URIC ACID: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಹೊರಗೆ ಹೋಗದೆ ದೇಹದಲ್ಲಿ ಉಳಿದುಕೊಂಡರೆ, ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.
URIC ACID: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಉತ್ಪನ್ನವಾಗಿದ್ದು, ಹೊರಗೆ ಹೋಗದೆ ದೇಹದಲ್ಲಿ ಉಳಿದುಕೊಂಡರೆ, ಅದು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಆದ್ದರಿಂದ ದೇಹದಲ್ಲಿ ಉಳಿದುಕೊಂಡಿರುವ ಯೂರಿಕ್ ಆಸಿಡ್ ಅನ್ನು ತೆಗೆದು ಹಾಕುವುದು ತುಂಬಾ ಮುಖ್ಯ. ಇದು ದೇಹದಲ್ಲಿ ಶೇಕರಣೆಯಾಗುತ್ತಾ ಆಗುತ್ತಾ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಹೆಚ್ಚು ಪ್ಯೂರಿನ್ ಆಹಾರವನ್ನು ಸೇವಿಸುವುದರಿಂದ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಯೂರಿಕ್ ಆಸಿಡ್ ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಹಾಗೆ ಹೋಗದೆ ದೇಹದಲ್ಲಿ ಉಳಿದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.
ದೇಹದಲ್ಲಿ ಯೂರಿಕ್ ಆಸಿಡ್ ಶೇಕರಣೆಯಾಗುವುದರಿಂದ, ಕೀಲುಗಳಲ್ಲಿ ನೋವು ಹಾಗೂ ದೇಹದ ಹಲವು ಭಾಗಗಳಲ್ಲಿ ಸ್ಪಟಿಕಗಳು ಉತ್ಪತ್ತಿಯಾಗುತ್ತದೆ.
ಕೇವಲ ಆಹಾರದಿಂದ ಯೂರಿಕ್ ಆಮ್ಲವನ್ನು ಸುಲಭವಾಗಿ ಕಡಿಮೆ ಮಾಡಬಹುದು. ಚಳಿಗಾಲದಲ್ಲಿ, ಕೀಲು ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಯೂರಿಕ್ ಆಸಿಡ್ ಅನ್ನು ನಿಮ್ಮ ದೇಹದಿಂದ ತೆಗೆದು ಹಾಕಲು ಕೆಲವು ಆಹಾರಗಳನ್ನು ಸದೇವಿಸಬೇಕು, ಅವುಗಳಲ್ಲಿ ಮೂಲಂಗಿ ಕೂಡ ಒಂದು.
ಮೂಲಂಗಿಯನ್ನು ತಿನ್ನುವುದರಿಂದ ನೈಸರ್ಗಿಕವಾಗಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡಬಹುದು. ಮೂಲಂಗಿಯನ್ನು ಸೇವಿಸುವುದರಿಂದ ನಿಮ್ಮ ದೇಹದಲ್ಲಿರುವ ಯೂರಿಕ್ ಆಸಿಡ್ ಅನ್ನು ನೈಸರ್ಗಿಕವಾಗಿ ತೆಗೆದು ಹಾಕಬಹುದು.
ಮೂಲಂಗಿಯಲ್ಲಿ ವಿಟಮಿನ್ ಸಿ, ಫ್ಲೇವನಾಯ್ಡ್ಗಳು ಮತ್ತು ಆಂಟಿಆಕ್ಸಿಡೆಂಟ್ಗಳಿವೆ. 90ರಷ್ಟು ನೀರಿನಾಂಶ ಮೂಲಂಗಿಯಲ್ಲಿರುವ ಕಾರಣ, ಇದು ಮೂತ್ರದ ಮೂಲಕ ಯೂರಿಕ್ ಆಸಿಡ್ ಅನ್ನು ಹೊರಗೆ ಹಾಕಲು ಸಹಾಯ ಮಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದೆ, ಮನೆಮದ್ದುಗಳನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ. ಇಲ್ಲಿ ನೀಡಲಾದ ಮಾಹಿತಿಯನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.