ಬೆಂಗಳೂರು : ಅದೊಂದು ಖತರ್ನಾಕ್ ಜೋಡಿ. ದುಡ್ಡಿರೊ ಉದ್ಯಮಿಗಳನ್ನೇ ಟಾರ್ಗೆಟ್ ಮಾಡ್ತಿದ್ರು. ವಿದೇಶಿ ಕರೆನ್ಸಿ ಕಡಿಮೆ ಬೆಲೆಗೆ ಕೊಡ್ತೀವಿ ಅಂತಾ ಟೋಪಿ ಹಾಕ್ತಿದ್ರು. ಕಲರ್ ಜೆರಾಕ್ಸ್ ತೋರಿಸಿ ಕಲರ್ ಕಲರ್ ಕಾಗೆ ಹಾರಿಸ್ತಿದ್ರು. ವಿಚಾರ ಗೊತ್ತಾಗ್ತಿದ್ದಂತೆ ಸಿಸಿಬಿ ಪೊಲೀಸರು ಒಂದು ವಾರ ಹಿಂದೆ ಬಿದ್ದಿದ್ದಾರೆ. ನಂತರ ಏನಾಯ್ತು ಅದನ್ನೇ ತೋರಿಸ್ತೀವಿ ನೋಡಿ
ಈ ಪೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಇಮ್ರಾನ್ ಶೇಕ್. ದೇಹಲಿ ಮೂಲದವ್ನು. ಪತ್ನಿ ರುಕ್ಸಾನ ಜೊತೆಗೆ ಬೆಂಗಳೂರಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ. ಒಳ್ಳೆ ದುಬೈ ಶೇಕ್ ರೀತಿ ಬಿಲ್ಡಪ್ ಕೊಡ್ತಿದ್ದ. ನನ್ನ ಹತ್ರ ದುಬೈ ಧಿರಾಮ್ ಕರೆನ್ಸಿ ಇದೆ ಕಡಿಮೆ ಬೆಲೆಗೆ ಅಂದ್ರೆ ಅರ್ಧ ರೇಟ್ ಕೊಡ್ತೀನಿ ಅಂತಾ ವಂಚಿಸಲು ಹೊಂಚು ಹಾಕ್ತಿದ್ದ. ಆದರೆ ವಿಚಾರ ಗೊತ್ತಾಗ್ತಿದ್ದಂತೆ ಸಿಸಿಬಿ ಪೊಲೀಸರು ಆಸಾಮಿಯನ್ನ ಬಲೆಗೆ ಕೆಡವಿದ್ದಾರೆ.
ಇದನ್ನೂ ಓದಿ: ಸುಂದರ ಹೆಂಡತಿ ಮುಂದಿಟ್ಟುಕೊಂಡು ಉದ್ಯಮಿಗೆ ಹನಿಟ್ರ್ಯಾಪ್ : ಗಂಡ ಸೇರಿ 5 ಜನರ ಬಂಧನ
ಹೌದು.. ಬೆಂಗಳೂರಲ್ಲಿ ವಾಸವಿದ್ದ ಇಮ್ರಾನ್ ಶೇಕ್ ಮತ್ತು ರುಕ್ಸಾನ ದಂಪತಿ ಮೂರನೇ ವ್ಯಕ್ತಿ ಮೂಲಕ ದುಡ್ಡಿರೊ ಉದ್ಯಮಿಗಳ ಪರಿಚಯ ಮಾಡಿಕೊಳ್ತಿದ್ರು. ಸ್ವಲ್ಪ ದಿನ ನಯವಾಗಿ ವರ್ತಿಸಿ ಬಳಿಕ ಅಸಲಿ ಬುದ್ಧಿ ತೋರಿಸ್ತಿದ್ರು.. ನಮ್ಹತ್ರ ಕಂತೆ ಕಂತೆ ದುಬೈ ಮೂಲದ ಕರೆನ್ಸಿ ಧಿರಾಮ್ ಇದೆ. ಅದರ ಬೆಲೆ ಭಾರತೀಯ ರೂಪಾಯಿಗೆ ಹೋಲಿಸಿಕೊಂಡ್ರೆ 22 ರಿಂದ 25 ರೂಪಾಯಿ ಆಗುತ್ತೆ. ಅದನ್ನ 12 ರೂಪಾಯಿಗೆ ಕೊಡ್ತಿವಿ ಅಂತಾ ನಂಬಿಸ್ತಿದ್ರು.. ನಂಬಿಕೆ ಬರೋದಕ್ಕೆ ಅಂತಾ ಮೊದಲು ಒಂದು ಒರಿಜಿನಲ್ ನೋಟನ್ನ ಉದ್ಯಮಿ ಕೈಗೆ ಇಡ್ತಿದ್ರು.
ಯೆಸ್.. ಉದ್ಯಮಿ ನಂಬಿ ಹಣ ನೀಡ್ತಿದ್ದಂತೆ ಕಲರ್ ಕಲರ್ ಜೆರಾಕ್ಸ್ ಹಣ ಆತನ ಕೈಗಿಟ್ಟು ಪರಾರಿ ಆಗಿಬಿಡ್ತಿದ್ರು.. ಯಾವಾಗ ಟೋಪಿ ಬಿತ್ತು ಅಂತಾ ಉದ್ಯಮಿಗೆ ಗೊತ್ತಾಯ್ತೋ ಸೀದಾ ಸೀದಾ ಬಂದವನೆ ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ. ಸತತ ಒಂದು ವಾರ ಆರೋಪಿಗಳ ಹಿಂದೆ ಬಿದ್ದ ಸಿಸಿಬಿ ತಂಡ ಮಡಿವಾಳ ಮಾರ್ಕೆಟ್ ಬಳಿ ಇಮ್ರಾನ್ ಶೇಕ್ ನನ್ನ ಬಂಧಿಸಿದ್ದಾರೆ. ರುಕ್ಸಾನಾ ಪರಾರಿಯಾಗಿದ್ದು ಆಕೆಯ ಬಳಿ ಮತ್ತಷ್ಟು ದುಬೈ ಕರೆನ್ಸಿ ಹಾಗೂ ಜೆರಾಕ್ಸ್ ಕಾಪಿ ಇದೆ ಎನ್ನಲಾಗ್ತಿದೆ. ಸದ್ಯ ಆಕೆಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಘಟನೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನೇ ಹೇಳಿ ಅತಿಯಾಸೆಗೆ ಬಿದ್ದು ನೋಸ ಹೋಗೋರು ಇರುವವರೆಗು ಇಂತಹ ವಂಚಿಸೊ ಗ್ಯಾಂಗ್ ಹುಟ್ಟಿಕೊಳ್ತಾನೆ ಇರುತ್ತೆ.ಇಂತಹ ಖತರ್ನಾಕ್ ಗಳನ್ನ ಖಾಕಿ ಪಡೆ ಮಟ್ಟ ಹಾಕಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.