ಅಪ್ಪಟ ʼಅಪ್ಪುʼ ಅಭಿಮಾನಿ, ತಂದೆ-ತಾಯಿಯ ಮುದ್ದಿನ ಮಗಳು..! ಯಾರದ್ದೋ ತಪ್ಪಿಗೆ ಹಾರಿಹೋಯ್ತು ಪುಟ್ಟ ನೃತ್ಯಗಾರ್ತಿ ಜೀವ..

ಅಪ್ಪಟ ಅಪ್ಪು ಅಭಿಮಾನಿಯಾಗಿದ್ದ ಈ ಬಾಲಕಿ ಡ್ಯಾನ್ಸರ್ ಆಗುವ ಕನಸು ಕಂಡಿದ್ದಳು. ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಮಗಳ ಮೇಲೆ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು.. ಆದ್ರೆ ಆಕೆಯದ್ದಲ್ಲದ್ದ ತಪ್ಪಿಗೆ ಇಂದು ಸಾವಿನ ಮನೆ ಸೇರಿದ್ದಾರೆ.. ತಂದೆ ದುಃಖದ ಕಡಲಲ್ಲಿ ಮುಳುಗಿದ್ದಾನೆ.

Last Updated : Jan 4, 2025, 09:52 PM IST
    • ಸಾರವೆ ಮರ ಬಿದ್ದು 'ಅಪ್ಪು' ಅಭಿಮಾನಿ ಸಾವು
    • ರಸ್ತೆಯಲ್ಲಿಯೇ ಬಿದ್ದು ಪ್ರಾಣ ಬಿಟ್ಟ ಸುಂದರಿ
    • ಸ್ಟಾರ್‌ಗಳೇ ನಾಚುವಂತೆ ಡ್ಯಾನ್ಸ್ ಮಾಡುತ್ತಿದ್ದ ಬಾಲಕಿ
ಅಪ್ಪಟ ʼಅಪ್ಪುʼ ಅಭಿಮಾನಿ, ತಂದೆ-ತಾಯಿಯ ಮುದ್ದಿನ ಮಗಳು..! ಯಾರದ್ದೋ ತಪ್ಪಿಗೆ ಹಾರಿಹೋಯ್ತು ಪುಟ್ಟ ನೃತ್ಯಗಾರ್ತಿ ಜೀವ.. title=

ಬೆಂಗಳೂರು : ಸಖತ್ ಸ್ಟೆಪ್ಸ್.. ಸಿನಿಮಾ ಸ್ಟಾರ್‌ಗಳೇ ನಾಚುವಂತೆ ಡ್ಯಾನ್ಸ್ ಮಾಡುತ್ತಿದ್ದ ಬಾಲಕಿ ಅಪ್ಪಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದಳು. ಈ ಮುದ್ದು ಮುಖದ ಬಾಲಕಿ ಹೆಸರು ತೇಜಸ್ವಿನಿ. ಮಗಳು ಒಳ್ಳೆ ಡ್ಯಾನ್ಸರ್ ಆಗ್ತಾಳೆ ಅಂತಾ ಈಕೆಯ ತಂದೆ ತಾಯಿ ಬೆಟ್ಟದಷ್ಟು ಕನಸು ಕಟ್ಟಿಕೊಂಡಿದ್ದರು. ಅಪ್ಪು ಡ್ಯಾನ್ಸ್ ಕ್ಲಾಸ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಈ ಪುಟ್ಟಿ, ಇವತ್ತು ಶಾಲೆ ಮುಗಿಸಿ ಬರುತ್ತಿದ್ದಾಗ ವಿಧಿಯ ಆಟಕ್ಕೆ ಜೀವನದ ಪಯಣವನ್ನೇ ಮುಗಿಸಿದ್ದಾಳೆ..

ಹೌದು.. ಇವತ್ತು ಮಧ್ಯಾಹ್ನ 12.45 ರ ಸಮಯ.. ಶಾಲೆಗೆ ಹೋಗಿದ್ದ 15 ವರ್ಷದ ಬಾಲಕಿ ತೇಜಸ್ವಿ ಬಗುಡಿ ಮೆಟ್ರೋ ಸ್ಟೇಷನ್ ಪಕ್ಕದಲ್ಲೇ ಇದ್ದ ಸರ್ವಿಸ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು.. ಆದ್ರೆ ಆಕೆಗೆ ತನ್ನ ಸಾವು ಕಣ್ಣ ಮುಂದೆಯೇ ಇದೇ ಅನ್ನುವ ಅಂದಾಜು ಕೂಡ ಇರಲಿಲ್ಲ.. 

ಇದನ್ನೂ ಓದಿ:ನನಗೆ ಎನೂ ಗೊತ್ತಿರಲಿಲ್ಲ.. ಎಲ್ಲಾ ಕಲಿಸಿದ್ದು ಅವರೇ..! ʼನಾನು ನನ್ನ ಹೆಂಡ್ತಿʼ ನಟಿ ಹೇಳಿಕೆ ವೈರಲ್‌

ರಸ್ತೆ ಪಕ್ಕದಲ್ಲೇ ಇದ್ದ ಜಾಗದಲ್ಲಿ ಆರಂತಸ್ತಿನ ಕಟ್ಟಡದ ಕೆಲಸ ನಡಿತಾ ಇತ್ತು. ಆದ್ರೆ ಅದಕ್ಕೆ ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ. ಕಾಮಗಾರಿ ನಡಿತಾ ಇದ್ರು ಟಾರ್ಪಲ್‌ ಕಟ್ಟಿರಲಿಲ್ಲ. ಇದರಿಂದಾಗಿ 4ನೇ ಅಂತಸ್ತಿನಿಂದ ಸಾರವೆ ಮರದ ತುಂಡು ಸೀದಾ ಸೀದಾ ಬಾಲಕಿ ಮೇಲೆ ಬಿದ್ದಿದೆ. ಗಾಯಗೊಂಡ ಬಾಲಕಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಇನ್ನೂ ಬಾಲಕಿ ಮೇಲೆ ತೇಜಸ್ವಿನಿ ಕಳೆದುಕೊಂಡ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ದನ್ನ ನೊಡಿದ್ರೆ ಮನ ಕಲಕುವಂತಿತ್ತು. ಘಟನೆ ಸಂಬಂಧ ಮಾಲೀಕನ ನಿರ್ಲಕ್ಷ್ಯ ಹಿನ್ನಲೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ತೇಜಸ್ವಿನಿ ಡ್ಯಾನ್ಸರ್ ಆಗುವ ಕನಸು ಕಂಡಿದ್ದು ಅರ್ಧಕ್ಕೆ ಕಮರಿರೋದು ಕುಟುಂಬಸ್ಥರನ್ನ ನೋವಿನ‌ ಕಡಲಿಗೆ ನೂಕಿದೆ..

ಇದನ್ನೂ ಓದಿ:ಬಿಗ್‌ಬಾಸ್‌ ಮನೆ ಮಂದಿಗೆ ಬಿಗ್‌ಶಾಕ್..‌ ಟೈಟಲ್ ವಿನ್ನರ್ ಕನಸು ಕಂಡಿದ್ದ ಇಬ್ಬರು ಸ್ಪರ್ಧಿಗಳೇ ಏಕಾಏಕಿ ಎಲಿಮಿನೇಟ್!‌

ಸದ್ಯ ತೇಜಸ್ವಿನಿ ಮೃತದೇಹ ಕಿಮ್ಸ್ ಆಸ್ಪತ್ರೆ ಶವಾಗಾರದಲ್ಲಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರವಾಗಲಿದೆ. ಅದೇನೆ ಹೇಳಿ ಯಾರದ್ದೋ ನಿರ್ಲಕ್ಷ್ಯ ಬಾಲಕಿ ಸಾವಿಗೆ ಕಾರಣವಾಗಿರೋದು ಮಾತ್ರ ನಿಜಕ್ಕೂ ವಿಪರ್ಯಾಸ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News