Traffic Rules ಫಾಲೋ ಮಾಡು ಅಂದಿದ್ದಕೆ ಅ*ಶ್ಲೀಲ ಸನ್ನೆ ಮಾಡಿ ಕಾರು ಚಾಲಕ ಕಿರಿಕ್..! ವಿಡಿಯೋ ವೈರಲ್... ದೂರು ದಾಖಲು

Bengaluru News: ಫೆಬ್ರವರಿ 26ರ ಸಂಜೆ 4 ಗಂಟೆಯ ಸುಮಾರಿಗೆ  ಗೋಪಾಲನ್ ಮಾಲ್ ಬಳಿ ಈ ಘಟನೆ ನಡೆದಿದೆ. 

Written by - Yashaswini V | Last Updated : Feb 27, 2025, 02:23 PM IST
  • ಅಶ್ಲೀಲ ಸನ್ನೆ ಮಾಡಿ ಕಾರು ಚಾಲಕ ಕಿರಿಕ್
  • ಅಕ್ಷತಾ ರವಿಕುಮಾರ್ ಗೆ ಅಶ್ಲೀಲ ಸಿಂಬಲ್ ತೋರಿಸಿದ ಕಾರು ಚಾಲಕ
  • ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷತಾ ರವಿಕುಮಾರ್
Traffic Rules ಫಾಲೋ ಮಾಡು ಅಂದಿದ್ದಕೆ ಅ*ಶ್ಲೀಲ ಸನ್ನೆ ಮಾಡಿ ಕಾರು ಚಾಲಕ ಕಿರಿಕ್..! ವಿಡಿಯೋ ವೈರಲ್... ದೂರು ದಾಖಲು  title=

Bengaluru News Viral Video: ಜಗತ್ತು ಮುಂದುವರೆದಂತೆ ಮನುಷ್ಯ ದಿನೇ ದಿನೇ ಬುದ್ಧಿ ಮಾತನ್ನು ಕೇಳುವುದು ಬಿಟ್ಟಿದ್ದಾನೆ. ಮನಸ್ಸಿಗೆ ಬಂದಂತೆ ಬೇಕಾಬಿಟ್ಟಿಯಾಗಿ ಆಡುವ ಲಗಾಮಿಲ್ಲದ ಹುಚ್ಚುಕುದುರೆಯಂತೆ ಆಗಿಬಿಟ್ಟಿದ್ದಾನೆ. ಜೀವನದಲ್ಲಿ ಒಳ್ಳೆಯದನ್ನ ಹೇಳುವರನ್ನೇ ಹೀಯಾಳಿಸುವ ಕೆಳಮಟ್ಟದ ಮನಸ್ಥಿತಿನ್ನ ಹೊಂದುತ್ತಿದ್ದಾನೆ. ಈ ರೀತಿ ಮಾನವೀಯತೆಯನ್ನ ಮರೆತಿರುವವರು ಸುತ್ತಲು ಎಷ್ಟೋ ಜನ ಇದ್ದಾರೆ. ಇನ್ನೋಬ್ಬರಿಗೆ ಮುಜುಗರ ತರಿಸುಂತೆ ಮಾಡಿ ಅನಾಗರಿಕರಂತೆ ವರ್ತಿಸುವುದೇ ಇವರ ಕೆಲಸವಾಗಿಬಿಟ್ಟಿದೆ. 
 
ಇಂಥದ್ದೇ ಒಂದು ಘಟನೆ ನಿನ್ನೆ (ಬುಧವಾರ) ಬೆಂಗಳೂರಿನಲ್ಲಿ ನಡೆದಿದೆ. ಟ್ರಾಫಿಕ್ ರೂಲ್ಸ್ ಅನುಸರಿಸುವಂತೆ ತಿಳಿಸಿದ್ದಕ್ಕೆ ಕಾರ್ ಚಾಲಕನೊಬ್ಬ ಅಶ್ಲೀಲ ಸನ್ನೆ ಮಾಡಿ ಕಿರಿಕ್ ಮಾಡಿದ್ದಾನೆ. 

ಇದನ್ನೂ ಓದಿ- ಮಕ್ಕಳಾಗದಿದ್ದಕ್ಕೆ ಅನಾಥ, ಅಂಗವಿಕಲ ಮಕ್ಕಳನ್ನು ದತ್ತು ಪಡೆದು ಸ್ವಂತ ಮಕ್ಕಳಂತೆ ಸಾಕುತ್ತಿರುವ ಶಿಕ್ಷಕ ದಂಪತಿ!

ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷತಾ ರವಿಕುಮಾರ್ ಅವರೊಂದಿಗೆ ಚಾಲಕನೊಬ್ಬ ಈ ರೀತಿಯಾಗಿ ಅಶ್ಲೀಲ ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದು ಸದ್ಯ ಈ ವೀಡಿಯೋ ವೈರಲ್‌ ಆಗಿದೆ. 

 ಫೆಬ್ರವರಿ 26ರ ಸಂಜೆ 4 ಗಂಟೆಯ ಸುಮಾರಿಗೆ  ಗೋಪಾಲನ್ ಮಾಲ್ ಬಳಿ ಈ ಘಟನೆ ನಡೆದಿದೆ. ಯುವಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಅಕ್ಷತಾ ರವಿಕುಮಾರ್ ರವರು ಕಾರ್ ನಲ್ಲಿ ತೆರಳುವಾಗ, ತಮ್ಮ ಮುಂದೆ ಟ್ರಾಫಿಕ್‌ ರೂಲ್ಸ್ ಫಾಲೋ ಮಾಡದೆ ಡ್ರೈವಿಂಗ್ ಮಾಡ್ತಿದ್ದ ಕಾರು ಚಾಲಕನ್ನು ನೋಡಿ ಅವನನ್ನ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಟ್ರಾಫಿಕ್ ನಿಯಮ ಅನುಸರಿಸುವಂತೆ ಬುದ್ದಿ ಹೇಳಿದ್ದಾರೆ. ಇದಕ್ಕೆ ಅಸಭ್ಯವಾಗಿ ಪ್ರತಿಕ್ರಿಯಿಸಿರುವ ಆ ಆಸಾಮಿ ಅಶ್ಲೀಲವಾಗಿ ಕೈಬೆರಳಿನಿಂದ ಸಿಂಬಲ್‌ ಮಾಡಿ ಕಿರಿಕ್ ಮಾಡಿದ್ದಾರೆ. 
  
ಇದನ್ನೂ ಓದಿ-  ಉದ್ಯೋಗಿಗಳೇ.. ಕೆಲಸದ ವೇಳೆ ಕಚೇರಿಯಲ್ಲಿ "ಸ್ವಲ್ಪ ನಿದ್ದೆ" ಮಾಡಬಹುದೇ..? ಹೈಕೋರ್ಟ್ ಮಹತ್ವದ ತೀರ್ಪು

ತಕ್ಷಣವೇ ಅಕ್ಷತಾ ರವಿಕುಮಾರ್, ಕಾರ್ ಚಾಲಕನ ಪುಂಡಾಟಿಕೆಯನ್ನ ವೀಡಿಯೋ ಮಾಡಿದ್ದಾರೆ. ಕಾರ್‌ ನಂಬರ್ ಮತ್ತು ಮಾಲೀಕನ ಮುಖ ವೀಡಿಯೊದಲ್ಲಿ ಸೆರೆಯಾಗಿದ್ದು, ಸದ್ಯ ಆರೋಪಿಯ ವಿರುದ್ದ ಚಾಮರಾಜಪೇಟ ಪೋಲಿಸ್‌ ಠಾಣೆಯಲ್ಲಿ ಎಫ್‌ಐ‌ಆರ್ ಕೂಡ ದಾಖಲಾಗಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News