ನವದೆಹಲಿ: ಕೇಂದ್ರ ಬಜೆಟ್ ದಿನಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಉಡುಪು ಕಳೆದ ಏಳು ವರ್ಷಗಳಿಂದ ಎಲ್ಲರ ಗಮನ ಸೆಳೆಯುತ್ತಿದೆ.ತಮ್ಮ ಈ ಹಿಂದಿನ ಬಜೆಟ್ ವೇಳೆ ಅವರು ಕೈಮಗ್ಗದ ಸೀರೆಗಳನ್ನು ಧರಿಸುವ ಮೂಲಕ ಅವರು ಗಮನ ಸೆಳೆಯುತ್ತಾ ಬಂದಿದ್ದಾರೆ.ಅದರ ಭಾಗವಾಗಿ ಈ ಬಾರಿ ಅವರು ಬಿಹಾರದ ಮಧುಬನಿ ಕಲೆಯನ್ನು ಒಳಗೊಂಡಿರುವ ಸೀರೆಯನ್ನು ಉಟ್ಟು ಗಮನ ಸೆಳೆದಿದ್ದಾರೆ.
ಈ ಸೀರೆಯನ್ನು ಪದ್ಮ ಪ್ರಶಸ್ತಿ ಪುರಸ್ಕೃತೆ ದುಲಾರಿ ದೇವಿ ಈ ಸೀರೆಯನ್ನು ತಯಾರಿಸಿದ್ದಾರೆ.ಮಧುಬನಿ ಕಲೆಯ ಕೇಂದ್ರವಾಗಿರುವ ಮಿಥಿಲಾ ಆರ್ಟ್ ಇನ್ಸಿಟಿಟ್ಯೂಟ್ಗೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ದುಲಾರಿ ದೇವಿ ಅವರು ಬಿಹಾರದ ಮಧುಬನಿ ಕಲೆಯನ್ನು ಒಳಗೊಂಡಿರುವ ಸೀರೆಯನ್ನು ಉಡುಗೊರೆಯಾಗಿ ನೀಡಿ ಬಜೆಟ್ ಮಂಡನೆ ವೇಳೆ ಅದನ್ನು ಧರಿಸುವಂತೆ ಮನವಿ ಮಾಡಿದ್ದರು.ಈಗ ಅವರ ಮನವಿ ಮೇರೆಗೆ ನಿರ್ಮಲಾ ಸೀತಾರಾಮನ್ ಈ ಮಧುಬನಿ ಸೀರೆಯನ್ನು ಧರಿಸಿದ್ದಾರೆ.
India’s rich textile heritage takes center stage as our Finance Minister @nsitharaman presents the Union Budget 2025 in a stunning Kerala Kasavu cotton saree, beautifully adorned with Madhubani hand-painting.#Madhubani #KeralaKasavu #HandloomLove #SustainableFashion pic.twitter.com/o2HQzrMmvW
— Vidushini Prasad (@vidushini) February 1, 2025
ರಾಷ್ಟ್ರಪತಿಯನ್ನು ಭೇಟಿಗೂ ಮುನ್ನ ಶ್ರೀಮತಿ ಸೀತಾರಾಮನ್ ಅವರು ತಮ್ಮ ನಾರ್ತ್ ಬ್ಲಾಕ್ ಕಛೇರಿಯ ಹೊರಗೆ ತಮ್ಮ ಸೀರೆಯಲ್ಲಿ ಸಾಂಪ್ರದಾಯಿಕ 'ಬ್ರೀಫ್‌ಕೇಸ್' ಫೋಟೋಗೆ ಪೋಸ್ ನೀಡಿದರು. ಇದೆ ವೇಳೆ ಕೈಮಗ್ಗದ ಈ ಬಿಳಿ ಸೀರೆಯಲ್ಲಿ ಮೀನಿನ ಥೀಮ್ ಎಂಬ್ರಾಯಡರಿ ಜೊತೆಗೆ ಚಿನ್ನದ ಅಂಚನ್ನು ಹೊಂದಿರುವ ಈ ಮಧುಬನಿ ಸೀರೆ ಎಲ್ಲರ ಗಮನ ಸೆಳೆಯಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.