Crime News : ಸಹೋದರನನ್ನು ಬರ್ಬರವಾಗಿ ಕೊಲೆ ಮಾಡಿ ನಂತರ ಆತನ ಕಣ್ಣನ್ನು ತಿಂದು ಹಾಕಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಅಮೆರಿಕದ ಪ್ರಿನ್ಸ್‌ಟನ್‌ನಲ್ಲಿರುವ ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಫುಟ್ಬಾಲ್ ಆಟಗಾರ ಮ್ಯಾಥ್ಯೂ ಹರ್ಟ್ಜೆನ್ ತನ್ನ ಸಹೋದರ ಜೋಸೆಫ್ ಹರ್ಟ್ಜೆನ್ ನನ್ನು ಕೊಲೆ ಮಾಡಿದ್ದಾನೆ. ಅಲ್ಲದೆ, ಸಾಕು ಬೆಕ್ಕನ್ನು ಸಹ ಸುಟ್ಟು ಹಾಕಿದ್ದಾನೆ..
ಈ ಘಟನೆ ಫೆಬ್ರವರಿ 22 ರಂದು ನಡೆದಿದೆ. ಘಟನಾ ಸ್ಥಳದಲ್ಲೇ ಪೊಲೀಸರು ಆರೋಪಿ ಮ್ಯಾಥ್ಯೂನನ್ನು ಬಂಧಿಸಿದ್ದಾರೆ.. ಮ್ಯಾಥ್ಯೂ ಬ್ಲೇಡ್ ಮತ್ತು ಗಾಲ್ಫ್ ಕ್ಲಬ್ ಬಳಸಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.. ಕೊಲೆಯಾದ ಸಹೋದರನ ಕಣ್ಣನ್ನು ತಿನ್ನಲು ಚಾಕು ಬಳಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಪೈರೇಟ್ಸ್ ಆಫ್ ದಿ ಕೆರಿಬಿಯನ್ 6 ನಲ್ಲಿ ಜಾನಿ ಡೆಪ್..!? 8 ವರ್ಷಗಳ ನಂತರ ತೆರೆ ಮೇಲೆ ಜ್ಯಾಕ್ ಸ್ಪ್ಯಾರೋ
ಕೊಲೆಗೆ ತಿಂಗಳುಗಳ ಮೊದಲು ಮ್ಯಾಥ್ಯೂ ಫೇಸ್‌ಬುಕ್‌ನಲ್ಲಿ ವಿಚಿತ್ರ ಕವಿತೆಯನ್ನು ಪೋಸ್ಟ್ ಮಾಡಿದ್ದ. ಈ ಕವಿತೆಯು ಸಹೋದರನನ್ನು ಕೊಲ್ಲು ರೀತಿಯ ವಿಧಾನವನ್ನು ವಿವರಿಸುತ್ತದೆ. "ಚಾಕುಗಳು ಹರಿತವಾಗುವುದನ್ನು ನಾನು ನೋಡಬಲ್ಲೆ. ಅವನ ಕಣ್ಣುಗಳಿಂದ ರಕ್ತ ತೊಟ್ಟಿಕ್ಕಿತು.. ಅಂತ ಬಹಳ ಕ್ರೌರ್ಯವಾಗಿ ಮ್ಯಾಥ್ಯೂ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದ..
ಕೊಲೆಯಾದ ಜೋಸೆಫ್ ಹರ್ಟ್ಜೆನ್ ಆಸ್ತಿ ನಿರ್ವಹಣಾ ಸಂಸ್ಥೆ ಲೊಕಸ್ಟ್ ಪಾಯಿಂಟ್ ಕ್ಯಾಪಿಟಲ್‌ನ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು. ಇದಲ್ಲದೆ, ಅವರು ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಮಾಜಿ ಫುಟ್ಬಾಲ್ ಆಟಗಾರರೂ ಆಗಿದ್ದರು. ಈ ಮಧ್ಯ 2017 ರಲ್ಲಿ ಮ್ಯಾಥ್ಯೂ ಹರ್ಟ್ಜೆನ್ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಾಗಿತ್ತು. ಆತನಿಗೆ ಬೇರೆ ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಂತಹ ಕ್ರೂರ ಹತ್ಯೆಗೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಪ್ರಕರಣದ ತನಿಖೆ ಮುಂದುವರೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.