ಬೀಜಿಂಗ್: ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕರೋನಾವೈರಸ್ ಎಂಬ ಮಹಾಮಾರಿ ಪ್ರಪಂಚದಾದ್ಯಂತ ತನ್ನ ಅಟ್ಟಹಾಸ ಮುಂದುವರೆಸಿದೆ. ಇಡೀ ವಿಶ್ವಕ್ಕೆ ಮಹಾಮಾರಿ ವೈರಸ್ ಪಸರಿಸಿದ್ದ ಚೀನಾದಲ್ಲಿ ಮತ್ತೆ ಕೋವಿಡ್ 19 (Covid 19) ಆತಂಕ ಎದುರಾಗಿದೆ. ಕರೋನಾ ಸಾಂಕ್ರಾಮಿಕದ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಪ್ರಸ್ತುತ ಆಹಾರಕ್ಕಾಗಿ ಅತಿದೊಡ್ಡ ಸಗಟು ಮಾರುಕಟ್ಟೆಯಾದ ಬೀಜಿಂಗ್ ಮೂಲದ ಅತಿದೊಡ್ಡ ಮಾರುಕಟ್ಟೆ ಕ್ಸಿನ್ಫಾಡಿ ಮಾರುಕಟ್ಟೆಯನ್ನು (Xinfadi Market) ಮುಚ್ಚಿದೆ. ಈ ಮಾರುಕಟ್ಟೆಯಿಂದ ಕರೋನಾವೈರಸ್ ಪ್ರಪಂಚದಾದ್ಯಂತ ಹರಡಿತು ಎಂದು ನಂಬಲಾಗಿದೆ. ಚೀನಾದ ಕಮ್ಯುನಿಸ್ಟ್ ಸರ್ಕಾರವು ಸಂಭಾವ್ಯ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಕೋಲ್ಡ್-ಚೈನ್ ಮತ್ತು ಜಲ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹವನ್ನು ಅನಿರ್ದಿಷ್ಟ ಅವಧಿಯವರೆಗೆ ಸ್ಥಗಿತಗೊಳಿಸಿದೆ.
ಇದಲ್ಲದೆ ಫ್ರೋಜನ್ ಫುಡ್ ಪ್ರಾಡಕ್ಟ್ ಗಳ ಪರೀಕ್ಷೆಯನ್ನು ಕೂಡ ಚೀನಾ ಹೆಚ್ಚಿಸಿದೆ. ವಾಸ್ತವವಾಗಿ ಹಲವು ಬಾರಿ ಆಮದು ಮಾಡಿದ ಉತ್ಪನ್ನಗಳು ಮತ್ತು ಅವುಗಳ ಪ್ಯಾಕೇಜಿಂಗ್ನಲ್ಲಿ ಕರೋನಾವೈರಸ್ ಕಂಡುಬಂದಿದೆ ಎಂದು ಚೀನಾ ನಿರಂತರವಾಗಿ ಹೇಳಿಕೊಳ್ಳುತ್ತಿದೆ. ಈ ಕಾರಣದಿಂದಾಗಿ ಕ್ಸಿನ್ಫಾಡಿ ಮಾರುಕಟ್ಟೆಯನ್ನು ಮುಚ್ಚಲು ನಿರ್ಧರಿಸಲಾಗಿದೆ. ಇದಲ್ಲದೆ ಮಾರುಕಟ್ಟೆಗೆ ಸಂಪರ್ಕ ಹೊಂದಿರುವ ಜನರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
Diwali 2020: ಭಾರತದ ಹೊಡೆತಕ್ಕೆ ಸಾವಿರಾರು ಕೋಟಿ ನಷ್ಟ ಅನುಭವಿಸಿದ ಚೀನಾ
ಆಹಾರ ನಿರ್ವಹಣೆಗೆ ಸಂಬಂಧಿಸಿದ ಪ್ರಕರಣಗಳು :
ಚೀನಾದ ಮಾಧ್ಯಮಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಕಿಂಗ್ಡಾವೊ ಮತ್ತು ಟಿಯಾಂಜಿನ್ ನಗರಗಳಲ್ಲಿ ವರದಿಯಾದ ಸೋಂಕಿನ ಪ್ರಕರಣಗಳು ಮುಖ್ಯವಾಗಿ ಒಂದು ರೀತಿಯಲ್ಲಿ ಆಮದು ಮಾಡಿಕೊಂಡ ಫ್ರೋಜನ್ ಫುಡ್ ಪ್ರಾಡಕ್ಟ್ ಮೂಲಕವೇ ಹರಡಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಅದೇ ಸಮಯದಲ್ಲಿ ಚೀನಾದ ಅಧಿಕಾರಿಯೊಬ್ಬರು ಕರೋನಾವೈರಸ್ (Coronavirus) ಸೋಂಕಿತ ಕೋಲ್ಡ್-ಚೈನ್ ಉತ್ಪನ್ನಗಳೊಂದಿಗೆ ಪದೇ ಪದೇ ಸಂಪರ್ಕಕ್ಕೆ ಬರುವ ನಿರ್ದಿಷ್ಟ ಪರಿಸರದಲ್ಲಿ ಕೆಲಸ ಮಾಡುವ ಕಾರ್ಮಿಕರು ಸರಿಯಾದ ರಕ್ಷಣೆ ಇಲ್ಲದೆ ಸೋಂಕಿಗೆ ಒಳಗಾಗಬಹುದು ಎಂದು ಹೇಳಿದರು.
ಹಿಮಾಲಯದ ನೆರಳಲ್ಲಿ ಡ್ರ್ಯಾಗನ್ ಸಮರವ್ಯೂಹ, ಅರುಣಾಚಲದ ಗಡಿ ಸಮೀಪದಲ್ಲೇ ಓಡಲಿದೆ ಚೀನಾ ರೈಲು
ಪಾರುಗಾಣಿಕಾ ಅಧಿಕಾರಿಗಳು :-
ಸೋಂಕು ಹರಡುವ ಸಾಧ್ಯತೆಯ ದೃಷ್ಟಿಯಿಂದ ಚೀನಾದ (China) ಅಧಿಕಾರಿಗಳು ಶಿನ್ಫಾಡಿ ಮಾರುಕಟ್ಟೆಯನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ಎಲ್ಲಾ ಉತ್ಪನ್ನಗಳನ್ನು ನಾಶಪಡಿಸಿದ್ದಾರೆ. ಆದಾಗ್ಯೂ ಜನರು ಕೋಲ್ಡ್ ಚೈನ್ ಆಹಾರ ಉತ್ಪನ್ನಗಳಿಂದ ಸೋಂಕಿಗೆ ಒಳಗಾಗುವ ಅಪಾಯ ತುಂಬಾ ಕಡಿಮೆ ಎಂದು ಅಧಿಕಾರಿಗಳು ಹೇಳುತ್ತಾರೆ.