ವಿಮಾನದಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಬಿಡಲ್ಲ, ಬಿಟ್ಟರೆ ಪ್ರಯಾಣಿಕರ ಜೀವಕ್ಕೆ ಕುತ್ತು..! ಹೇಗೆ ಗೊತ್ತೆ..?

Coconut ban in Planes : ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ತೆಂಗಿನಕಾಯಿ ಸಾಗಿಸುವುದನ್ನು ನಿಷೇಧಿಸುತ್ತವೆ.. ತೆಂಗಿನಕಾಯಿ ಆಹಾರ ಪದಾರ್ಥ.. ಅದನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ಅಪಾಯಗಳೇನು..? ಬನ್ನಿ ಈ ಕುರಿತ ಅಚ್ಚರಿ ವಿಷಯಗಳನ್ನು ತಿಳಿಯೋಣ..

Written by - Krishna N K | Last Updated : Feb 8, 2025, 04:35 PM IST
    • ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ತೆಂಗಿನಕಾಯಿ ಸಾಗಿಸುವುದನ್ನು ನಿಷೇಧಿಸುತ್ತವೆ..
    • ವಿಮಾನ ಪ್ರಯಾಣದ ಸಮಯದಲ್ಲಿ ಸಾಗಿಸಲು ನಿಷೇಧಿಸಲಾದ ಹಲವು ರೀತಿಯ ವಸ್ತುಗಳು ಇವೆ.
    • ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುವುದರಿಂದ ಉಂಟಾಗುವ ಅಪಾಯಗಳೇನು..?
 ವಿಮಾನದಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಬಿಡಲ್ಲ, ಬಿಟ್ಟರೆ ಪ್ರಯಾಣಿಕರ ಜೀವಕ್ಕೆ ಕುತ್ತು..! ಹೇಗೆ ಗೊತ್ತೆ..?  title=

Airlines rules : ವಿಮಾನ ಪ್ರಯಾಣದ ಸಮಯದಲ್ಲಿ ಸಾಗಿಸಲು ನಿಷೇಧಿಸಲಾದ ಹಲವು ರೀತಿಯ ವಸ್ತುಗಳು ಇವೆ. ವಿಮಾನಕ್ಕೆ ಯಾವುದೇ ಹಾನಿ ಮಾಡುವ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡುವುದಿಲ್ಲ.. ಈ ಪೈಕಿ ತೆಂಗಿನಕಾಯಿಯೂ ಒಂದು.. 

ತೆಂಗಿನಕಾಯಿಯನ್ನು ವಿಮಾನದಲ್ಲಿ ಸಾಗಿಸುವುದನ್ನು ನಿಷೇಧಿಸಲಾಗಿದೆ. ಹೌದು... ಸತ್ಯ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಾ.. ಅಯ್ಯೋ ತಿನ್ನುವ ಪದಾರ್ಥ ಇದರಿಂದ ಹಾನಿ ಏನು..? ಅಂತ ನೀವು ಪ್ರಶ್ನೆ ಮಾಡಬಹುದು.. ಆದರೆ ಇದರಿಂದ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬರಬಹುದು.. ಅದಕ್ಕೆ ಕಾರಣಗಳೂ ಇವೆ..

ಇದನ್ನೂ ಓದಿ:13 ರ ವಿದ್ಯಾರ್ಥಿನಿಯ ಮೇಲೆ 3 ಶಿಕ್ಷಕರಿಂದ ಅತ್ಯಾಚಾರ..! ಗರ್ಭಿಣಿಯಾದ ಬಾಲಕಿ

ವಿಮಾನಗಳಲ್ಲಿ ಕೊಬ್ಬರಿಯೊಂದಿಗೆ ಒಣಗಿದ ತೆಂಗಿನಕಾಯಿಯನ್ನು ಸಾಗಿಸುವುದನ್ನು ಅನೇಕ ಕಂಪನಿಗಳು ನಿಷೇಧಿಸಿವೆ ಎಂದು ಏವಿಯೇಷನ್ ​​ಟ್ರೈನಿಂಗ್ ಇಂಡಿಯಾದ ವಾಯುಯಾನ ತಜ್ಞ ರಾಜಗೋಪಾಲ್ ಹೇಳುತ್ತಾರೆ. ಕಾರಣ, ಈ ರೀತಿಯ ತೆಂಗಿನಕಾಯಿಯ ಹೊರ ಕವಚವು ತುಂಬಾ ಗಟ್ಟಿಯಾಗಿದ್ದು, ಅದನ್ನು ಆಯುಧವಾಗಿಯೂ ಬಳಸಬಹುದು. 

ಇದು ವಿಮಾನಕ್ಕೆ ಹಾನಿಯಾಗಬಹುದು ಅಥವಾ ಪ್ರಯಾಣಿಕರಿಗೆ ಗಾಯವಾಗಬಹುದು. ವಿಮಾನದಲ್ಲಿರುವ ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ವಿಮಾನಯಾನ ಸಂಸ್ಥೆಗಳ ಆದ್ಯತೆಯಾಗಿರುವುದರಿಂದ, ಆಯುಧವಾಗಿ ಬಳಸಬಹುದಾದ ಯಾವುದೇ ವಸ್ತುವನ್ನು ಸಾಗಿಸುವುದನ್ನು ನಿಷೇಧಿಸಲಾಗಿದೆ ಎನ್ನುತ್ತಾರೆ..

ಇದನ್ನೂ ಓದಿ:ಈ ಪುಟ್ಟ ಕಾಳು ಮಧುಮೇಹಕ್ಕೆ ಪವಾಡ.. ಬಾಯಿಗೆ ಹಾಕಿ ಜಗಿದು ತಿಂದರೆ ಎಂದಿಗೂ ಹೆಚ್ಚಾಗೊಲ್ಲ ಶುಗರ್‌  

ತೆಂಗಿನಕಾಯಿಯ ಹೊರ ಪದರವು ತುಂಬಾ ಗಟ್ಟಿಯಾಗಿರುತ್ತದೆ ಮತ್ತು ಒಳಭಾಗವು ನೀರಿನಿಂದ ತುಂಬಿರುತ್ತದೆ. ವಿಮಾನವು ಎತ್ತರಕ್ಕೆ ಏರುತ್ತಿದ್ದಂತೆ ಒತ್ತಡ ಹೆಚ್ಚಾಗುತ್ತದೆ, ಇದರಿಂದ ತೆಂಗಿನಕಾಯಿ ಸ್ಫೋಟಗೊಳ್ಳುವ ಸಾದ್ಯತೆ ಹೆಚ್ಚು.. ವಿಮಾನ ಕೊಳಕಾಗುವುದನ್ನು ತಡೆಯುವುದರ ಜೊತೆಗೆ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದಲೂ ಇದು ಸೂಕ್ತವಲ್ಲ. ಅದಕ್ಕಾಗಿಯೇ ವಿಮಾನಯಾನ ಸಂಸ್ಥೆಗಳು ಅದನ್ನು ನಿಷೇಧಿಸಿವೆ.

ವಿಮಾನಗಳಲ್ಲಿ ತೆಂಗಿನಕಾಯಿಗಳನ್ನು ಸಾಗಿಸುವುದನ್ನು ನಿಷೇಧಿಸಿರುವುದಕ್ಕೆ ಇನ್ನೊಂದು ಕಾರಣ ಅಂದ್ರೆ, ಎಕ್ಸ್-ರೇ ಯಂತ್ರದ ಮೂಲಕ ಇದನ್ನು ಸ್ಕ್ಯಾನ್ ಮಾಡುವುದು ತುಂಬಾ ಕಷ್ಟ.. ಇದನ್ನೇ ಬಳಸಿಕೊಂಡು ಕೆಲವರು ಅದರ ಒಳಗೆ ಅಕ್ರಮ ವಸ್ತುಗಳು ಇಟ್ಟು ಸಾಗಾಟ ಮಾಡಬಹುದು.. ಹೀಗೆ ಇನ್ನೂ ಹಲವಾರು ಕಾರಣಗಳೂ ಸಹ ಇವೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News