ಶ್ರೀನಗರ: ಚಾಲಕನಿಲ್ಲದೆ ರೈಲೊಂದು 84 ಕಿ.ಮೀ ದೂರ ಕ್ರಮಿಸಿರುವ ಆಘಾತಕಾರಿ ಘಟನೆ ನಡೆದಿದೆ. ಜಮ್ಮು-ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲನ್ನು ಸಿಬ್ಬಂದಿ ಬದಲಾವಣೆಗಾಗಿ ನಿಲ್ಲಿಸಲಾಗಿತ್ತು.
ಈ ವೇಳೆ ರೈಲಿನ ಇಂಜಿನ್ ಸ್ಟ್ರಾರ್ಟ್ ಆಗಿದ್ದು, ಇಳಿಜಾರಿನ ಮಾರ್ಗವಿದ್ದ ಪರಿಣಾಮ ಅಷ್ಟುದೂರ ರೈಲು ಚಲಿಸಿದೆ. ಚಾಲಕ ಕೆಳಗಿಳಿಯುವ ಮೊದಲು ಹ್ಯಾಂಡ್‌ಬ್ರೇಕ್ ಅನ್ನು ಎಳೆಯಲು ಮರೆತಿದ್ದಾನೆ. ಇದೇ ಕಾರಣದಿಂದ ರೈಲು ಮುಂದಕ್ಕೆ ಸಾಗಿದೆ.
ಇದನ್ನೂ ಓದಿ: Rajya Sabha: ಲೋಕಸಭೆಗಿಂತ ವಿಭಿನ್ನ ರಾಜ್ಯಸಭಾ ಚುನಾವಣೆ: ಜನಸಾಮಾನ್ಯರ ಬದಲು ಇಲ್ಲಿ ಮತ ಹಾಕೋದು ಇವರು..!
ಚಾಲಕನಿಲ್ಲದೆ ರೈಲು 84 ಕಿ.ಮೀ ದೂರ ಕ್ರಮಿಸಿದೆ. ಹೀಗೆ ಸಾಗಿದ ರೈಲನ್ನು ಪಂಜಾಬ್‌ನ ಮುಕೇರಿಯನ್ ಜಿಲ್ಲೆಯಲ್ಲಿ ನಿಲ್ಲಿಸಲಾಗಿದೆ. ಈ ಗೂಡ್ಸ್ ರೈಲು ರೈಲ್ವೆ ನಿರ್ಮಾಣಕ್ಕೆ ಸರಕುಗಳನ್ನು ಸಾಗಿಸುತ್ತಿತ್ತು ಎಂದು ಭಾರತೀಯ ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.
A driverless goods train traveled 78 KM from Kathua, Jammu and Kashmir, to Hoshiarpur, Punjab, where it was stopped with wooden stoppers. The incident occurred when the driver disembarked without applying the handbrake, prompting an investigation ordered by the Railway Minister. pic.twitter.com/KKSe3YsKIu
— Jist (@jist_news) February 25, 2024
ಈ ರೈಲು ನಿಲ್ಲಿಸಲು ಅಧಿಕಾರಿಗಳು ನಡೆಸಿದ ಹಲವಾರು ಪ್ರಯತ್ನಗಳು ವಿಫಲವಾದವು. ಅಂತಿಮವಾಗಿ ಪ್ರಯಾಣಿಕರ ರೈಲುಗಳ ಚಾಲಕರು ಮತ್ತು ಸಿಬ್ಬಂದಿ ಸಹಾಯದಿಂದ ದಸುಹಾ ಬಳಿಯ ಉಂಚಿ ಬಸ್ಸಿ ಪ್ರದೇಶದಲ್ಲಿ ನಿಲ್ಲಿಸಲು ಸಾಧ್ಯವಾಯಿತು.
ಇದನ್ನೂ ಓದಿ: ಇದು ವಿಶ್ವದ ಅತಿ ಉದ್ದದ ಗಾಜಿನ ಸೇತುವೆ.. ಇಲ್ಲಿಗೆ ಹೋಗುವುದು ಕೂಡ ಒಂದು ಸಾಹಸ!
ಅದೃಷ್ಟವಶಾತ್ ಯಾವುದೇ ರೈಲು ವಿರುದ್ಧ ದಿಕ್ಕಿನ ಹಳಿಯಲ್ಲಿ ಇರಲಿಲ್ಲ. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲವೆಂದು ತಿಳಿದುಬಂದಿದೆ. ಈ ಘಟನೆ ಕುರಿತು ಭಾರತೀಯ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಚಾಲಕನಿಲ್ಲದ ಗೂಡ್ಸ್ ರೈಲು ಹಳಿಗಳ ಮೇಲೆ ವೇಗವಾಗಿ ಚಲಿಸುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಅನೇಕರು ಆಘಾತ ವ್ಯಕ್ತಪಡಿಸಿದ್ದಾರೆ. ಸದ್ಯ ಯಾವುದೇ ರೀತಿಯ ಅನಾಹುತವಾಗಿಲ್ಲವೆಂದು ದೇವರಿಗೆ ಧನ್ಯವಾದ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.