ನವದೆಹಲಿ : Aadhaar Card Latest News: NRIಗಳಿಗಾಗಿ ಆಧಾರ್ ಕಾರ್ಡ್ ಮಾಡಿಸಲು UIDAI ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳ ಪ್ರಕಾರ NRIಗಳು ಆಧಾರ್ ಕಾರ್ಡ್ ಮಾಡಿಸಬಹುದು. ಆದರೆ, ಇದಕ್ಕಾಗಿ ಅವರು ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಸಲ್ಲಿಸಬೇಕಾಗುತ್ತದೆ. ಯಾವುದೇ ಸೇವಾ ಪೂರೈಕೆದಾರರಿಗೆ ಎನ್‌ಆರ್‌ಐಗಳನ್ನು ಆಧಾರ್ (Aadhaar) ಆಧಾರಿತ ಪರಿಶೀಲನೆಗೆ ಒಳಪಡಿಸಬೇಕಾದರೆ, ಅನಿವಾಸಿ ಭಾರತೀಯರು UIDAI ನಿಯಮಗಳನ್ನು ಪಾಲಿಸಬೇಕಾಗುತ್ತದೆ.
NRI ಗಾಗಿ ಆಧಾರ್ ಕಾರ್ಡ್ :
ಆಧಾರ್ ಕಾರ್ಡ್‌ಗಾಗಿ (Aadhaar card) ಅನಿವಾಸಿ ಭಾರತೀಯರು ಕೆಲವು ನಿಯಮಗಳನ್ನು ಪಾಲಿಸಬೇಕು ಎಂದು ಯುಐಡಿಎಐ ಹೇಳಿದೆ. ಆಧಾರ್ ಕಾರ್ಡ್ ಪಡೆಯಲು ಅನಿವಾಸಿ ಭಾರತೀಯರಿಗೆ (NRI) ಭಾರತೀಯ ಪಾಸ್ಪೋರ್ಟ್ ನ ಅಗತ್ಯವಿದೆ. ಸಂಗಾತಿಗಾಗಿ ತಮ್ಮ ಪಾಸ್ಪೋರ್ಟ್ ಅನ್ನು ಪುರಾವೆಯಾಗಿ, ಸಲ್ಲಿಸುವುದಾದರೆ , ಪಾಸ್ಪೋರ್ಟ್ನಲ್ಲಿ ಸಂಗಾತಿಯ ಹೆಸರನ್ನು ಕೂಡಾ ಬರೆಯಬೇಕು.
ಇದನ್ನೂ ಓದಿ : Train Ticket Insurance Benefits: ರೈಲ್ವೆ ಟಿಕೆಟ್ ಬುಕಿಂಗ್ ವೇಳೆ ವಿಮೆ ಮಾಡಿಸುವುದರಿಂದ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಅನಿವಾಸಿ ಭಾರತೀಯರ ಮಕ್ಕಳಿಗೆ ಆಧಾರ್ ಕಾರ್ಡ್ :
1. NRI ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಬೇಕಾದರೆ UIDAI ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ.
2. ಮಗು NRI ಆಗಿದ್ದರೆ ಮಗುವಿನ ಭಾರತೀಯ ಪಾಸ್‌ಪೋರ್ಟ್ ಅಗತ್ಯವಾಗಿರುತ್ತದೆ. ಮಗು ಭಾರತೀಯ ಪ್ರಜೆಯಾಗಿದ್ದರೆ, ಪೋಷಕರೊಂದಿಗಿನ ಸಂಬಂಧವನ್ನು ಸೂಚಿಸುವ ಯಾವುದಾದರೂ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ.
3. ಇದರ ಹೊರತಾಗಿ, ಪೋಷಕರಲ್ಲಿ ಒಬ್ಬರು ಮಗುವಿನ ಪರವಾಗಿ ಅನುಮೋದನೆಯನ್ನು ನೀಡಬೇಕಾಗುತ್ತದೆ.
ಮೊಬೈಲ್ ವೆರಿಫಿಕೆಶನ್ :
NRI ಗೆ ಆಧಾರ್ ಕಾರ್ಡ್‌ಗಾಗಿ ನೀಡಿರುವ ವಿವರಗಳಲ್ಲಿ ಭಾರತೀಯ ಮೊಬೈಲ್ ಸಂಖ್ಯೆಯನ್ನು (Mobile number) ಕಡ್ಡಾಯವಾಗಿ ನೀಡಬೇಕು. ಆಧಾರ್ ಕಾರ್ಡ್‌ಗಾಗಿ ಅಂತಾರಾಷ್ಟ್ರೀಯ ಸಂಖ್ಯೆಗಳನು ಸ್ವೀಕರಿಸಲಾಗುವುದಿಲ್ಲ ಎಂದು ಯುಐಡಿಎಐ ಹೇಳಿದೆ. ಆದ್ದರಿಂದ ಅನಿವಾಸಿ ಭಾರತೀಯರು ಭಾರತೀಯ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಅಗತ್ಯವಾಗಿದೆ.
ಇದನ್ನೂ ಓದಿ : 10, 20, 50, 100, 500 ಮತ್ತು ₹ 2 ಸಾವಿರ ನೋಟುಗಳ ಮುದ್ರಣ; ಯಾವ ನೋಟು ಮುದ್ರಣಕ್ಕೆ ಹೆಚ್ಚು ವೆಚ್ಚವಾಗುತ್ತೆ?
ಆಧಾರ್ ಕಾರ್ಡ್ ಗಾಗಿ NRI ಅರ್ಜಿ ಸಲ್ಲಿಸುವುದು ಹೇಗೆ ?
1. NRI ಗಾಗಿ ಆಧಾರ್ ಕಾರ್ಡ್ ಮಾಡಲು, ಮೊದಲು ಯಾವುದೇ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ.
2. ಈ ಸಂದರ್ಭದಲ್ಲಿ ಮಾನ್ಯ ಭಾರತೀಯ ಪಾಸ್ಪೋರ್ಟ್ (Passport) ಅನ್ನು ತೆಗೆದುಕೊಂಡು ಹೋಗಬೇಕು.
3. ಎಲ್ಲಾ ವಿವರಗಳನ್ನು ದಾಖಲಾತಿ ಫಾರಂನಲ್ಲಿ ಭರ್ತಿ ಮಾಡಿ.
4. ಆಧಾರ್ ನೋಂದಾಯಿಸಲು ಇ-ಮೇಲ್ ಐಡಿ ಕೂಡ ನೀಡಬೇಕಾಗುತ್ತದೆ.
5.ಫಾರಂ ಅನ್ನು ಎಚ್ಚರಿಕೆಯಿಂದ ಓದಿ ಮತ್ತು ಡಿಕ್ಲಾರೆಶನ್ ಸಹಿ ಮಾಡಿ.
6. ನಿಮ್ಮನ್ನು NRI ಆಗಿ ನೋಂದಾಯಿಸುವಂತೆ ಒಪೆರೆಟರ್ ಗೆ ಕೇಳಿ.
7. ನಿಮ್ಮ ಗುರುತಿನ ಚೀಟಿಯಾಗಿ ನಿಮ್ಮ ಪಾಸ್ಪೋರ್ಟ್ ನೀಡಿ.
8. ನಿಮ್ಮ ಬಯೋಮೆಟ್ರಿಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ದಾಖಲಾತಿ ಸ್ಲಿಪ್ ಪಡೆಯಿರಿ.
9. ಇಷ್ಟಾದ ಮೇಲೆ ಆಧಾರ್ ಕಾರ್ಡ್ ಅನ್ನು ನಿಗದಿತ ಸಮಯದಲ್ಲಿ ಪಡೆಯಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ