Income Tax ಕಟ್ಟುವ ಪದ್ದತಿಯೇ ಇಲ್ಲದ ದೇಶಗಳು ಯಾವುವು ಗೊತ್ತಾ?

Income Tax: ಕೆಲವು ದೇಶಗಳಲ್ಲಿ ಅಲ್ಲಿನ ಜನ ಎಷ್ಟೇ ಆದಾಯ ಮಾಡಿದ್ರೂ ಒಂದೇ ಒಂದು ಪೈಸೆ ತೆರಿಗೆ ಕಟ್ಟುವಹಾಗಿಲ್ಲ. ಪರೋಕ್ಷ ತೆರಿಗೆಗಳನ್ನು ಮಾತ್ರ ಕಟ್ಟಬೇಕು.

Written by - Yashaswini V | Last Updated : Jan 27, 2025, 10:20 AM IST
  • ಸರ್ಕಾರಗಳು ಸಂಪನ್ಮೂಲ ಕ್ರೋಢೀಕರಿಸಲು ಇರುವ ಪ್ರಮುಖ ಮೂಲ ಎಂದರೆ ಆದಾಯ ತೆರಿಗೆ.
  • ವಿಶ್ವದಾದ್ಯಂತ ಬಹುತೇಕ ದೇಶಗಳು ಜನರು ಕಟ್ಟುವ ಆದಾಯ ತೆರಿಗೆಯನ್ನೇ ನೆಚ್ಚಿಕೊಂಡಿವೆ.
  • ಆದಾಯ ತೆರಿಗೆ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು, ಆದರೆ ಆದಾಯ ತೆರಿಗೆಯೇ ಬೇಡ ಎಂದು ಹೇಳುವ ದೇಶಗಳು ವಿರಳ.
Income Tax ಕಟ್ಟುವ ಪದ್ದತಿಯೇ ಇಲ್ಲದ ದೇಶಗಳು ಯಾವುವು ಗೊತ್ತಾ? title=

Income Tax Free Countries: ಭಾರತದಲ್ಲಿ ಜನ ಆದಾಯ ತೆರಿಗೆ ಕಟ್ಟಿ ಕಟ್ಟಿ ಸುಸ್ತಾಗಿದ್ದಾರೆ. ಜೊತೆಗೆ ಪರೋಕ್ಷ ತೆರಿಗೆಗಳು ಕೂಡ ಇವೆ. ಆದ್ರೆ ಕೆಲವು ದೇಶಗಳಲ್ಲಿ ಆದಾಯ ತೆರಿಗೆ ಕಟ್ಟುವ ಪದ್ದತಿಯೇ ಇಲ್ಲ ಅಂದ್ರೆ ನಂಬುತ್ತೀರಾ? ನಂಬಲೇಬೇಕು. ಕೆಲ ದೇಶಗಳಲ್ಲಿ ಅಲ್ಲಿನ ಜನ ಎಷ್ಟೇ ಆದಾಯ ಮಾಡಿದ್ರೂ ಒಂದೇ ಒಂದು ಪೈಸೆ ತೆರಿಗೆ ಕಟ್ಟುವಹಾಗಿಲ್ಲ. ಪರೋಕ್ಷ ತೆರಿಗೆಗಳನ್ನು ಮಾತ್ರ ಕಟ್ಟಬೇಕು. ಅಂತಾ ದೇಶಗಳ ಮಾಹಿತಿ ಇಲ್ಲಿದೆ ನೋಡಿ… 

ಸರ್ಕಾರಗಳು ಸಂಪನ್ಮೂಲ ಕ್ರೋಢೀಕರಿಸಲು ಇರುವ ಪ್ರಮುಖ ಮೂಲ ಎಂದರೆ ಆದಾಯ ತೆರಿಗೆ. ವಿಶ್ವದಾದ್ಯಂತ ಬಹುತೇಕ ದೇಶಗಳು ಜನರು ಕಟ್ಟುವ ಆದಾಯ ತೆರಿಗೆಯನ್ನೇ ನೆಚ್ಚಿಕೊಂಡಿವೆ. ಆದಾಯ ತೆರಿಗೆ ವಿಧಿಸುವ ಪ್ರಮಾಣದಲ್ಲಿ ವ್ಯತ್ಯಾಸ ಇರಬಹುದು, ಆದರೆ ಆದಾಯ ತೆರಿಗೆಯೇ ಬೇಡ ಎಂದು ಹೇಳುವ ದೇಶಗಳು ವಿರಳ. ಅಂತಾ ದೇಶಗಳ ವಿವರ ನೋಡಿ… 

ತೆರಿಗೆ ಮುಕ್ತ ದೇಶಗಳು :
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಐ)
ಬಹರೇನ್
ಕುವೈತ್ 
ಬಹಾಮಾಸ್ 
ಸೌದಿ ಅರೇಬಿಯಾ
ಒಮಾನ್ 
ಕತಾರ್ 

ಇದನ್ನೂ ಓದಿ- 2025ರ ಬಜೆಟ್‌ನಲ್ಲಿ ಹಳೆ ತೆರಿಗೆ ಪದ್ಧತಿ ಬದಲಿಸ್ತಾರಾ ನಿರ್ಮಲಾ ಸೀತಾರಾಮನ್? ತೆರಿಗೆದಾರರ ಮೇಲೆ ಏನು ಪರಿಣಾಮ..!

ಮೇಲೆ ಹೇಳಿರುವ ದೇಶಗಳಲ್ಲಿ ಒಂದು ಅಂಶವನ್ನು ಗಮನಿಸಬೇಕು. ಇವೆಲ್ಲವೂ ಬಹುತೇಕ ತೈಲ ರಫ್ತು ಮಾಡುವ ದೇಶಗಳಾಗಿವೆ. ಈ ದೇಶಗಳಲ್ಲಿ ಜನ ಎಷ್ಟೇ ದುಡಿದರೂ ಅವರ ಮೇಲೆ ಆದಾಯ ತೆರಿಗೆ ವಿಧಿಸುವುದಿಲ್ಲ. ಆದರೆ ಪರೋಕ್ಷ ತೆರಿಗೆಗಳನ್ನು ವಿಧಿಸಲಾಗುತ್ತದೆ. ಕುವೈತ್ ಆದಾಯ ತೆರಿಗೆ ಮುಕ್ತ ದೇಶವಾಗಿದ್ದರೂ ಜಗತ್ತಿನ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದಾಗಿದೆ. ಬಹಾಮಾಸ್ ದೇಶ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುತ್ತದೆ. ಅಲ್ಲಿ ಪ್ರವಾಸೋದ್ಯಮದಿಂದ ಹೇರಳವಾದ ಹಣ ಹರಿದುಬರುತ್ತದೆ. ಇನ್ನು ಹೆಚ್ಚು ಆದಾಯ ತೆರಿಗೆ ವಿಧಿಸುವ ದೇಶಗಳನ್ನು ನೋಡುವುದಾದರೆ… 

ಹೆಚ್ಚು ಆದಾಯ ತೆರಿಗೆ ವಿಧಿಸುವ ದೇಶಗಳು:
ಐವರಿ ಕೋಸ್ಟ್: ಶೇಕಡಾ 60ರಷ್ಟು 
ಫಿನ್ಲ್ಯಾಂಡ್: ಶೇಕಡಾ 57.30ರಷ್ಟು
ಜಪಾನ್: ಶೇಕಡಾ 55.95 ರಷ್ಟು
ಡೆನ್ಮಾರ್ಕ್: ಶೇಕಡಾ 55.09 ರಷ್ಟು 
ಆಸ್ಟ್ರಿಯಾ: ಶೇಕಡಾ 55ರಷ್ಟು 
ಸ್ವೀಡನ್: ಶೇಕಡಾ 52ರಷ್ಟು 
ಬೆಲ್ಜಿಯಂ: ಶೇಕಡಾ 50ರಷ್ಟು

ಇದನ್ನೂ ಓದಿ- ಶ್ರೀರಾಮಚಂದ್ರ ಮತ್ತು ಲಕ್ಷಣ್ ಹೆಸರಿನ ಬ್ಯಾಂಕ್ ಚೆಕ್ ಭಾರೀ ವೈರಲ್!

ಕುತೂಹಲಕಾರಿ ಸಂಗತಿ ಏನೆಂದರೆ ಫಿನ್ಲ್ಯಾಂಡ್ ದೇಶ ಶೇಕಡಾ 57.30ರಷ್ಟು ಆದಾಯ ತೆರಿಗೆ ವಿಧಿಸುತ್ತಿದ್ದರೂ ಅಲ್ಲಿನ ಜನ ಸಂತೋಷದಿಂದ ಇದ್ದಾರೆ. ಜಾಗತಿಕವಾಗಿ ಅತಿ ಹೆಚ್ಚು ಜನ ಸಂತೋಷದಿಂದ ಇರುವ ದೇಶಗಳ ಪೈಕಿ ಫಿನ್ಲ್ಯಾಂಡ್ ಅಗ್ರ ಸ್ಥಾನದಲ್ಲಿದೆ. ಇದೇ ರೀತಿ ಅತಿ ಹೆಚ್ಚು ಆದಾಯ ತೆರಿಗೆ ವಿಧಿಸುವ ಹಲವು ದೇಶಗಳು ಜಾಗತಿಕವಾಗಿ ಸಂತಸದಿಂದ ಇರುವ ದೇಶಗಳ ಇಂಡೆಕ್ಸ್ ನಲ್ಲಿ ಮೇಲಿವೆ. ಅಲ್ಲಿನ ಅಭಿವೃದ್ಧಿಯೂ ಹೆಚ್ಚಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News