Silk Smitha life : ಮೂರು ದಶಕಗಳ ಹಿಂದೆ, ಯಾವುದೇ ದೊಡ್ಡ ಸೂಪರ್ಸ್ಟಾರ್ಗಳ ಚಿತ್ರಗಳು ಯಶಸ್ವಿಯಾಗಬೇಕಾದರೆ, ಮತ್ತೊಬ್ಬ ಸ್ಟಾರ್ ತಾರೆಯ ಉಪಸ್ಥಿತಿ ಅಗತ್ಯವಾಗಿತ್ತು. ಈ ಪೈಕಿ ಸಿಲ್ಕ್ ಸ್ಮಿತಾ ಅವರ ಐಟಂ ಡ್ಯಾನ್ಸ್ ಅಥವಾ ಯಾವುದೇ ಸಣ್ಣ ದೃಶ್ಯಗಳಿದ್ದರೆ ಮುಗಿತು ಆ ಸಿನಿಮಾ ದೊಡ್ಡ ಹಿಟ್ ಆಗುತ್ತದೆ. ವಿವಿಧ ಭಾಷೆಗಳಲ್ಲಿ ಹಲವು ಚಿತ್ರಗಳ ಯಶಸ್ಸಿನ ಹಿಂದೆ ಸಿಲ್ಕ್ ಉಪಸ್ಥಿತಿ ಇತ್ತು.
ಸಿಲ್ಕ್ ಸ್ಮಿತಾ ಕಚ್ಚಿದ ಸೇಬನ್ನು ಹರಾಜಿಗೆ ಇಟ್ಟಾಗ ಅಭಿಮಾನಿಯೊಬ್ಬರು ಅದನ್ನು ಒಂದು ಲಕ್ಷ ರೂಪಾಯಿಗೆ ಖರೀದಿಸಿದರು. ಆಗಿನ ಒಂದು ಲಕ್ಷ ರೂಪಾಯಿ ಇಂದು ಕೋಟಿ ಕೋಟಿ ಮೌಲ್ಯದ್ದಾಗಿದೆ. ಸ್ಮಿತಾ ಅವರ ಡೇಟ್ ಪಡೆಯಲು ಅನೇಕ ನಿರ್ಮಾಪಕರು ಕಾಯುತ್ತಿದ್ದರು. ಅವರ ಡೇಟ್ ಸಿಕ್ಕ ನಂತರವೇ ಪ್ರಮುಖ ನಟರನ್ನು ಬುಕ್ ಮಾಡುತ್ತಿದ್ದರು ಅಷ್ಟು ಕ್ರೇಜ್ ಇತ್ತು.. .
ಆ ಕಾಲದಲ್ಲಿ ಬೇರೆ ಯಾವುದೇ ನಾಯಕಿ ಇರಲಾರದಂತಹ ಜನಪ್ರಿಯತೆ ಸಿಲ್ಕ್ಗೆ ಇತ್ತು.. ಬಡ ಕುಟುಂಬದಲ್ಲಿ ಜನಿಸಿದ ಸ್ಮಿತಾ ತಮಿಳುನಾಡಿಗೆ ಬಂದು ವಿನು ಚಕ್ರವರ್ತಿ ನಿರ್ದೇಶನದ ವಂದಿ ಚಕ್ರಂ ಚಿತ್ರದಲ್ಲಿ ಸಿಲ್ಕ್ ಪಾತ್ರವನ್ನು ನಿರ್ವಹಿಸಿದರು.. ಅಂದಿನಿಂದ ಸ್ಮಿತಾ.. ಸಿಲ್ಕ್ ಸ್ಮಿತಾ ಆದರು..
ವಿವಿಧ ಭಾಷೆಗಳಲ್ಲಿ ನಟಿಸಿದ್ದ ಈ ಚೆಲುವೆ 35ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಆದರೆ ಸಿಲ್ಕ್ ನಮಗೆ ನೀಡಿದ ಪಾತ್ರಗಳು ಮತ್ತು ಅವರ ನೆನಪುಗಳು ಇನ್ನೂ ಮುಗಿದಿಲ್ಲ. ಸಿಲ್ಕ್ ಸ್ಮಿತಾಗೆ ಸಂಬಂಧಿಸಿದ ಅನೇಕ ವಿಚಾರಗಳು ಪ್ರತಿದಿನ ಹೊರಬರುತ್ತಲೇ ಇವೆ...
ಈಗ, ನಿರ್ದೇಶಕ ವಿ ಶೇಖರ್ ಸಿಲ್ಕ್ ಬಗ್ಗೆ ಹೇಳಿರುವುದು ವಿಚಾವೊಂದು ಗಮನ ಸೆಳೆಯುತ್ತಿದೆ. ಸಿಲ್ಕ್ ಅನೇಕ ಸಿನಿಮಾ ಸೆಟ್ಗಳಲ್ಲಿ ಅಪಘಾತಗಳನ್ನು ಎದುರಿಸಬೇಕಾಯಿತು ಎಂದು ನಿರ್ದೇಶಕರು ಹೇಳುತ್ತಾರೆ. ಅಲ್ಲದೆ, ಚಿತ್ರದ ಚಿತ್ರೀಕರಣದ ಸಮಯದಲ್ಲಿ ನಡೆದ ಒಂದು ಘಟನೆಯ ಬಗ್ಗೆಯೂ ಮಾತನಾಡಿದ್ದಾರೆ..
ಆ ಚಿತ್ರವನ್ನು ಒಂದು ಹಳ್ಳಿಯಲ್ಲಿ ಚಿತ್ರೀಕರಿಸಲಾಗಿದೆ. ಸ್ಮಿತಾಗೆ ಅಲ್ಲಿನ ಒಂದು ಮನೆಯಲ್ಲಿ ವಸತಿ ಕಲ್ಪಿಸಲಾಗಿತ್ತು. ಸ್ಮಿತಾ ಬಂದಿದ್ದಾರೆಂದು ತಿಳಿದಾಗ, ಅನೇಕ ಜನರು ಶೂಟಿಂಗ್ ಸ್ಥಳಕ್ಕೆ ಬಂದರು. ಆಗ ಒಬ್ಬ ರೈತ... ಎಷ್ಟು ವೆಚ್ಚವಾಗುತ್ತದೆ ಎಂದು ಕೇಳಿದ. ಮೊದಲಿಗೆ ನಾನು ಚಿತ್ರ ನಿರ್ಮಿಸಲು ಎಷ್ಟು ಹಣ ಖರ್ಚಾಗುತ್ತದೆ ಅಂತ ಕೇಳಿದ ಎಂದು ಭಾವಿಸಿದೆ.
ಆದರೆ ಅವರು ಕೇಳಿದ್ದು ಸಿಲ್ಕ್ ಸ್ಮಿತಾ ಒಂದು ದಿನ ಬೇಕು ಅಂದ್ರೆ ಎಷ್ಟು ಪಾವತಿಸಬೇಕಾಗುತ್ತದೆ ಅಂತ.. ನಿರ್ದೇಶಕ ವಿ ಶೇಖರ್ ಹೀಗೆ ಹೇಳಿದ್ದಾರೆ ಎನ್ನಲಾದ ಈ ಸುದ್ದಿಯನ್ನು ಫಿಲ್ಮಿಬೀಟ್ ವರದಿ ಮಾಡಿದೆ.. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ..