9 ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಿದ್ದ ಮಹಿಳೆ! ಮನೆ ತುಂಬಾ ಮಕ್ಕಳಿರುತ್ತಾರೆ ಎನ್ನುವ ಸಂತಸದ ತುತ್ತ ತುದಿಯಲ್ಲಿದ್ದಾಗಲೇ ಎದುರಾಗಿದ್ದು

ಮಹಿಳೆ ಗರ್ಭಿಣಿ ಎಂದು ತಿಳಿದಾಗ ವೈದ್ಯರ ಬಳಿ ತಪಾಸಣೆಗೆ ತೆರಳುತ್ತಾರೆ. ಆಗ ಅವರು ಕಂಡುಕೊಂಡಿದ್ದು, ಗರ್ಭದಲ್ಲಿ ಒಟ್ಟು 9 ಭ್ರೂಣಗಳು ಬೆಳೆಯುತ್ತಿವೆ ಎನ್ನುವುದನ್ನು. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ.   

Written by - Ranjitha R K | Last Updated : Jan 28, 2025, 02:29 PM IST
  • ಒಮ್ಮೊಮ್ಮೆ ಅವಳಿ ಮಕ್ಕಳಾದರೆ ಇನ್ನು ಕೆಲವೊಮ್ಮೆ ತ್ರಿವಳಿ ಮಕ್ಕಳಾಗುತ್ತಾರೆ
  • ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ಮಹಿಳೆಗೆ ದೇವರು ಕರುಣಿಸಿದ್ದು 9 ಮಕ್ಕಳು.
  • ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ.
9 ಮಕ್ಕಳನ್ನು ಹೊಟ್ಟೆಯಲ್ಲಿ ಹೊತ್ತಿದ್ದ ಮಹಿಳೆ! ಮನೆ ತುಂಬಾ ಮಕ್ಕಳಿರುತ್ತಾರೆ ಎನ್ನುವ ಸಂತಸದ ತುತ್ತ ತುದಿಯಲ್ಲಿದ್ದಾಗಲೇ ಎದುರಾಗಿದ್ದು title=

ತಾಯ್ತನ ಎನ್ನುವುದು ಪ್ರತಿ ಮಹಿಳೆಯ ಕನಸು. ತನಗೆ ಮಕ್ಕಳಿಲ್ಲ ಎನ್ನುವುದನ್ನು ಯಾವ ಮಹಿಳೆ ಕೂಡಾ ಸಹಿಸುವುದಕ್ಕೆ ಸಾಧ್ಯವಾಗ ನೋವು. ಮಕ್ಕಳಿಗಾಗಿ ತಾಯಿಯಾದವಳು ಜಗತ್ತಿನ ಎಲ್ಲಾ ದೇವರ ಮೊರೆ ಹೋಗುತ್ತಾಳೆ. ಒಮ್ಮೊಮ್ಮೆ ಅವಳಿ ಮಕ್ಕಳಾದರೆ ಇನ್ನು ಕೆಲವೊಮ್ಮೆ ತ್ರಿವಳಿ ಮಕ್ಕಳಾಗುತ್ತಾರೆ. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ಮಹಿಳೆಗೆ ದೇವರು ಕರುಣಿಸಿದ್ದು 9 ಮಕ್ಕಳು. 

ಚೀನಾದ ಈ ಮಹಿಳೆ ಗರ್ಭಿಣಿ ಎಂದು ತಿಳಿದಾಗ ವೈದ್ಯರ ಬಳಿ ತಪಾಸಣೆಗೆ ತೆರಳುತ್ತಾರೆ. ಆಗ ಅವರು ಕಂಡುಕೊಂಡಿದ್ದು, ಗರ್ಭದಲ್ಲಿ ಒಟ್ಟು 9 ಭ್ರೂಣಗಳು ಬೆಳೆಯುತ್ತಿವೆ ಎನ್ನುವುದನ್ನು. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ಈ ದಂಪತಿಯ ಸಂತಸಕ್ಕೆ ಪಾರವೇ ಇರಲಿಲ್ಲ.   

ಇದನ್ನೂ ಓದಿ : ಇನ್ಮುಂದೆ ಭಿಕ್ಷೆ ಬೇಡಿದರೆ ಅರೆಸ್ಟ್! ಏನಿದು ಹೊಸ ಕಾನೂನು?

ಆದರೆ ಮಹಿಳೆಯ ಗರ್ಭದಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮೊದಲು ವೈದ್ಯರು 7 ಭ್ರೂಣವನ್ನು  ತೆಗೆಯಲು ನಿರ್ಧರಿಸುತ್ತಾರೆ. ಈ ದಂಪತಿ  40,000 ಯುವಾನ್ ವೆಚ್ಚದಲ್ಲಿ ವೈದ್ಯರ ಸಲಹೆಯಂತೆ ದಂಪತಿ ಏಳು ಭ್ರೂಣಗಳನ್ನು ಗರ್ಭಪಾತ ಮಾಡಿಸಬೇಕಾಗುತ್ತದೆ.  

ಇನ್ನುಳಿದ ಇಬ್ಬರು ಮಕ್ಕಳನ್ನು ಚೆನ್ನಾಗಿ ಬೆಳಸಬೇಕು ಎನ್ನುವ ಕನಸಿನೊಂದಿಗೆ ಈ ದಂಪತಿ ಇರುವಾಗಲೇ ತಾಯಿಯ ಗರ್ಭಕಂಠದಲ್ಲಿ ಸೋಂಕು ಕಾಣಿಸಿಕೊಂಡು ಆಮ್ನಿಯೋಟಿಕ್ ಚೀಲ ಒಡೆದು ಹೋಗುತ್ತದೆ. ಸೋಂಕು ತುಂಬಾ ಗಂಭೀರವಾಗಿ ಹರಡಿಕೊಂಡಿದ್ದು, ತಾಯಿಯ ಜೀವ ಉಳಿಸಬೇಕಾದರೆ ಮಕ್ಕಳ ಆಸೆ ಬಿಡಲೇ ಬೇಕು. ಇಲ್ಲವಾದರೆ ತಾಯಿ ಮತ್ತು ಮಕ್ಕಳು ಮೂವರನ್ನೂ ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಅಭಿಪ್ರಾಯ ವೈದ್ಯರಿಂದ ಬರುತ್ತದೆ. ಹೀಗಾಗಿ ಉಳಿದ ಇಬ್ಬರೂ ಮಕ್ಕಳನ್ನು ಈ ದಂಪತಿ ಕಳೆದುಕೊಳ್ಳಬೇಕಾಗುತ್ತದೆ. 

ಇದನ್ನೂ ಓದಿ :ಎದೆಹಾಲಿಗಿಂತ ಉತ್ತಮವಾಗಿರುತ್ತಂತೆ ಜಿರಳೆ ಹಾಲು.....! ಹೌದು

ಬಹಳ ವರ್ಷದ ಬಳಿಕ 9 ಮಕ್ಕಳ ತಾಯಿಯಾಗುತ್ತೇನೆ ಎಂದುಕೊಂಡಿದ್ದ ತಾನು ಮತ್ತೆ ಮಡಿಲು ಬರಿದು ಮಾಡಿಕೊಳ್ಳಬೇಕಾಯಿತು ಎಂದು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ. ಮಕ್ಕಳನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News