Viral Video: ಯೆಪ್ಪಾ.. ಛೀ.. ಛೀ.. ರೈಲಿನಲ್ಲಿ ಟೀ ಕುಡಿತೀರಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ! ಅದು ಚಹಾ ಅಲ್ಲ..

Train Tea Viral Video: ಸಾಮಾನ್ಯವಾಗಿ ಟ್ರಾವೆಲ್‌ ಮಾಡುವಾಗ ಎಲ್ಲರಿಗೂ ಟೀ ಬೇಕು.. ಆದರೆ ಸದ್ಯ ವೈರಲ್‌ ಆಗಿರುವ ಈ ವಿಡಿಯೋ ನೋಡಿದ್ರೆ ಮತ್ತೊಮ್ಮೆ ಟ್ರೇನ್‌ನಲ್ಲಿ ಪ್ರಯಾಣ ಮಾಡುವಾಗ ಟೀ ಹೆಸರು ಕೂಡ ಎತ್ತಲ್ಲ.. ಅಷ್ಟಕ್ಕೂ ಏನಿದೆ ಆ ವಿಡಿಯೋದಲ್ಲಿ ಅಂತೀರಾ ಈ ಸ್ಟೋರಿ ಓದಿ..   

Written by - Savita M B | Last Updated : Jan 25, 2025, 02:07 PM IST
  • ಅಂತರ್ಜಾಲದಲ್ಲಿ ಪ್ರತಿದಿನ ಸಾವಿರಾರು ವೀಡಿಯೋಗಳು ಪೋಸ್ಟ್ ಆಗುತ್ತವೆ
  • ಇದನ್ನು ನೋಡಿದ ನೆಟ್ಟಿಗರು ಏಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.
Viral Video: ಯೆಪ್ಪಾ.. ಛೀ.. ಛೀ.. ರೈಲಿನಲ್ಲಿ ಟೀ ಕುಡಿತೀರಾ? ಹಾಗಿದ್ರೆ ಈ ವಿಡಿಯೋ ಒಮ್ಮೆ ನೋಡಿ! ಅದು ಚಹಾ ಅಲ್ಲ..  title=

Viral Video: ಅಂತರ್ಜಾಲದಲ್ಲಿ ಪ್ರತಿದಿನ ಸಾವಿರಾರು ವೀಡಿಯೋಗಳು ಪೋಸ್ಟ್ ಆಗುತ್ತವೆ. ಕೆಲವು ನಮ್ಮನ್ನು ಆಶ್ಚರ್ಯಗೊಳಿಸುತ್ತವೆ.. ಇನ್ನು ಕೆಲವು ಭಯಹುಟ್ಟಿಸುತ್ತವೆ.. ಅವುಗಳು ಯಾವುದೇ ಅಸಂಭವ ಘಟನೆಗಳು, ಅನಿರೀಕ್ಷಿತ ಸಂದರ್ಭಗಳು, ಕೆಲವು ಜನರ ಸಾಹಸಗಳನ್ನು ಒಳಗೊಂಡಿರುತ್ತವೆ. ಇದಲ್ಲದೇ, ಸಾಮಾಜಿಕ ಮತ್ತು ಸಮಾಜ ವಿರೋಧಿ ಅಪರಾಧಗಳಿಗೆ ಸಂಬಂಧಿಸಿದ ಕೆಲವು ವೀಡಿಯೊಗಳು ಸಹ ಕಾಲಕಾಲಕ್ಕೆ ಬಿಡುಗಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರನ್ನು ಬೆಚ್ಚಿ ಬೀಳಿಸುತ್ತಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿನ ಸಿಬ್ಬಂದಿಯ ನಿರ್ಲಕ್ಷ್ಯವು ಸಾರ್ವಜನಿಕ ಆರೋಗ್ಯದ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾದರೆ ಈ ವಿಡಿಯೋದಲ್ಲಿ ಏನಾಯ್ತು..? ಇದನ್ನು ನೋಡಿದ ನೆಟ್ಟಿಗರು ಏಕೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ. 

ಇದನ್ನೂ ಓದಿ-ಗ್ಲಾಮರ್‌ ಪ್ರಪಂಚ ಬಿಟ್ಟು ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿ ಸ್ಟಾರ್‌ ನಟಿ..! 

ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ರೈಲಿನಲ್ಲಿ ಚಾಯ್ ಮಾರಾಟಗಾರನೊಬ್ಬ ಟಾಯ್ಲೆಟ್‌ನೊಳಗೆ ಟೀ ಪಾತ್ರೆಯನ್ನು ಜೆಟ್ ಸ್ಪ್ರೇ ಮೂಲಕ ತೊಳೆಯುತ್ತಿದ್ದಾನೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.. ಹೌದು ವಾಸ್ತವವವಾಗಿ ಟೀ ಮಾರುವ ವ್ಯಕ್ತಿಯೊಬ್ಬ ಸಾವಿರಾರು ಜನರು ಬಳಸುವ ಟ್ರೇನ್ ಟಾಯ್ಲೆಟ್ ಸೀಟ್ ಮೇಲೆ ಟೀ ಕಂಟೈನರ್ ಇಟ್ಟು ತೊಳೆಯುತ್ತಿದ್ದಾರೆ. ಅದರ ಕೆಲವು ಸೆಕೆಂಡುಗಳ ವೀಡಿಯೋ ತುಣುಕನ್ನು ಸೋಷಿಯಲ್‌ ಮಿಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಇದರೊಂದಿಗೆ ನೆಟ್ಟಿಗರು ಈ ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಈ ವಿಡಿಯೋ ಬಗ್ಗೆ ನೆಟಿಜನ್‌ಗಳು ತೀವ್ರ ಆಕ್ಷೇಪ ಹಾಗೂ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

 
 
 
 

 
 
 
 
 
 
 
 
 
 
 

A post shared by Ayub (@yt_ayubvlogger23)

ಇದನ್ನೂ ಓದಿ-ಗ್ಲಾಮರ್‌ ಪ್ರಪಂಚ ಬಿಟ್ಟು ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿ ಸ್ಟಾರ್‌ ನಟಿ..! 

ಅಪಾಯಕಾರಿ ರೀತಿಯಲ್ಲಿ ಟೀ ಪಾತ್ರೆಯನ್ನು ತೊಳೆದ ಇವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೇ, ಇನ್ನು ಕೆಲವರು ರೈಲಿನಲ್ಲಿ ಪ್ರಯಾಣಿಸುವ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕುಡಿಯುವ ಈ ಟೀಯಲ್ಲಿ ತುಂಬಾ ಅಪಾಯವಿದೆ ಎಂದು ಕಾಮೆಂಟ್‌ ಮಾಡಿದ್ದಾರೆ. ಇಂತಹ ಅಶುಚಿಯಾದ ರೀತಿಯಲ್ಲಿ ಮಾಡಿದ ಚಹಾ ಮತ್ತು ಇತರ ಆಹಾರವನ್ನು ಜನರು ತಿನ್ನಬಾರದು ಎಂದು ಒಬ್ಬರು ಹೇಳಿದರೇ.. ರೈಲಿನಲ್ಲಿ ಪ್ರಯಾಣಿಸುವಾಗ ಟೀ, ಕಾಫಿ ಕುಡಿಯುವುದನ್ನು ನಿಲ್ಲಿಸುತ್ತೇನೆ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.. ಸಾರ್ವಜನಿಕರ ಆರೋಗ್ಯದ ಬಗ್ಗೆ ಇಂತಹ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News