Sri Sri Ravishankar: ಗುರುದೇವ್ ಶ್ರೀ ಶ್ರೀ ರವಿಶಂಕರರೊಡನೆ ಜಗತ್ತಿನ ಸಾವಿರಾರು ಸಾಧಕರು ವಿಶ್ವಧ್ಯಾನದಲ್ಲಿ ಪಾಲ್ಗೊಂಡರು ಮತ್ತು ಅನೇಕ ಮಿಲಿಯನ್ ಜನರು ಆನ್ಲೈನ್ ನ ಮೂಲಕ ಪಾಲ್ಗೊಂಡರು. 250 ಟನ್ಗಳಷ್ಟು ಆಹಾರ ಮತ್ತಿನ್ನಿತರ ಅವಶ್ಯಕ ವಸ್ತುಗಳನ್ನು ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ವಯಂಸೇವಕರು ವಿತರಿಸಿದರು.
ಪ್ರಯಾಗರಾಜ್, ಫೆಬ್ರವರಿ 5, 2025: ಮಹಾಕುಂಭಮೇಳವು ಆಧ್ಯಾತ್ಮಿಕ ಪರಂಪರೆಗಳ ಮತ್ತು ಸಂಸ್ಕೃತಿಯ ಭವ್ಯ ಸಂಗಮವಾಗಿದ್ದು, ಈ ವರ್ಷ ಅದಕ್ಕೆ ಮತ್ತೊಂದು ವಿಶೇಷವನ್ನು ಸೇರ್ಪಡಿಸಲಾಯಿತು. ಆರ್ಟ್ ಆಫ್ ಲಿವಿಂಗ್ ಆಯೋಜಿಸಿದ್ದ ,"ಮಹಾಕುಂಭದಿಂದ ಗುರುದೇವರೊಡನೆ ಧ್ಯಾನ ಮಾಡಿ" ಕಾರ್ಯಕ್ರಮದಲ್ಲಿ ಅನೇಕ ಸಾವಿರ ಸಾಧಕರು ಭಾಗವಹಿಸಿದರು.
ಮಂಗಳವಾರ ಸಂಜೆಯಂದು ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು ಸತ್ಸಂಗವನ್ನು ನಡೆಸಿಕೊಟ್ಟರು. ಈ ಸತ್ಸಂಗದಲ್ಲಿ ಅನೇಕ ಸಾವಿರ ತೀರ್ಥಯಾತ್ರಿಗಳೊಡನೆ ಸಂತರೂ ಭಕ್ತಿ ಸಂಗೀತದಲ್ಲಿ ಮತ್ತು ಜ್ಞಾನದಲ್ಲಿ ಮೀಯಲು ಬಂದಿದ್ದರು.
180 ದೇಶಗಳ ಭಕ್ತರಿಗೆ ಮಹಾಕುಂಭದ ಪವಿತ್ರ ಭೂಮಿಯಿಂದ ಜಾಗತಿಕ ಧ್ಯಾನವನ್ನು ನಡೆಸಿಕೊಟ್ಟರು. ಈ ಧ್ಯಾನವನ್ನು ಗುರುದೇವರ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಮತ್ತು ಆರ್ಟ್ ಆಫ್ ಲಿವಿಂಗ್ ನ ಸತ್ವ ಆಪ್ ನಲ್ಲಿ ನೇರ ಪ್ರಸಾರ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವರು, ಕುಂಭ ಪರ್ವದ ಸಾರವೆಂದರೆ ನಿಮ್ಮೊಳಗಿನ ಪೂರ್ಣತೆಯನ್ನು ತಿಳಿಯುವುದು. ಜ್ಞಾನ, ಭಕ್ತಿ ಮತ್ತು ಕರ್ಮ ಒಂದಾಗಿ ಬಂದಾಗ ಮಾತ್ರ ಇದು ನಡೆಯಲು ಸಾಧ್ಯ. ಇಲ್ಲಿ ಹರಿಯುತ್ತಿರುವ ಗಂಗೆಯು ಜ್ಞಾನದ ಪ್ರತೀಕವಾದರೆ, ಯಮುನೆಯು ಭಕ್ತಿಯ ಪ್ರತೀಕ ಮತ್ತು ಅಗೋಚರವಾಗಿರುವ ಸರಸ್ವತಿಯು ಕರ್ಮದ ಪ್ರತೀಕ" ಎಂದರು.
ಗುರುದೇವರ ಮಾರ್ಗದರ್ಶನದಲ್ಲಿ ಇದೊಂದು ಪರಿವರ್ತನಕಾರಕವಾದ ಅನುಭವವಾಯಿತು. ಇದು ಐಕ್ಯತೆಯ, ಶಾಂತಿಯ, ಮಾನವತೆಗೆ ಕರುಣೆಯ ಸಂದೇಶವನ್ನು ಕಳುಹಿಸಿತು. ಗುರುದೇವರು, " ಗಂಗ, ಯಮುನಾ ಮತ್ತು ಸರಸ್ವತಿಯ ಸಂಗಮವು ಇಡ, ಪಿಂಗಳ ಮತ್ತು ಸುಷುಮ್ನ ಶಕ್ತಿ ನಾಡಿಗಳನ್ನು ಪ್ರತಿನಿಧಿಸುತ್ತವೆ. ಧ್ಯಾನದಲ್ಲಿ ನಾವು ಸ್ತಬ್ಧರಾದಾಗ ಅಮರತ್ವದ ಅಮೃತವನ್ನು ಅನುಭವಿಸುತ್ತೇವೆ" ಎಂದರು.
ಮಹಾಕುಂಭದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಗಳು. ಮಹಾಕುಂಭದಲ್ಲಿ ಆರ್ಟ್ ಆಫ್ ಲಿವಿಂಗ್ ಅನೇಕ ಸೇವಾ ಕಾರ್ಯಗಳನ್ನು ನಡೆಸುತ್ತಿದೆ. ಉಚಿತ ಆಹಾರ, ಆಯುರ್ವೇದದ ಆರೈಕೆ ಮತ್ತು ತೀರ್ಥಯಾತ್ರಿಗಳ ಒಳಿತಿನ ಸೇವೆಯನ್ನು 25 ಸೆಕ್ಟರ್ ಗಳಲ್ಲೂ ನಡೆಸುತ್ತಿದೆ. ಆರ್ಟ್ ಆಫ್ ಲಿವಿಂಗ್ ನ ಶಿಬಿರದಲ್ಲಿ ಪ್ರತಿನಿತ್ಯ ಒಂದು ಟನ್ ಖಿಚಡಿಯನ್ನು ಪ್ರತಿನಿತ್ಯ ಎರಡು ಸಲ ಸಿದ್ಧಪಡಿಸಿ, 25,000-30,000 ಭಕ್ತರಿಗೆ ಹಂಚುತ್ತಿದೆ. ಇದರೊಡನೆ ಶ್ರೀ ಶ್ರೀ ತತ್ವದ ಎಂಟು ತಜ್ಞ ನಾಡಿ ವೈದ್ಯರು 5000 ಜನರಿಗೆ ನಾಡಿ ಪರೀಕ್ಷೆಯನ್ನು ನಡೆಸಿ, ಆಯುರ್ವೈದ್ಯಕೀಯ ಸಲಹೆಗಳನ್ನು ನೀಡಿದರು.
ಮಂಗಳವಾರ ಬೆಳಗ್ಗೆ ಗುರುದೇವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ, ಪ್ರಯಾಗರಾಜ್ ನ ಐತಿಹಾಸಿಕ ಬಡೇ ಹನುಮಾನ್ ಮಂದಿರಕ್ಕೆ ಭೇಟಿ ನೀಡಿದರು. ಆರ್ಟ್ ಆಫ್ ಲಿವಿಂಗ್ ನ ಶಿಬಿರದಲ್ಲಿ ಗುರುದೇವರ ಸಾನ್ನಿಧ್ಯದಲ್ಲಿ ರುದ್ರ ಪೂಜೆ, ಅರುಣಪ್ರಶ್ನ ಹೋಮ, ಸೂರ್ಯಸೂಕ್ತ ಹೋಮಗಳು ನಡೆದವು. ಸೋಮವಾರದ ಸತ್ಸಂಗದಲ್ಲಿ ಜುನಾ ಅಖಾಡದ ನಾಗಾ ಸಾಧುಗಳು ಮತ್ತಿನ್ನಿತರ ಗಣ್ಯರು ಗುರುದೇವರನ್ನು ಭೇಟಿ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.