12 ಲಕ್ಷ ಅಲ್ಲ, 18 ಲಕ್ಷ ಆದಾಯದ ಮೇಲೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ! ಈ ಟ್ರಿಕ್ ಬಳಸಿ ವೇತನವನ್ನು ತೆರಿಗೆ ಮುಕ್ತಗೊಳಿಸಿ

Income Tax Tips:ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಇದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಪರಿಶೀಲನೆಗೆ ಹೋಗುತ್ತದೆ.

Written by - Ranjitha R K | Last Updated : Feb 10, 2025, 10:13 AM IST
  • 18 ಲಕ್ಷ ರೂ.ಗಳವರೆಗೆ ವೇತನದ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
  • ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಈ ಟ್ರಿಕ್ ಅನ್ನು ಅನುಸರಿಸಬಹುದು.
  • ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ
12 ಲಕ್ಷ ಅಲ್ಲ, 18 ಲಕ್ಷ ಆದಾಯದ ಮೇಲೂ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ! ಈ ಟ್ರಿಕ್ ಬಳಸಿ ವೇತನವನ್ನು ತೆರಿಗೆ ಮುಕ್ತಗೊಳಿಸಿ title=

Income Tax Tips:  ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಲಾದ ಕೇಂದ್ರ ಬಜೆಟ್‌ನಲ್ಲಿ, 12 ಲಕ್ಷ ರೂ.ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಆದರೆ ನಿಮ್ಮ ವೇತನ 12 ಲಕ್ಷ ರೂ.ಗಳಿಗಿಂತ ಹೆಚ್ಚಿದ್ದರೂ ತೆರಿಗೆ ಪಾವತಿಸಬೇಕಿಲ್ಲ. ಹೌದು, 12 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲು ಬಯಸಿದರೆ, ಹೊಸ ತೆರಿಗೆ ವ್ಯವಸ್ಥೆಯಡಿಯಲ್ಲಿ ಈ ಟ್ರಿಕ್ ಅನ್ನು ಅನುಸರಿಸಬಹುದು.

ಈ ಟ್ರಿಕ್‌ನಿಂದ, 18 ಲಕ್ಷ ರೂ.ಗಳವರೆಗೆ ವೇತನದ ಮೇಲೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.ಹೌದು, ಈ ಟ್ರಿಕ್ ನ ಹೆಸರು ವೇತನ  ಪುನರ್ರಚನೆ. ನಿಮ್ಮ ತೆರಿಗೆ ಹೊಣೆಗಾರಿಕೆ ಶೂನ್ಯವಾಗುವ ರೀತಿಯಲ್ಲಿ ವೇತನವನ್ನು  ಪುನರ್ರಚಿಸಬಹುದು. 

ಇದನ್ನೂ ಓದಿ : ಸತತ ಏರುತ್ತ ಶಾಕ್‌ ನೀಡಿದ್ದ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಬಂಗಾರ ಪ್ರಿಯರಿಗೆ ಇದಕ್ಕಿಂತ ಸಂತಸದ ಸುದ್ದಿ ಮತ್ತೊಂದಿಲ್ಲ..

ತೆರಿಗೆ ಉಳಿಸುವ ಮಾರ್ಗಗಳು:
ನಿಮ್ಮ ಮೂಲ ವೇತನ ಮತ್ತು ಡಿಎ 12.25 ಲಕ್ಷ ರೂ.ಗಳಾಗಿದ್ದರೆ, ಅದನ್ನು ವಿವಿಧ ಭತ್ಯೆಗಳು ಮತ್ತು ಸವಲತ್ತುಗಳ ಮೂಲಕ ತೆರಿಗೆ ಮುಕ್ತಗೊಳಿಸಬಹುದು. ಉದಾಹರಣೆಗೆ, NPS ಕೊಡುಗೆಯಾಗಿ 1.71 ಲಕ್ಷ ರೂ., ಮೋಟಾರ್ ಕಾರು ಸೌಲಭ್ಯದ ರೂಪದಲ್ಲಿ 4 ಲಕ್ಷ ರೂ. ಮತ್ತು ಉಡುಗೊರೆಯ ರೂಪದಲ್ಲಿ 5,000 ರೂ.ಗಳನ್ನು ಸೇರಿಸಬಹುದು. ಈ ರೀತಿಯಾಗಿ, ನಿಮ್ಮ ಒಟ್ಟು ವೇತನ 18.01 ಲಕ್ಷ ರೂ.ಗಳಾಗುತ್ತದೆ.

ಅದು ತೆರಿಗೆ ಮುಕ್ತವಾಗುವುದು ಹೇಗೆ? :
NPS ಕೊಡುಗೆ: ಮೂಲ ಮತ್ತು DA ಯ 14% ವರೆಗಿನ NPS ಕೊಡುಗೆಯನ್ನು ಸೆಕ್ಷನ್ 80CCD(2) ಅಡಿಯಲ್ಲಿ ತೆರಿಗೆ ಮುಕ್ತವೆಂದು ಪರಿಗಣಿಸಲಾಗುತ್ತದೆ.ಇದು 1.71 ಲಕ್ಷ ರೂ.ಗಳನ್ನು ಉಳಿಸಬಹುದು.

ಉಡುಗೊರೆ ಭತ್ಯೆ: ಸೆಕ್ಷನ್ 17(2)(vii) ನಿಯಮ 3(7)(iv) ಅಡಿಯಲ್ಲಿ, ಕಂಪನಿಯು ನೀಡುವ 5,000 ರೂ.ವರೆಗಿನ ಉಡುಗೊರೆಗಳು ತೆರಿಗೆ ಮುಕ್ತವಾಗಿರುತ್ತವೆ.

ಪ್ರಮಾಣಿತ ಕಡಿತ: ಎಲ್ಲಾ ಸಂಬಳ ಪಡೆಯುವ ಉದ್ಯೋಗಿಗಳು  75,000ರೂ.ವರೆಗಿನ ಪ್ರಮಾಣಿತ ಕಡಿತದ ಸೌಲಭ್ಯವನ್ನು ಪಡೆಯುತ್ತಾರೆ.

ಇದನ್ನೂ ಓದಿ : ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳದ ಬಗ್ಗೆ ಹೊರ ಬಿತ್ತು ಮಾಹಿತಿ !ಡಿಎ ಏರಿಕೆ 56 ಅಲ್ಲ 57% ಎನ್ನುತ್ತಿದೆ ಲೆಕ್ಕಾಚಾರ

ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆ:
ಮುಂದಿನ ವಾರ ಹೊಸ ಆದಾಯ ತೆರಿಗೆ ಮಸೂದೆ ಮಂಡನೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಇದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಯ ಪರಿಶೀಲನೆಗೆ ಹೋಗುತ್ತದೆ. ಸಾಮಾನ್ಯ ಜನರ ಕೈಗೆ ಹೆಚ್ಚಿನ ಹಣ ತಲುಪುವಂತೆ ಮಾಡಲು ಮತ್ತು ನಿಯಮಗಳನ್ನು ಸರಳೀಕರಿಸಲು ತಂದಿರುವ ಹೊಸ ಆದಾಯ ತೆರಿಗೆ ಮಸೂದೆಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News