ಕಿಚ್ಚ ಫ್ಯಾನ್ಸ್‌ ಗುಡ್‌ ನ್ಯೂಸ್‌ : ಫೆ.15ಕ್ಕೆ ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ ಮ್ಯಾಕ್ಸ್ ಸಿನಿಮಾ 

Max OTT Release : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬ್ಲಾಕ್ ಬಸ್ಟರ್ ಮ್ಯಾಕ್ಸ್ ಸಿನಿಮಾ ಒಟಿಟಿ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ. ಬರೀ ಒಟಿಟಿ ಮಾತ್ರವಲ್ಲ ಟಿವಿಯಲ್ಲಿಯೂ ಬರ್ತಿದೆ ಮ್ಯಾಕ್ಸ್. ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರ ಕನ್ನಡ ಮಾತ್ರವಲ್ಲದೇ, ತೆಲುಗು-ಭಾಷೆಯಲ್ಲೂ ರಿಲೀಸ್ ಆಗಿತ್ತು. ಮ್ಯಾಕ್ಸ್ ಒಟಿಟಿ ಬಿಡುಗಡೆಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಒಟಿಟಿ ಜೊತೆಗೆ ಟಿವಿಯಲ್ಲಿ ಒಂದೇ ದಿನ ಕಿಚ್ಚ ಮ್ಯಾಕ್ಸ್ ಮೆರವಣಿಗೆ ಹೊರಡುತ್ತಿದೆ.

Written by - Krishna N K | Last Updated : Feb 13, 2025, 07:16 PM IST
    • ಒಂದೇ ದಿನ ಟಿವಿ ಹಾಗೂ ಒಟಿಟಿಗೆ ಎಂಟ್ರಿ ಕೊಡ್ತಿದೆ ಕಿಚ್ಚನ ಮ್ಯಾಕ್ಸ್..
    • ಎಲ್ಲಿ ಯಾವಾಗ..? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
    • 'ಮ್ಯಾಕ್ಸ್'..ಎಲ್ಲಿ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಕಿಚ್ಚನ ಸಿನಿಮಾ?
ಕಿಚ್ಚ ಫ್ಯಾನ್ಸ್‌ ಗುಡ್‌ ನ್ಯೂಸ್‌ : ಫೆ.15ಕ್ಕೆ ಜೀ ಕನ್ನಡ ಹಾಗೂ ಜೀ5 ಒಟಿಟಿಯಲ್ಲಿ ಮ್ಯಾಕ್ಸ್ ಸಿನಿಮಾ  title=

Kiccha Sudeep max : ಮ್ಯಾಕ್ಸ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಇದೇ ತಿಂಗಳ 15ರಂದು ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಮ್ಯಾಕ್ಸ್ ಚಿತ್ರ ಬಿಡುಗಡೆಗೂ ಮುನ್ನವೇ ಜೀ ವಾಹಿನಿ ಸಿನಿಮಾದ ಹಕ್ಕುಗಳನ್ನು ಖರೀದಿ ಮಾಡಿತ್ತು. ಮ್ಯಾಕ್ಸ್ ಸಿನಿಮಾವನ್ನು ಒಟಿಟಿಯಲ್ಲಿ ನೋಡಲು ಪ್ರೇಕ್ಷಕರು ಕಾಯುತ್ತಿದ್ದರು. ಅದರಂತೆ ಚಿತ್ರತಂಡ ಫೆಬ್ರವರಿ 15ಕ್ಕೆ ಜೀ5 ಒಟಿಟಿ ಜೊತೆಗೆ ಟಿವಿಯಲ್ಲಿಯೂ ಪ್ರಸಾರ ಮಾಡುತ್ತಿದೆ. ಮ್ಯಾಕ್ಸ್ ಸಿನಿಮಾವನ್ನು ಜೀಕನ್ನಡದಲ್ಲಿ ಫೆ. 15ಕ್ಕೆ ರಾತ್ರಿ 7.50ಕ್ಕೆ ಪ್ರಸಾರವಾಗ್ತಿದ್ದು, ಅದೇ ಸಮಯದಲ್ಲಿಯೂ ಜೀ5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ,.

ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪಾತ್ರದ ಹೆಸರು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್. ಒಳ್ಳೇ ಕೆಲಸ ಮಾಡುತ್ತಿದ್ದರೂ ಪದೇ ಪದೇ ಸಸ್ಪೆಂಡ್ ಶಿಕ್ಷೆ ಅನುಭಸಿರುವ ಪೊಲೀಸ್ ಅಧಿಕಾರಿ. ಅಮಾನತಿನಲ್ಲಿದ್ದ ಅರ್ಜುನ್ ಮಹಾಕ್ಷಯ್ ಅವರನ್ನು ಹೊಸ ಪೊಲೀಸ್‌ ಸ್ಟೇಷನ್‌ಗೆ ವರ್ಗಾವಣೆ ಮಾಡಲಾಗುತ್ತೆ.

ಇದನ್ನೂ ಓದಿ:ಕಾಂಗ್ರೆಸ್ ನಾಯಕನ ಪುತ್ರಿಯ ಸೌಂದರ್ಯಕ್ಕೆ ಪಡ್ಡೆ ಹುಡುಗರು ಫಿದಾ..! ಅಬ್ಬಬ್ಬಾ.. ಫಿಟ್ನೆಸ್‌ ಅಂದ್ರೆ ಇದು ಗುರು.. ಫೋಟೋಸ್‌ ಇಲ್ಲಿವೆ..

ಆದರೆ, ಅರ್ಜುನ್ ಡ್ಯೂಟಿಗೆ ರಿಪೋರ್ಟ್ ಮಾಡಿಕೊಳ್ಳುವ ಹಿಂದಿನ ರಾತ್ರಿಯೇ ಒಂದಿಷ್ಟು ಅವಘಡಗಳು ನಡೆಯುತ್ತವೆ. ಹೀಗಾಗಿ, ಮಾರನೇ ದಿನ ಕೆಲಸಕ್ಕೆ ಜಾಯಿನ್ ಆಗಬೇಕಿದ್ದ ಮ್ಯಾಕ್ಸ್ ಹಿಂದಿನ ರಾತ್ರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಆ ಘಟನೆ ಏನು? ಈ ಪ್ರಕರಣವನ್ನು ಮ್ಯಾಕ್ಸ್ ಹೇಗೆ ತೆಗೆದುಕೊಂಡು ಹೋಗುತ್ತಾನೆ ಎಂಬುದೇ ಸಿನಿಮಾ ಕಥೆ.

'ಮ್ಯಾಕ್ಸ್' ಚಿತ್ರವನ್ನು ತಮಿಳಿನ ಕಲೈಪುಲಿ ಎಸ್ ಧಾನು ಅವರು ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುದೀಪ್ ಜೊತೆಗೆ ವರಲಕ್ಷ್ಮೀ ಶರತ್ ಕುಮಾರ್, 'ಉಗ್ರಂ' ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು, ವಿಜಯ್ ಚೆಂಡೂರು, ಶರತ್ ಲೋಹಿತಾಶ್ವ, ಸುಧಾ ಬೆಳವಾಡಿ, ತೆಲುಗು ನಟ ಸುನೀಲ್ ಮುಂತಾದವರು ನಟಿಸಿದ್ದರು. 2024ರ ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಮ್ಯಾಕ್ಸ್ ಥಿಯೇಟರ್ ನಲ್ಲಿ ಭರ್ಜರಿ ಸೌಂಡ್ ಮಾಡಿತ್ತು. ಬಾಕ್ಸಾಫೀಸ್ ನಲ್ಲಿಯೂ ಒಳ್ಳೆ ಕಲೆಕ್ಷನ್ ಮಾಡಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News