ಇಂಡಿಯಾ ಪೋಸ್ಟ್‌ನಲ್ಲಿ ಬಂಪರ್ ನೇಮಕಾತಿ; 20 ಸಾವಿರಕ್ಕೂ ಹೆಚ್ಚು ಹುದ್ದೆಗಳು, ಇಲ್ಲಿದೆ ಸಂಪೂರ್ಣ ಮಾಹಿತಿ

Recruitment in India Post: ಭಾರತೀಯ ಅಂಚೆ ಇಲಾಖೆಯಲ್ಲಿ ಬಂಪರ್ ನೇಮಕಾತಿ ನಡೆಯುತ್ತಿದೆ. ಈ ನೇಮಕಾತಿ ಅಭಿಯಾನದ ಮೂಲಕ 20 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹತೆ ಸೇರಿದಂತೆ ಎಲ್ಲಾ ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ. 

Written by - Puttaraj K Alur | Last Updated : Feb 12, 2025, 04:15 PM IST
  • ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್ (JDS) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
  • ಈ ನೇಮಕಾತಿಯಡಿ ಇಲಾಖೆಯಲ್ಲಿ ಒಟ್ಟು 21,413 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 3 ಆಗಿರುತ್ತದೆ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರಿ
ಇಂಡಿಯಾ ಪೋಸ್ಟ್‌ನಲ್ಲಿ ಬಂಪರ್ ನೇಮಕಾತಿ; 20 ಸಾವಿರಕ್ಕೂ ಹೆಚ್ಚು ಹುದ್ದೆಗಳು, ಇಲ್ಲಿದೆ ಸಂಪೂರ್ಣ ಮಾಹಿತಿ    title=
ಇಂಡಿಯಾ ಪೋಸ್ಟ್‌ನಲ್ಲಿ ಬಂಪರ್ ನೇಮಕಾತಿ

Recruitment in India Post: ನೀವು ಕೇಂದ್ರ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ಈ ಸುದ್ದಿ ನಿಮಗೆ ತುಂಬಾ ಪ್ರಯೋಜನಕಾರಿ. ಭಾರತೀಯ ಅಂಚೆ ಇಲಾಖೆ ಗ್ರಾಮೀಣ ಡಾಕ್ ಸೇವಕ್ (JDS) ಹುದ್ದೆಗಳ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಾರಂಭವಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 3 ಆಗಿರುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ದಿನಾಂಕದಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. 

ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?

ನೇಮಕಾತಿ ಅಭಿಯಾನದ ಮೂಲಕ, ಇಲಾಖೆಯಲ್ಲಿ ಒಟ್ಟು 21,413 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಇದರಲ್ಲಿ ಪೋಸ್ಟ್ ಮಾಸ್ಟರ್ (ಬಿಪಿಎಂ)/ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ)/ಡಾಕ್ ಸೇವಕರ ಹುದ್ದೆಗಳು ಸೇರಿವೆ. 

ಇದನ್ನೂ ಓದಿತೆರಿಗೆ ಸ್ಲ್ಯಾಬ್‌ಗಳಿಗೆ ತಿದ್ದುಪಡಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 'ಹೊಸ ಆದಾಯ ತೆರಿಗೆ ಮಸೂದೆ' ಪ್ರಮುಖ ಅಂಶಗಳು..!

ಅರ್ಹತಾ ಮಾನದಂಡಗಳು

* ಅಭ್ಯರ್ಥಿಗಳು ಈ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಕೆಳಗೆ ನೀಡಲಾದ ಅಂಶಗಳ ಮೂಲಕ ಅರ್ಥಮಾಡಿಕೊಳ್ಳಬಹುದು.
ಜಿಡಿಎಸ್ ನೇಮಕಾತಿಗೆ ಶೈಕ್ಷಣಿಕ ಅರ್ಹತೆಯೆಂದರೆ ಭಾರತ ಸರ್ಕಾರ/ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಯಾವುದೇ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ ಮತ್ತು ಇಂಗ್ಲಿಷ್‌ನಲ್ಲಿ ಉತ್ತೀರ್ಣ ಅಂಕಗಳೊಂದಿಗೆ 10ನೇ ತರಗತಿಯ ಮಾಧ್ಯಮಿಕ ಶಾಲಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಪ್ರಮಾಣಪತ್ರ ಹೊಂದಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು.

ಸಂಬಳ ಎಷ್ಟು ಸಿಗುತ್ತದೆ?

ಬಿಪಿಎಂ: 12,000 ರೂ.ನಿಂದ 29,380 ರೂ. ವೇತನ ನೀಡಲಾಗುತ್ತದೆ
ಎಬಿಪಿಎಂ/ಡಾಕ್ ಸೇವಕ್: 10,000 ರೂ.ನಿಂದ 24,470 ರೂ. ವೇತನ ನೀಡಲಾಗುತ್ತದೆ. 

ಅರ್ಜಿ ಶುಲ್ಕ ಎಷ್ಟು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಮಹಿಳಾ ಅಭ್ಯರ್ಥಿಗಳು, SC/ST ಅರ್ಜಿದಾರರು, PWD ಅರ್ಜಿದಾರರು ಮತ್ತು ಟ್ರಾನ್ಸ್‌ವುಮೆನ್ ಅರ್ಜಿದಾರರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇರುತ್ತದೆ. ವಿನಾಯಿತಿ ಪಡೆದ ವರ್ಗದ ಅರ್ಜಿದಾರರನ್ನು ಹೊರತುಪಡಿಸಿ, ಅರ್ಜಿದಾರರು ಪಾವತಿಗಾಗಿ ಒದಗಿಸಲಾದ ಲಿಂಕ್ ಬಳಸಿ ಯಾವುದೇ ಆನ್‌ಲೈನ್ ಪಾವತಿ ವಿಧಾನದ ಮೂಲಕ ಶುಲ್ಕವನ್ನು ಪಾವತಿಸಬಹುದು. ಇದಕ್ಕಾಗಿ ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು ನೆಟ್ ಬ್ಯಾಂಕಿಂಗ್ ಸೌಲಭ್ಯ/ಯುಪಿಐ ಬಳಸಬಹುದು.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಶಾಕ್.. ಎಂಟನೇ ವೇತನ ಆಯೋಗ ಮತ್ತಷ್ಟು ವಿಳಂಬ! ಕಾರಣವೇನು ಗೊತ್ತೇ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News