Bank Holidays: ಜೂನ್‌ನಲ್ಲಿ ಎಷ್ಟು ದಿನ ರಜೆ ಇರಲಿದೆ ಬ್ಯಾಂಕ್, ಇಲ್ಲಿದೆ ಫುಲ್ ಲಿಸ್ಟ್

Bank Holidays in June: ಪ್ರಸ್ತುತ, ಕರೋನಾ ಸಾಂಕ್ರಾಮಿಕದ ಮಧ್ಯೆ, ಬ್ಯಾಂಕುಗಳು ತಮ್ಮ ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸುವಂತೆ ಗ್ರಾಹಕರಿಗೆ ಮನವಿ ಮಾಡಿವೆ. ಆದ್ದರಿಂದ ಗ್ರಾಹಕರು ತುಂಬಾ ಅಗತ್ಯವಿರುವ ಕೆಲಸಗಳಿಗಷ್ಟೇ ಬ್ಯಾಂಕ್ ಶಾಖೆಗೆ ಹೋಗಬೇಕಾಗುತ್ತದೆ. 

Written by - Yashaswini V | Last Updated : May 26, 2021, 10:00 AM IST
  • ಜೂನ್‌ನಲ್ಲಿ ಬ್ಯಾಂಕುಗಳಿಗೆ 9 ದಿನ ರಜೆ
  • ಈ ರಜಾದಿನಗಳನ್ನು ಗಮನಿಸಿ ನಿಮ್ಮ ಬ್ಯಾಂಕಿನ ಕೆಲಸವನ್ನು ಯೋಜಿಸುವುದು ಉತ್ತಮ
  • ಜೂನ್ ತಿಂಗಳಲ್ಲಿ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿಯನ್ನು ನೋಡಿ
Bank Holidays: ಜೂನ್‌ನಲ್ಲಿ ಎಷ್ಟು ದಿನ ರಜೆ ಇರಲಿದೆ ಬ್ಯಾಂಕ್, ಇಲ್ಲಿದೆ ಫುಲ್ ಲಿಸ್ಟ್ title=
Bank Holidays in June

ನವದೆಹಲಿ: Bank Holidays in June- ಕರೋನಾ ಸಾಂಕ್ರಾಮಿಕದ ಮಧ್ಯೆ, ಬ್ಯಾಂಕುಗಳು ತಮ್ಮ ಹೆಚ್ಚಿನ ಸೇವೆಗಳನ್ನು ಆನ್‌ಲೈನ್‌ನಲ್ಲಿಯೇ ಪೂರ್ಣಗೊಳಿಸುತ್ತಿವೆ. ಇದರೊಂದಿಗೆ ತುಂಬಾ ಅಗತ್ಯವಿರುವ ಕೆಲಸಗಳಿಗಷ್ಟೇ ಬ್ಯಾಂಕಿಗೆ ಬರುವಂತೆ ಗ್ರಾಹಕರಿಗೆ ಮನವಿ ಮಾಡುತ್ತಲೇ ಇರುತ್ತವೆ. ಅದೇ ಸಮಯದಲ್ಲಿ, ಲಾಕ್‌ಡೌನ್‌ನಂತಹ ನಿರ್ಬಂಧಗಳ ನಡುವೆ ಬ್ಯಾಂಕುಗಳ ಚಲನೆ ಕಡಿಮೆ. ಅದಾಗ್ಯೂ ನಿಮಗೂ ಬ್ಯಾಂಕಿನಲ್ಲಿ ಅಗತ್ಯ ಕೆಲಸಗಳಿದ್ದರೆ ಬ್ಯಾಂಕಿಗೆ ತೆರಳುವ ಮೊದಲು ಅದರ ರಜಾ ದಿನಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಆದ್ದರಿಂದ ನೀವು ಜೂನ್ ತಿಂಗಳಲ್ಲಿ ಬ್ಯಾಂಕಿಗೆ ಹೋಗಬೇಕಿದ್ದರೆ ಯಾವ ದಿನ ಬ್ಯಾಂಕ್ ತೆರೆದಿರುತ್ತದೆ ಮತ್ತು ಯಾವ ದಿನ ಬ್ಯಾಂಕಿಗೆ ರಜೆ ಇದೇ ಎಂಬುದನ್ನು ಮೊದಲು ಪರಿಶೀಲಿಸಿ.

ಜೂನ್‌ನಲ್ಲಿ ಬ್ಯಾಂಕುಗಳಿಗೆ 9 ದಿನ ರಜೆ:
ರಿಸರ್ವ್ ಬ್ಯಾಂಕಿನ (Reserve Bank) ಪಟ್ಟಿಯ ಪ್ರಕಾರ, ಜೂನ್‌ನಲ್ಲಿ ಬ್ಯಾಂಕುಗಳಿಗೆ  9 ದಿನ ರಜೆ ಇರಲಿದೆ. ಆದ್ದರಿಂದ, ಈ ರಜಾದಿನಗಳನ್ನು ಗಮನಿಸಿ ನಿಮ್ಮ ಬ್ಯಾಂಕಿನ ಕೆಲಸವನ್ನು ಯೋಜಿಸುವುದು ಉತ್ತಮ. ವಾಸ್ತವವಾಗಿ, ಜೂನ್ ತಿಂಗಳಲ್ಲಿ ಯಾವುದೇ ದೊಡ್ಡ ಹಬ್ಬವಿಲ್ಲ. ಆದ್ದರಿಂದ, ಹೆಚ್ಚಿನ ರಜಾದಿನಗಳು ನಿಯಮಿತ ಭಾನುವಾರ ಮತ್ತು ಶನಿವಾರದಂದು ಸಾಪ್ತಾಹಿಕ ರಜಾದಿನಗಳಾಗಿವೆ ಮತ್ತು ಕೆಲವು ಸ್ಥಳೀಯ ಹಬ್ಬಗಳ ಕಾರಣದಿಂದಾಗಿ ಬ್ಯಾಂಕುಗಳಿಗೆ ರಜೆ (Bank Holidays) ನೀಡಲಾಗಿದೆ.

ಇದನ್ನೂ ಓದಿ - See Pics: 'ಐಷಾರಾಮಿ ಮನೆ'ಯಾಗಿ ಮಾರ್ಪಟ್ಟ ಸ್ಕೂಲ್ ಬಸ್

ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿದೆ ಎಂದು ನಾವು ನಿಮಗೆ ಹೇಳೋಣ. ಇದರಲ್ಲಿ, ಎಲ್ಲಾ ಬ್ಯಾಂಕುಗಳ ರಜಾದಿನಗಳನ್ನು ರಾಜ್ಯಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಆರ್‌ಬಿಐ ಹೊರಡಿಸಿದ ರಜಾದಿನಗಳ ಪ್ರಕಾರ, ವಾರದ ರಜಾದಿನಗಳು ಸೇರಿದಂತೆ ಜೂನ್ ತಿಂಗಳಲ್ಲಿ ಒಟ್ಟು 9 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದ್ದರಿಂದ ಜೂನ್‌ನಲ್ಲಿ ಬ್ಯಾಂಕುಗಳು ಯಾವಾಗ ಮುಚ್ಚಲ್ಪಡುತ್ತವೆ ಎಂದು ನೋಡೋಣ.

ಜೂನ್ ತಿಂಗಳಲ್ಲಿ ಬ್ಯಾಂಕ್ ರಜೆ ದಿನಗಳ ಸಂಪೂರ್ಣ ಪಟ್ಟಿಯನ್ನು ನೋಡಿ:
06 ಜೂನ್ - ಭಾನುವಾರ (ಸಾಪ್ತಾಹಿಕ ರಜೆ)
12 ಜೂನ್ - ಎರಡನೇ ಶನಿವಾರ (ಬ್ಯಾಂಕುಗಳಿಗೆ ರಜೆ)
13 ಜೂನ್ - ಭಾನುವಾರ (ಸಾಪ್ತಾಹಿಕ ರಜೆ)
15 ಜೂನ್ - ಮಿಥುನ್ ಸಂಕ್ರಾಂತಿ ಮತ್ತು ರಾಜ್ ಪರ್ವ (ಭುವನೇಶ್ವರ ಇಜ್ವಾಲ್-ಮಿಜೋರಾಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ)
20 ಜೂನ್ - ಭಾನುವಾರ (ಸಾಪ್ತಾಹಿಕ ರಜಾದಿನ)
ಜೂನ್ 25 - ಗುರು ಹರ್ ಗೋವಿಂದ್‌ನ ಜಯಂತಿ (ಬ್ಯಾಂಕ್ ಆಫ್ ಜಮ್ಮು ಮತ್ತು ಶ್ರೀನಗರ ಮುಚ್ಚಲಾಗಿದೆ)
26 ಜೂನ್ - ನಾಲ್ಕನೇ ಶನಿವಾರ
ಜೂನ್ 27 - ಭಾನುವಾರ (ಸಾಪ್ತಾಹಿಕ ರಜಾದಿನ)
ಜೂನ್ 30 - ರೆಮ್ನಾ ನಿ (ಇಜ್ವಾಲ್‌ನಲ್ಲಿ ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ)

ಇದನ್ನೂ ಓದಿ - Covid-19: ಕರೋನಾ ಯುಗದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಿದ Xiaomi, Airtel, OPPO

ಮನೆಯಲ್ಲಿ ಕುಳಿತು ಬ್ಯಾಂಕುಗಳಿಂದ ಸಾಕಷ್ಟು ಸೌಲಭ್ಯಗಳನ್ನು ಪಡೆಯಿರಿ:
ಆದಾಗ್ಯೂ, ಬ್ಯಾಂಕುಗಳ ಸಲಹೆಯೆಂದರೆ ಕರೋನಾ ಅವಧಿಯಲ್ಲಿ ನೀವು ಮನೆಯಿಂದ ಹೊರಬರದೆಯೇ ಬ್ಯಾಂಕಿನ ಹಲವು ಸೌಲಭ್ಯಗಳನ್ನು ಪಡೆಯಬಹುದು. ನಿಮಗೆ ಎಟಿಎಂ ನಿಂದ ಹಣ ಬಿಡಿಸಬೇಕಾದರೂ ಕೂಡ ಅದು ನಿಮ್ಮ ಮನೆ ಬಾಗಿಲಿಗೇ ಬರಲಿದೆ. ಚೆಕ್ ಬುಕ್, ಲೈಫ್ ಸರ್ಟಿಫಿಕೇಟ್ ಸೇರಿದಂತೆ ಹಲವು ಸೇವೆಗಳನ್ನು ಸಹ ನೀವು ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News