ಮಧ್ಯರಾತ್ರಿ ಐಶ್ವರ್ಯ ರೈ ಮನೆ ಮುಂದೆ ಸಲ್ಮಾನ್‌ ಖಾನ್‌ ಗಲಾಟೆ ಮಾಡಿದ್ರಾ! FIR ಕೂಡ ದಾಖಲಾಗಿತ್ತಾ!? ಸೋಮಿ ಅಲಿ ಬಿಚ್ಚಿಟ್ಟ ಸತ್ಯವೇನು?

Somy Ali On Salman Khan : ಐಶ್ವರ್ಯ ರೈ ಅವರ ಅಪಾರ್ಟ್‌ಮೆಂಟ್‌ನ ಹೊರಗೆ ಮಧ್ಯರಾತ್ರಿ 3 ಗಂಟೆಗೆ ಸಲ್ಮಾನ್ ಖಾನ್‌ ಗಲಾಟೆ ಮಾಡಿದ್ದರೆಂಬ ಆರೋಪದ ಬಗ್ಗೆ ಖ್ಯಾತ ನಟಿಯೊಬ್ಬರು ಮಾತನಾಡಿದ್ದಾರೆ.

Written by - Chetana Devarmani | Last Updated : Jan 5, 2025, 02:44 PM IST
  • ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ
  • ಸಲ್ಮಾನ್ ಖಾನ್ ಬಗ್ಗೆ ಸೋಮಿ ಅಲಿ ಹೇಳಿಕೆ
  • ಐಶ್ವರ್ಯ ರೈ ಬಗ್ಗೆ ಸೋಮಿ ಅಲಿ ಹೇಳಿಕೆ
ಮಧ್ಯರಾತ್ರಿ ಐಶ್ವರ್ಯ ರೈ ಮನೆ ಮುಂದೆ ಸಲ್ಮಾನ್‌ ಖಾನ್‌ ಗಲಾಟೆ ಮಾಡಿದ್ರಾ! FIR ಕೂಡ ದಾಖಲಾಗಿತ್ತಾ!? ಸೋಮಿ ಅಲಿ ಬಿಚ್ಚಿಟ್ಟ ಸತ್ಯವೇನು? title=
Aishwarya Rai Salman Khan

Aishwarya Rai Salman Khan : ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಅವರ ಪ್ರೇಮ ಸಂಬಂಧವು ಬಾಲಿವುಡ್‌ನ ಅತ್ಯಂತ ಸೆನ್ಸೇಷನಲ್‌ ವಿವಾದಗಳಲ್ಲಿ ಒಂದಾಗಿದೆ. ಸಂಜಯ್ ಲೀಲಾ ಬನ್ಸಾಲಿಯವರ ಹಮ್ ದಿಲ್ ದೇ ಚುಕೆ ಸನಮ್‌ ಸಿನಿಮಾ ಸೆಟ್‌ಗಳಲ್ಲಿ ಅರಳಿದ ಪ್ರೀತಿ ಎರಡು ವರ್ಷಗಳಲ್ಲಿ ಕೊನೆಗೊಂಡಿತು. 

ಐಶ್ವರ್ಯ ಸಲ್ಮಾನ್ ಜೊತೆಗಿನ ಸಂಬಂಧದಲ್ಲಿ ಮಾನಸಿಕ ಮತ್ತು ಭಾವನಾತ್ಮಕವಾಗಿ ನೋವನ್ನು ಎದುರಿಸಿದ್ದಾರೆ ಎಂದು ಅನೇಕರು ಹೇಳುತ್ತಾರೆ ಎಂಬ ವರದಿಗಳಿವೆ. ಸಲ್ಮಾನ್ ಖಾನ್‌ ಜೊತೆಗಿನ ಮದುವೆಗೆ ಐಶ್ವರ್ಯ ರೈ ಪೋಷಕರು ಒಪ್ಪಲಿಲ್ಲ. ಆಗ ಸಲ್ಮಾನ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದರೆಂಬ ಬಹುದೊಡ್ಡ ಆರೋಪವೊಂದಿದೆ. 

ಮಧ್ಯರಾತ್ರಿ 3 ಗಂಟೆ ಹೊತ್ತಿಗೆ ಐಶ್ವರ್ಯ ರೈ ಅವರ ಅಪಾರ್ಟ್‌ಮೆಂಟ್‌ನ ಹೊರಗೆ ಸಲ್ಮಾನ್ ಗಲಾಟೆ ಮಾಡಿದ್ದರಂತೆ ಎಂದು ಹೇಳಲಾಗುತ್ತದೆ. ಆಕೆಯ ಪೋಷಕರು ಪೊಲೀಸ್ ದೂರು ದಾಖಲಿಸಿದ್ದರಂತೆ ಎಂದು ನಟಿ ಸೋಮಿ ಅಲಿ ಹೇಳಿದ್ದಾರೆ. 

ಇದನ್ನೂ ಓದಿ: "ನನಗೆ ಸಿಎಂ ಆಗ್ಬೇಕು ಎಂಬ ಆಸೆ ಇದೆ.." ರಾಜಕೀಯಕ್ಕೆ ಎಂಟ್ರಿ ಕೊಡುವ ಸೂಚನೆ ಕೊಟ್ಟ ಖ್ಯಾತ ನಟಿ..!  

ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಮತ್ತು ನಟಿ ಸೋಮಿ ಅಲಿ ಈ ಬಗ್ಗೆ ಹೇಳಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಐಶ್ವರ್ಯ ರೈ ಅವರ ನಿರ್ಧಾರವನ್ನು ಸೋಮಿ ಅಲಿ ಶ್ಲಾಘಿಸಿದ್ದಾರೆ. ಸಲ್ಮಾನ್ ಖಾನ್‌ ವಿರುದ್ಧ ಎಫ್‌ಐಆರ್ ದಾಖಲಿಸಿದ ಐಶ್ವರ್ಯ ರೈ ಅವರ ಧೈರ್ಯ ಮೆಚ್ಚಬೇಕು ಎಂದು ಸಂದರ್ಶನವೊಂದರಲ್ಲಿ ಸೋಮಿ ಅಲಿ ಹೇಳಿದ್ದಾರೆ.  

ಸಲ್ಮಾನ್ ಜೊತೆ ಡೇಟಿಂಗ್‌ ಮಾಡುತ್ತಿದ್ದಾಗ ತನ್ನನ್ನು ದೈಹಿಕವಾಗಿ ಹಿಂಸಿಸಿದ್ದಾರೆ ಎಂದು ಆರೋಪಿಸಿ ಸೋಮಿ ತನ್ನ ಸ್ವಂತ ಅನುಭವವನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಅವರ ವರ್ತನೆ ನೆನಪಿಸಿಕೊಂಡ ಸೋಮಿ ಅಲಿ, "ನಾನು ನಿನ್ನ ಬಗ್ಗೆ ಕಾಳಜಿ ವಹಿಸುವ ಕಾರಣ ನಾನು ನಿನ್ನನ್ನು ಹೊಡೆದಿದ್ದೇನೆ" ಎಂದು ಅವರು ನನಗೆ ಹೇಳುತ್ತಿದ್ದರು. ಯಾರನ್ನಾದರೂ ನೋಯಿಸಲು ಇದು ಸರಿಯಾದ ಕಾರಣವೇ?” ಎಂದಿದ್ದಾರೆ.

ಸೋಮಿ ಮೊದಲು, ಸಲ್ಮಾನ್ ಸಂಗೀತಾ ಬಿಜಲಾನಿ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು. ಈ ಜೋಡಿಯು ಮದುವೆಯ ಹೊಸ್ತಿಲಲ್ಲಿತ್ತು, ಮದುವೆ ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಸೋಮಿಯೊಂದಿಗೆ ಸಲ್ಮಾನ್‌ ರೆಡ್‌ ಹ್ಯಾಂಡ್‌ ಆಗಿ ಸಂಗೀತಾ ಬಳಿ ಸಿಕ್ಕಿಬಿದ್ದರು. ಆ ಬಳಿಕ ಸಂಗೀತಾ ಬ್ರೇಕಪ್‌ ಮಾಡಿಕೊಂಡರು. (NOTE: ಇದು ವರದಿಯನ್ನು ಆಧರಿಸಿ ಬರೆದ ಸುದ್ದಿಯಾಗಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.)

ಇದನ್ನೂ ಓದಿ: ಕಪ್‌ ಗೆಲ್ಲೋಕೆ Bigg Boss ಗೆ ಬಂದಿಲ್ಲ, ಮದ್ಯಪಾನ ಬಿಡೋಕೆ ಬಂದಿದ್ದೇನೆ..!

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News