Ratan Tata Will : ಅಕ್ಟೋಬರ್ನಲ್ಲಿ ಜಗತ್ತಿಗೆ ವಿದಾಯ ಹೇಳಿದ ರತನ್ ಟಾಟಾ ಅವರ ವಿಲ್ನಲ್ಲಿ ಕೆಲವು ಅಚ್ಚರಿಯ ಹೆಸರುಗಳು ಹೊರಹೊಮ್ಮಿವೆ. ಟಾಟಾ ಅವರು ತಮ್ಮ 1500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮೂರನೇ ಒಂದು ಭಾಗವನ್ನು ಅಂದರೆ 500 ಕೋಟಿ ಮೌಲ್ಯದ ಆಸ್ತಿಯನ್ನು ಮೋಹಿನಿ ಮೋಹನ್ ದತ್ತ ಹೆಸರಿಗೆ ಬರೆದಿದ್ದಾರೆ. ಇದೀಗ ಈ ಮೋಹಿನಿ ಮೋಹನ್ ಯಾರು ಎನ್ನುವ ಪ್ರಶ್ನೆ ಎದ್ದಿದೆ. ಅಲ್ಲದೆ, ಅವರ ಹೆಸರಿನಲ್ಲಿ 500 ಕೋಟಿ ಮೌಲ್ಯದ ಆಸ್ತಿ ಬರೆದಿರುವ ಇರುವ ಕಾರಣ ವಿಲ್ ಬಗ್ಗೆ ವಿವಾದ ಏಳುವ ಸಾಧ್ಯತೆ ಇದೆ.
ಮೋಹಿನಿ ಮೋಹನ್ ದತ್ತಾ ಟಾಟಾ ಗ್ರೂಪ್ನ ಮಾಜಿ ಉದ್ಯೋಗಿ. ಇವರು ದಿವಂಗತ ರತನ್ ಟಾಟಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಟಾಟಾ ಗ್ರೂಪ್ನೊಂದಿಗೆ ಸಂಬಂಧ ಹೊಂದಿರುವವರಿಗೆ ಮೋಹಿನಿ ಮೋಹನ್ ಹೆಸರಿನಲ್ಲಿ ವಿಲ್ ಬರೆದಿರುವ ವಿಚಾರ ಆಘಾತಕಾರಿಯಾಗಿದೆ.
ಇದನ್ನೂ ಓದಿ : ರೆಪೊ ದರದಲ್ಲಿ 0.25% ಇಳಿಕೆ, ಆರ್ಥಿಕ ವೃದ್ಧಿಗೆ ಬಲ;ಭಾರತೀಯ ರಿಸರ್ವ್ ಬ್ಯಾಂಕ್ನ ಮಹತ್ವದ ನಿರ್ಧಾರ
ಮೋಹಿನಿ ಮತ್ತು ಇತರರ ನಡುವಿನ ಬಿರುಕು :
ರತನ್ ಟಾಟಾ ಅವರ ಉಯಿಲಿನ ಆಧಾರದ ಮೇಲೆ ಮೋಹಿನಿ ಅವರು ಪ್ರಮುಖ ಪಾಲನ್ನು ಪಡೆದಿದ್ದಾರೆ. ರತನ್ ಟಾಟಾ ಅವರ ಆಸ್ತಿಯ ವಿಭಜನೆಗೆ ಸಂಬಂಧಿಸಿದಂತೆ ಮೋಹಿನಿ ಮೋಹನ್ ದತ್ತಾ ಮತ್ತು ಇತರರ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಎದ್ದಿವೆ ಎನ್ನಲಾಗಿದೆ. ಮಾಧ್ಯಮವೊಂದು ಈ ಬಗ್ಗೆ ಮೋಹಿನಿ ಮೋಹನ್ ದತ್ತಾ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುವುದಕ್ಕೆ ನಿರಾಕರಿಸಿದ್ದಾರೆ. ಈ ವಿಲ್ನ ನಿರ್ವಾಹಕರಾದ ಟಾಟಾ ಅವರ ಮಲಸಹೋದರಿಯರಾದ ಶಿರಿನ್ ಮತ್ತು ದಿನಾ ಜೆಜೆಭಾಯ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಮೆಹ್ಲಿ ಮಿಸ್ತ್ರಿ,'ನಾನು ಈ ವ್ಯಕ್ತಿಯ ಬಗ್ಗೆ ಯಾವುದೇ ಕಾಮೆಂಟ್ ಮಾಡಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ.
ಮೋಹಿನಿ ಮೋಹನ್ ದತ್ತ ಯಾರು?:
ಜಮ್ಶೆಡ್ಪುರದ ನಿವಾಸಿಯಾದ ಮೋಹಿನಿ ಮೋಹನ್ ದತ್ತಾ, ಟ್ರಾವಲ್ ಸೆಕ್ಟರ್ ನಲ್ಲಿ ಕೆಲಸ ಮಾಡುತ್ತಾರೆ.ದತ್ತಾ ಅವರ ಕುಟುಂಬವು 'ಸ್ಟಾಲಿಯನ್' ಎಂಬ ಟ್ರಾವೆಲ್ ಏಜೆನ್ಸಿಯನ್ನು ನಡೆಸುತ್ತಿತ್ತು. ಅದು 2013 ರಲ್ಲಿ ತಾಜ್ ಸರ್ವೀಸಸ್ನೊಂದಿಗೆ ವಿಲೀನಗೊಂಡಿತು. ತಾಜ್ ಸರ್ವೀಸಸ್, ತಾಜ್ ಗ್ರೂಪ್ ಆಫ್ ಹೋಟೆಲ್ಗಳ ಭಾಗವಾಗಿದೆ. ದತ್ತಾ ಕುಟುಂಬವು ಸ್ಟಾಲಿಯನ್ನಲ್ಲಿ 80% ಪಾಲನ್ನು ಹೊಂದಿದ್ದರೆ, ಉಳಿದ 20% ಪಾಲನ್ನು ಟಾಟಾ ಇಂಡಸ್ಟ್ರೀಸ್ ಹೊಂದಿತ್ತು. ಮೋಹಿನಿ ದತ್ತಾ ಅವರು ಥಾಮಸ್ ಕುಕ್ ಜೊತೆ ಸಂಬಂಧ ಹೊಂದಿದ್ದ ಟಿಸಿ ಟ್ರಾವೆಲ್ ಸರ್ವೀಸಸ್ನ ನಿರ್ದೇಶಕಿಯೂ ಆಗಿದ್ದಾರೆ.ದತ್ತ ಅವರ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು 2024 ರವರೆಗೆ ಒಂಬತ್ತು ವರ್ಷಗಳ ಕಾಲ ಟಾಟಾ ಟ್ರಸ್ಟ್ನಲ್ಲಿ ಕೆಲಸ ಮಾಡಿದರು.ಅದಕ್ಕೂ ಮೊದಲು ಅವರು ತಾಜ್ ಹೋಟೆಲ್ಗಳಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ : ಪಿಎಫ್ ಸದಸ್ಯರಿಗೆ ಬಂಪರ್ !ಮಾಸಿಕ ಪಿಂಚಣಿಯಲ್ಲಿ ಹೆಚ್ಚಳ ಮಾಡಿ ಸರ್ಕಾರದ ಬಹು ದೊಡ್ಡ ನಿರ್ಧಾರ
ದತ್ತಾ ತಮ್ಮನ್ನು ಟಾಟಾ ಕುಟುಂಬಕ್ಕೆ ಹತ್ತಿರ ಎಂದು ಹೇಳಿಕೊಳ್ಳುತ್ತಿದ್ದರು. ದತ್ತಾ ಅವರು ಜೆಮ್ಶೆಡ್ಪುರದ ಡೀಲರ್ಸ್ ಹಾಸ್ಟೆಲ್ನಲ್ಲಿ ರತನ್ ಟಾಟಾ ಅವರನ್ನು ಮೊದಲ ಬಾರಿಗೆ ಭೇಟಿಯಾದರು ಎಂದು ರತನ್ ಟಾಟಾ ಅನ್ತ್ಯಕ್ರಿಯ್ತೆ ವೇಳೆ ದತ್ತಾ ಮಾಧ್ಯಮಗಳಿಗೆ ತಿಳಿಸಿದ್ದರು. ಅವರ ಭೇಟಿಯ ಸಮಯದಲ್ಲಿ ರತನ್ ಟಾಟಾ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತಂತೆ. ಟಾಟಾ ನನಗೆ ಸಹಾಯ ಮಾಡಿದ್ದು, ಜೀವನದಲ್ಲಿ ಮುಂದೆ ಕೊಂಡೊಯ್ದರು.ಇವರಿಬ್ಬರೂ ಕಳೆದ 60 ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿರು ಎಂದು ದತ್ತಾ ಹೇಳಿಕೊಂಡಿದ್ದರು. ಡಿಸೆಂಬರ್ 2024 ರಲ್ಲಿ ಮುಂಬೈನ NCPA ನಲ್ಲಿ ಆಯೋಜಿಸಲಾದ ರತನ್ ಟಾಟಾ ಅವರ ಜನ್ಮ ಜಯಂತಿಗೂ ಮೋಹಿನಿ ದತ್ತಾ ಅವರನ್ನು ಆಹ್ವಾನಿಸಲಾಗಿತ್ತು.
ಹೆಚ್ಚಿನ ಸಂಪತ್ತು ದಾನಕ್ಕೆ ಮೀಸಲು :
ರತನ್ ಟಾಟಾ ಅವರ ಹೆಚ್ಚಿನ ಸಂಪತ್ತು ದಾನಕ್ಕೆ ಮೀಸಲಾಗಿದೆ. ಇನ್ನು ಆಸ್ತಿಯಲ್ಲಿ ಪಾಲು ಪಡೆದಿರುವ ಮಲಸಹೋದರಿಯರು ಸಹ ಆಸ್ತಿಯನ್ನು ದಾನ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಆದ ಬಳಿಕ ಇದೀಗ ಕಾನೂನು ತಜ್ಞರು ಆಸ್ತಿಯನ್ನು ಹೇಗೆ ವಿಭಜಿಸುವುದು ಎಂಬುದರ ಬಗ್ಗೆ ಗಮನ ಹರಿಸುತ್ತಿದ್ದಾರೆ. ತಮ್ಮ ಸಂಪತ್ತಿನ ಬಹುಭಾಗವನ್ನು ದಾನ ಮಾಡಲು, ರತನ್ ಟಾಟಾ ಎರಡು ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಅದುವೇ ರತನ್ ಟಾಟಾ ದತ್ತಿ ಪ್ರತಿಷ್ಠಾನ ಮತ್ತು ರತನ್ ಟಾಟಾ ದತ್ತಿ ಟ್ರಸ್ಟ್.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.