ತಂದೆಯೊಂದಿಗೆ ಲಿಪ್‌ಕಿಸ್ ಮಾಡಿ ಸಂಚಲನ ಸೃಷ್ಟಿಸಿದ ಏಕೈಕ ನಟಿ ಈಕೆ! ಇದೇ ನೋಡಿ ದುರಂತ ಅಂದ್ರೆ..

Pooja Bhatt: ತಮ್ಮ ಬೋಲ್ಡ್ ಪಾತ್ರಗಳ ಮೂಲಕ ಹೆಚ್ಚು ಸುದ್ದಿಯಲ್ಲಿದ್ದ ಈ ನಟಿ 90ರ ದಶಕದಲ್ಲಿ ಹಲವು ವಿವಾದಗಳಿಂದಾಗಿಯೂ ಸಾಕಷ್ಟು ಚರ್ಚೆಯಲ್ಲಿದ್ದರು. 

Written by - Yashaswini V | Last Updated : Feb 24, 2025, 10:58 AM IST
  • 17ನೇ ವಯಸ್ಸಿಗೆ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದ ಅತಿಲೋಕ ಸುಂದರಿ
  • ತಂದೆಗೆ ಲಿಪ್-ಟು-ಲಿಪ್ ಮುತ್ತಿಟ್ಟು ವಿವಾದಕ್ಕೆ ಸಿಲುಕಿದ್ದ ನಟಿ
  • ಆಕೆ ಮಗಳಲ್ಲದಿದ್ದರೆ ಆಕೆಯನ್ನೆ ಮದುವೆಯಾಗುತ್ತಿದ್ದೆ ಎಂದು ತಂದೆಯ ಶಾಕಿಂಗ್ ಹೇಳಿಕೆ
ತಂದೆಯೊಂದಿಗೆ ಲಿಪ್‌ಕಿಸ್ ಮಾಡಿ ಸಂಚಲನ ಸೃಷ್ಟಿಸಿದ ಏಕೈಕ ನಟಿ ಈಕೆ! ಇದೇ ನೋಡಿ ದುರಂತ ಅಂದ್ರೆ.. title=

Actress Pooja Bhatt: ಗ್ಲಾಮರ್ ಲೋಕದಲ್ಲಿ ನಟನೆ ಜೊತೆಗೆ ವಿವಾದಗಳಿಂದಾಗಿಯೂ ಕಲಾವಿದರು ಹೆಚ್ಚು ಚರ್ಚೆಯ ವಿಷಯವಾಗುತ್ತಾರೆ. ಬಾಲಿವುಡ್ ನ ಖ್ಯಾತ ನಿರ್ದೇಶಕ ಮಹೇಶ್ ಭಟ್ ಪುತ್ರಿ ನಟಿ ಪೂಜಾ ಭಟ್ ಕೂಡ ಇದಕ್ಕೆ ಹೊರತಾಗಿಲ್ಲ. 90ರ ದಶಕದಲ್ಲಿ ತಮ್ಮ ಬೋಲ್ಡ್ ನಟನೆ ಜೊತೆಗೆ ದಿಟ್ಟ, ನೇರ ನುಡಿಗೂ ಹೆಸರುವಾಸಿ ಆಗಿದ್ದ ಪೂಜಾ ಭಟ್  ತಮ್ಮ ನಟನೆಯಿಂದಾಗಿ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದರು. ಅಷ್ಟೇ ಅಲ್ಲದೆ, ಅವರ ಜೀವನದ ಕೆಲವು ಪ್ರಮುಖ ಘಟನೆಗಳಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದ ನಟಿ 'ಪೂಜಾ ಭಟ್'. 

24 ಫೆಬ್ರವರಿ 1972ರಲ್ಲಿ ಮಹೇಶ್ ಭಟ್ ಅವರ ಮೊದಲ ಪತ್ನಿ ಕಿರಣ್ ಭಟ್ ಪುತ್ರಿಯಾಗಿ ಜನಿಸಿದ ಪೂಜಾ ಭಟ್ ತಮ್ಮ 17ನೇ ವಯಸ್ಸಿಗೆ ಬಣ್ಣ ಹಚ್ಚಲು ಆರಂಭಿಸಿದರು. ಮಹೇಶ್ ಭಟ್ ನಿರ್ದೇಶನದ 'ಡ್ಯಾಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಪೂಜಾ ಭಟ್ ಮೊದಲ ಚಿತ್ರದಲ್ಲೆ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು. 

ಡ್ಯಾಡಿ ಚಿತ್ರದ ಯಶಸ್ಸಿನ ಬೆನ್ನಲ್ಲೇ ಒಂದರ ಹಿಂದರೆ ಒಂದಂತೆ ದಿಲ್ ಹೈ ಕಿ ಮಾಂತ ನಾಹಿ, ಸಡಕ್, ಜಖ್ಮ್, ಬಾರ್ಡರ್ ನಂತಹ ಹಲವು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರದಲ್ಲಿ ಟಾಪ್ ಬಾಲಿವುಡ್ ನಟಿಯರಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪೂಜಾ ಭಟ್ ಯಶಸ್ಸು ಪಡೆದಷ್ಟೇ ವೇಗವಾಗಿ ವಿವಾದಗಳಲ್ಲಿಯೂ ಸಿಲುಕಿದರು. 

ಇದನ್ನೂ ಓದಿ- ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ತಂಗಿ ಕೂಡ ಟಾಪ್ ಹೀರೋಯಿನ್... ಮೊದಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗರಿ... ಯಾರಾಕೆ..!

ತಂದೆಗೆ ಲಿಪ್-ಟು-ಲಿಪ್ ಮುತ್ತಿಟ್ಟ ಪೂಜಾ ಭಟ್ ವಿವಾದಕ್ಕೆ ಸಿಲುಕಿದರು. ಅಷ್ಟಕ್ಕೂ ಪೂಜಾ ಭಟ್ ಈ ರೀತಿಯ ವಿವಾದದಲ್ಲಿ ಸಿಲುಕಿದ್ದು ಸಿನಿಮಾಗಾಗಿ ಅಲ್ಲ ನಿಯತಕಾಲಿಕೆ ಒಂದಕ್ಕೆ ಫೋಟೋಶೂಟ್ ಮಾಡಿಸುವ ಸಲುವಾಗಿ.... ಇವರ ಈ ಫೋಟೋಶೂಟ್ ಸಮಾಜದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿ, ವ್ಯಾಪಕ ಟೀಕೆಗೂ ಗುರಿಯಾಗಿತ್ತು. 

ಒಂದೆಡೆ ತಂದೆಯೊಂದಿಗೆ ಲಿಪ್‌ಕಿಸ್ ಫೋಟೋಶೂಟ್ ಮಾಡಿಸಿ ಪೂಜಾ ಭಟ್ ವಿವಾದದಲ್ಲಿ ಸಿಲುಕಿದರೆ, ಇದಕ್ಕೆ ಪೂರಕವಾಗಿ ತಂದೆ ಮಹೇಶ್ ಭಟ್ ಒಂದೊಮ್ಮೆ ಪೂಜಾ ನನ್ನ ಮಗಳಾಗಿರದಿದ್ದರೆ  ಆಕೆಯನ್ನು ಮದುವೆಯಾಗುತ್ತಿದ್ದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು. 

ಈ ರೀತಿಯ ವಿವಾದಗಳಿಂದಾಗಿ ಸುತ್ತುವರೆದಿದ್ದ ನಟಿ ಪೂಜಾ ಭಟ್ ಕುಡಿತದ ಚಟಕ್ಕೆ ಬಲಿಯಾಗಿದ್ದರು. ಯೌವನದಲ್ಲಿ ಮದ್ಯ ವ್ಯಸನಿಯಾಗಿದ್ದರಿಂದ ಇದು ಅವರ ಜೀವನದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವನ್ನು ಉಂಟುಮಾಡಿತ್ತು. ಸಾವಿನ ಅಂಚಿನಲ್ಲಿದ್ದ ಆಕೆ ತಮ್ಮ ತಂದೆ ಸಲಹೆ ಮೇರೆಗೆ 45ನೇ ವಯಸ್ಸಿನಲ್ಲಿ ಮದ್ಯಪಾನದಿಂದ ದೂರವಿರಳು ನಿರ್ಧರಿಸಿದರು. 

ಇದನ್ನೂ ಓದಿ- ಶಾರುಖ್ ಖಾನ್ ಐಷಾರಾಮಿ 'ಮನ್ನತ್' ಬಿಟ್ಟು ಬಾಡಿಗೆ ಮನೆಯಲ್ಲಿರುವುದೇಕೆ..! ಅದರ ತಿಂಗಳ ಬಾಡಿಗೆ ಕೇಳಿದ್ರೆ ಆಗ್ತೀರಾ ಶಾಕ್!

ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರೂ ಸಿನಿಮಾದಲ್ಲಿ ಅದ್ಭುತ ಜರ್ನಿ ಹೊಂದಿರುವ ಪೂಜಾ ಭಟ್ ನಟನೆ ಬಳಿಕ ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News