ಹೋಳಿ ಹಬ್ಬಕ್ಕೂ ಮೊದಲೇ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ: ಅಪಾರ ಸಂಪತ್ತು, ರಾಜ ವೈಭೋಗ

Shukra Dese: ಈ ವರ್ಷ 2025ರ ಮಾರ್ಚ್ 14ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಇದಕ್ಕೂ ಮೊದಲೇ ಕೆಲವರ ಬದುಕಿನಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. 

Written by - Yashaswini V | Last Updated : Feb 7, 2025, 08:20 AM IST
  • ತನ್ನ ಉಚ್ಚ ರಾಶಿಚಕ್ರವಾದ ಮೀನ ರಾಶಿಯಲ್ಲಿ ಮಾರ್ಚ್ 02ರಂದು ಶುಕ್ರನು ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ.
  • ಇದರಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭವಾಗಲಿದೆ ಎನ್ನಲಾಗುತ್ತಿದೆ.
  • ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಹೋಳಿ ಹಬ್ಬಕ್ಕೂ ಮೊದಲೇ ಈ ರಾಶಿಯವರಿಗೆ ಆರಂಭವಾಗಲಿದೆ ಶುಕ್ರ ದೆಸೆ: ಅಪಾರ ಸಂಪತ್ತು, ರಾಜ ವೈಭೋಗ  title=

Shukra Retrograde Effect: ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಶುಕ್ರನ ಸಂಚಾರದಲ್ಲಿ ಬದಲಾವಣೆಯಾಗಲಿದೆ. ಇದರೊಂದಿಗೆ ಕೆಲವು ರಾಶಿಯವರ ಬದುಕು ಕೂಡ ಹಸನಾಗಲಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಂಪತ್ತು, ಸಮೃದ್ಧಿ, ಪ್ರೀತಿ, ಸಂತೋಷ, ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿದೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತನ್ನ ಉಚ್ಚ ರಾಶಿಚಕ್ರವಾದ ಮೀನ ರಾಶಿಯಲ್ಲಿ ಮಾರ್ಚ್ 02ರಂದು ಶುಕ್ರನು ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರಿಂದಾಗಿ ಕೆಲವು ರಾಶಿಯವರ ಜೀವನದಲ್ಲಿ ಶುಕ್ರ ದೆಸೆಯಿಂದ ಗೋಲ್ಡನ್ ಟೈಮ್ ಆರಂಭವಾಗಲಿದೆ ಎನ್ನಲಾಗುತ್ತಿದೆ. ಅಂತಹ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಮಾರ್ಚ್ 02ರಿಂದ ಈ ರಾಶಿಯವರ ಬದುಕಿನಲ್ಲಿ ಶುಕ್ರ ದೆಸೆ ಆರಂಭ: 
ಕರ್ಕಾಟಕ ರಾಶಿ: 

ಶುಕ್ರನ ಹಿಮ್ಮುಖ ನಡೆಯು ಈ ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ಹೊತ್ತು ತರಲಿದೆ. ವ್ಯವಹಾರ ಸಂಬಂಧಿತ ದೂರ ಪ್ರಯಾಣವು ಬಂಪರ್ ಲಾಭವನ್ನು ನೀಡಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಜೊತೆಗೆ ವೇತನವೂ ಹೆಚ್ಚಾಗಲಿದ್ದು ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. 

ಇದನ್ನೂ ಓದಿ- ಶನಿಯ ಕೋಪಕ್ಕೆ ಗುರಿಯಾಗಲಿರುವ ರಾಶಿಗಳಿವು.. 40 ದಿನಗಳ ಈ ಜನರ ಜೀವನ ಅಲ್ಲೋಲ ಕಲ್ಲೋಲ  

ಧನು ರಾಶಿ: 
ಶುಕ್ರನ ಹಿಮ್ಮುಖ ಚಲನೆಯಿಂದ ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖಗಳು ಹೆಚ್ಚಾಗಲಿದೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸಮಯ ಅತ್ಯುತ್ತಮವಾಗಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ರಾಜ ವೈಭೋಗವನ್ನು ಅನುಭವಿಸುವಿರಿ. 

ಇದನ್ನೂ ಓದಿ- ಆಂಜನೇಯ ಶ್ರೀರಾಮನಷ್ಟೇ ಪ್ರೀತಿಸುವ ಏಕೈಕ ರಾಶಿಯಿದು: ಯಾರೇ ಕೇಡು ಬಗೆದರೂ ಕೊಂಚವೂ ತಾಕದಂತೆ ಜನ್ಮಜನ್ಮಕ್ಕೂ ನೆರಳಾಗಿ ಕಾಯುವನು ರಾಮದೂತ

ಮೀನ ರಾಶಿ : 
ಸ್ವ ರಾಶಿಯಲ್ಲಿ ಶುಕ್ರನ ಹಿಮ್ಮುಖ ಚಲನೆಯಿಂದಾಗಿ ಈ ರಾಶಿಯವರು ಹೆಚ್ಚಿನ ಪ್ರಯೋಜನವನ್ನು ಪಡೆಯುವರು. ನಿಮ್ಮ ಆಕರ್ಷಕ ವ್ಯಕ್ತಿತ್ವವು ಎಂತಹವರನ್ನೂ ಸಹ ತಮ್ಮತ್ತ ಸೆಳೆಯುವುದು. ಕುಟುಂಬ ಜೀವನದಲ್ಲಿ ಶಾಂತಿ ಸಾಮರಸ್ಯ ಹೆಚ್ಚಾಗಲಿದೆ. ಹಠಾತ್ ಧನಲಾಭವು ಸೌಕರ್ಯಗಳನ್ನು ಹೆಚ್ಚಿಸಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News