ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ಹಾಗೆ ಚೀನಾದಲ್ಲಿ ಜೀವ ತಾಳೋ ವೈರಸ್ಗಳು ಭಾರತೀಯರನ್ನ ಬೆನ್ನು ಬಿಡದೆ ಕಾಡ್ತಿವೆ. 2020 ಜನವರಿ ವೇಳೆಗೆ ಕಾಣಿಸಿಕೊಂಡ ಕೊರೊನಾ ವೈರಸ್ ಮೂರು ವರ್ಷ ಮರಣ ಮೃದಂಗ ಭಾರಿಸಿ ಲಕ್ಷಾಂತರ ಜನರ ಬದುಕನ್ನ ಹಿಂಡಿಹಿಪ್ಪೆ ಮಾಡಿತ್ತು. ಇದೀಗ ವೈರಸ್ ಸೃಷ್ಟಿಕರ್ತ ಚೀನಾದಿಂದಲೇ ಹೊಸ HMPV ವೈರಸ್ ಹರಡತೊಡಗಿದೆ. ಚೀನಾವನ್ನ ದಾಟಿ ಇದು ಬೆಂಗಳೂರಿನ ಹಸಿಗೂಸುಗಳಲ್ಲಿ ಕಾಣಿಸುವ ಮೂಲಕ ಜನರನ್ನು ಬೆಚ್ಚಿಬೀಳಿಸಿದೆ.
ಸೋಂಕು ತಡೆಯ ಕ್ರಮವಾಗಿ ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಪುನಃ ಪ್ರಾರಂಭಿಸುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಆರೋಗ್ಯ ಸಚಿವರು ಸಭೆ ನಡೆಸುತ್ತಿದ್ದು, ರಾಜ್ಯದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
HMPV Virus: ಸದ್ಯ ಚೀನಾದಲ್ಲಿ ವಿನಾಶ ಉಂಟು ಮಾಡುತ್ತಿರುವ ಹ್ಯೂಮನ್ ಮೆಟಾಪ್ನ್ಯೂಮೊವೈರಸ್ (ಎಚ್ಎಂಪಿವಿ) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಪತ್ತೆಯಾಗಿದೆ. ಅದರಲ್ಲೂ ವರ್ಷದೊಳಗಿನ ಇಬ್ಬರು ಮಕ್ಕಳಲ್ಲಿ ಈ ವೈರಸ್ ಪತ್ತೆಯಾಗಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
China Virus: ಕೋವಿಡ್ ಬಳಿಕ ಮತ್ತೊಂದು ವೈರಸ್ ಕಾಣಿಸಿಕೊಂಡಿದ್ದು, ಚೀನಾದಲ್ಲಿ ಮತ್ತೆ ವೈರಸ್ ನಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದಾರೆ. ಈ ಸೋಂಕು ಚೀನಾದಲ್ಲಿ ವಿನಾಶವನ್ನು ಸೃಷ್ಟಿಸುತ್ತಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.