ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಪ್ರದೀಪ್ ಕೂಡ ಒಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ವೇಳೆ ನಟನ ಸಾವು ಮಹಾರಾಜ ಚಿತ್ರತಂಡ ಮತ್ತು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ