Actress Urvashi life : ನಟಿ ಊರ್ವಶಿ ಅವರ ನಿಜವಾದ ಹೆಸರು ಕವಿತಾ ಮನೋರಂಜನಿ. ಚಿತ್ರಗಳಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದ ನಂತರ ಕವಿತಾ ತಮ್ಮ ಹೆಸರನ್ನು ಊರ್ವಶಿ ಎಂದು ಬದಲಾಯಿಸಿಕೊಂಡರು. 80 ಮತ್ತು 90ರ ದಶಕದ ಬಹು ಬೇಡಿಕೆಯ ನಟಿಯರಲ್ಲಿ ಇವರೂ ಒಬ್ಬರು. ಬಾಲನಟಿಯಾಗಿ ಮತ್ತು ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ಊರ್ವಶಿ "ಎನ್ ಅಮ್ಮು ನಿಂದೆ ತುಳಸಿ ಅವರೂದೆ ಚಕ್ಕಿ" ಚಿತ್ರದದ ಮೂಲಕ ನಾಯಕ ನಟಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಮಲಯಾಳಂ ನಿರ್ದೇಶಕ ಬಾಲಚಂದ್ರ ಮೆನನ್ ನಿರ್ದೇಶನದ ಈ ಚಿತ್ರ.. ಈ ಸಿನಿಮಾದಲ್ಲಿ ತುಳಸಿ ಎಂಬ ಮಾತ್ರ ಮಾಡಿದ್ದಾರೆ..
ಇದರ ಬೆನ್ನಲ್ಲೇ ಮಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯರಾದ ಊರ್ವಶಿ ಅವರಿಗೆ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದವು. ಇದರ ನಂತರ ಅವರು ಮುಂತನೈ ಮುಡಿಚು ಚಿತ್ರದ ಮೂಲಕ ಕಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರದ ಅನುಭವದ ಕುರಿತು ಮಾತನಾಡಿರುವ ವಿಡಿಯೋ ಆನ್ಲೈನ್ನಲ್ಲಿ ಸದ್ಯ ವೈರಲ್ ಆಗಿದೆ..
ತಮಿಳಿನಲ್ಲಿ ನಟಿ ಊರ್ವಶಿ ಅವರ ಚೊಚ್ಚಲ ಚಿತ್ರ ಮುಂತನೈ ಮುಡಿಚು. ಚಿತ್ರವನ್ನು ಕೆ.ಭಾಗ್ಯರಾಜ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನಟಿಸುವ ಬಗ್ಗೆ ಊರ್ವಶಿ ಹಂಚಿಕೊಂಡಿದ್ದಾರೆ “ಈ ಚಿತ್ರದಲ್ಲಿ ನಟಿಸಲು ನಾನು ಆರಂಭದಲ್ಲಿ ಆಯ್ಕೆಯಾಗಿರಲಿಲ್ಲ. ನನ್ನ ತಂಗಿ ಕಲ್ಪನಾ ನಟಿಸಬೇಕಿತ್ತು. ಅವಳಿಗೆ ನಿರಂತರ ಶೂಟಿಂಗ್ ಇದ್ದ ಕಾರಣ ಈ ಚಿತ್ರದಲ್ಲಿ ನಟಿಸುವಂತೆ ನನಗೆ ಶಿಫಾರಸು ಮಾಡಿದರು. ನನಗೆ ಮೊದಲು ಹೇಗೆ ನಟಿಸಬೇಕು ಅಂತ ಗೊತ್ತಿರಲಿಲ್ಲ. ಭಾಗ್ಯರಾಜ್ ಸರ್ ಅವರೇ ಸೀರೆ ಕಟ್ಟಿ ಈ ಮುಂತನೈ ಮುಡಿಚು ಚಿತ್ರದಲ್ಲಿ ನಟಿಸುವಂತೆ ಹೇಳಿದ್ದರು. ಈ ಸಿನಿಮಾದಲ್ಲಿ ನಟಿಸುವಾಗ ಯಾರಾದರೂ ಗದರಿಸಿದರೆ ಸಿನಿಮಾವನ್ನು ಅರ್ಧಕ್ಕೆ ಬಿಡಬಹುದು ಎಂದು ಮೊದಲು ಯೋಚಿಸುತ್ತಿದ್ದೆ. ಆದರೆ ಚಿತ್ರದಲ್ಲಿ ನಟಿಸುವಾಗ ಭಾಗ್ಯರಾಜ್ ಸರ್ ನನ್ನನ್ನು ನೋಡುವ ರೀತಿ ಇಷ್ಟವಾಯಿತು.
ಈಗ ಎಲ್ಲಾ ನಟಿಯರೂ ನಟಿಸಲು ಬರುವ ಮುನ್ನ ಹೋಂ ವರ್ಕ್ ಮಾಡುವಂತೆ ಎಲ್ಲವನ್ನೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಾನು ಹಾಗಲ್ಲ, ಸ್ಕ್ರಿಪ್ಟ್ ಕೂಡ ಸರಿಯಾಗಿ ಓದುವುದಿಲ್ಲ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಊರ್ವಶಿ ಇದುವರೆಗೆ 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂದಿಗೂ ಅನೇಕ ಚಿತ್ರಗಳಲ್ಲಿ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮಿಳಿನಲ್ಲಿ ಅವರ ಕೊನೆಯ ಬಿಡುಗಡೆ ಚಿತ್ರ ಜೆ.ಬೇಬಿ, ಇದರಲ್ಲಿ ಅವರು ತಾಯಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಗುಸ್ಬೈಥಿಯಾ ಎಂಬ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.