Actress Ramya statement about marriage: ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡ ಚಿತ್ರರಂಗದಲ್ಲಿ ನಟಿ ರಮ್ಯಾಗೆ ಸರಿಸಾಟಿ ಯಾರೂ ಬರಲ್ಲ ಎಂದರೆ ತಪ್ಪಾಗಲ್ಲ. ನಟನೆ ಜೊತೆಗೆ ಅದ್ಭುತ ಸೌಂದರ್ಯದ ಒಡತಿಯಾಗಿರುವ ಮೋಹಕತಾರೆ ಕೆಲ ಸಮಯದಿಂದ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಅಭಿಮಾನಿಗಳ ಜೊತೆಗೆ ಸೋಶಿಯಲ್ ಮೀಡಿಯಾ ಮೂಲಕ ಸಂವಹನ ಮಾಡುತ್ತಲೇ ಇದ್ದಾರೆ ಕನ್ನಡ ಈ ಬ್ಯೂಟಿ
42 ವರ್ಷವಾದ್ರೂ ಇನ್ನೂ ಸಿಂಗಲ್ ಆಗಿರುವ ನಟಿ ರಮ್ಯಾ ಅವರ ಮದುವೆ ವಿಚಾರ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಅದೇ ವಿಚಾರವೊಂದನ್ನು ಟ್ರೋಲ್ ಪೇಜ್ವೊಂದು ಪೋಸ್ಟ್ ಮಾಡಿತ್ತು. ಆ ಪೋಸ್ಟ್ ಜೊತೆಗೆ ಹಲವಾರು ದಿನಗಳಿಂದ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಕೊನೆಗೂ ರಮ್ಯಾ ಮೌನ ಮುರಿದಿದ್ದಾರೆ
ಕಳೆದ ನವೆಂಬರ್ನಲ್ಲಿ ನಟಿ ರಮ್ಯಾ, ವಿದೇಶದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ರಮ್ಯಾ ಅವರಿಗೆ ಉದ್ಯಮಿ ಸಂಜೀವ್ ಅವರು ಬರ್ತ್ ಡೇ ವಿಶ್ ಮಾಡಿದ್ದರು. “ಹುಟ್ಟುಹಬ್ಬದ ಶುಭಾಶಯಗಳು ನನ್ನ ದಿವೂ, ಲವ್ ಯೂ ಫಾರೆವರ್, ನಿನ್ನೊಂದಿಗೆ ಪ್ರವಾಸಕ್ಕೆ ಹೋಗುವುದು ಎಂದೆಂದಿಗೂ ನನಗೆ ಅದ್ಭುತ” ಎಂಬರ್ಥದಲ್ಲಿ ಬರೆದುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಆ ಕ್ಯೂಟ್ ಪೋಸ್ಟ್ಗೆ ರಮ್ಯಾ ಪ್ರತಿಕ್ರಿಯಿಸಿ "ಲವ್ ಯೂ ಸನಾ ಎಂದು ಹೇಳಿದ್ದರು
ಅಂದಹಾಗೆ ಇಬ್ಬರೂ ಉತ್ತಮ ಸ್ನೇಹಿತರು. ಈ ಹಿಂದೆ ರಮ್ಯಾ ಮತ್ತು ಸಂಜೀವ್ ಅವರು ಜತೆಯಾಗಿ ಪ್ರವಾಸ ಹೋಗಿದ್ದಲ್ಲದೆ, ಕ್ರಿಕೆಟ್ ಪಂದ್ಯವನ್ನು ಕೂಡ ಜೊತೆಯಾಗಿ ವೀಕ್ಷಣೆ ಮಾಡಿದ್ದರು. ಆ ಸಂದರ್ಭದಲ್ಲೂ ಕೂಡ ಇವರಿಬ್ಬರ ಬಗ್ಗೆ ಗಾಸಿಪ್ ಹಬ್ಬಿತ್ತು. ಆದರೆ ಇದೀಗ ಈ ಎಲ್ಲಾ ವದಂತಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ ರಮ್ಯಾ.
“ಸ್ಯಾಂಡಲ್ವುಡ್ ಮೋಹಕತಾರೆ ರಮ್ಯಾ ಅವರ ಬಾಯ್ ಫ್ರೆಂಡ್ ಸಂಜೀವ್ ಮೋಹನ! ಇವರು ರಮ್ಯಾ ಅವರನ್ನು ಪ್ರೀತಿಯಿಂದ divs ಅಂತ ಕರೀತಾರೆ. ಇದೇ ವರ್ಷ ಹಸೆಮಣೆ ಏರಲಿದ್ದಾರೆ. ನಮ್ಮ ಕ್ರಶ್ ಮದುವೆ ಆಗ್ತಿದ್ದಾರೆ ಕಣ್ರಪ್ಪ” ಎಂದು ರಮ್ಯಾ – ಸಂಜೀವ್ ಅವರ ಫೋಟೋ ಎಡಿಟ್ ಮಾಡಿ ಟ್ರೋಲ್ ಪೇಜ್ವೊಂದು ಪೋಸ್ಟ್ ಶೇರ್ ಮಾಡಿತ್ತು. ಇದನ್ನು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿದ್ದ ರಮ್ಯಾ, "ಫೇಕ್" ಎಂದು ಬರೆದುಕೊಂಡಿದ್ದಾರೆ.
ಕೊನೆಗೂ ಇಷ್ಟು ದಿನಗಳಿಂದ ಹರಿದಾಡುತ್ತಿದ್ದ ವದಂತಿ ಹಾಗೂ ಗೊಂದಲಕ್ಕೆ ಒಂದೇ ಶಬ್ದದಲ್ಲಿ ತೆರೆ ಎಳೆದಿದ್ದಾರೆ. ಇದಲ್ಲದೆ ಸಜಗ್ ಕೂಡ ಈ ಬಗ್ಗೆ ತನಿಖೆ ನಡೆಸಿದ್ದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದೆ.