Treasure Video: ಹಿಂದೆ ಅಡಗಿರುವ ನಿಧಿಯು ಕಾಲಾನಂತರದಲ್ಲಿ ಬಹಿರಂಗಗೊಳ್ಳುತ್ತದೆ. ದೇವಾಲಯಗಳ ಅಡಿಯಲ್ಲಿ ಮಾತ್ರವಲ್ಲದೆ ಹಲವೆಡೆ ಚಿನ್ನದ ನಿಧಿಗಳು ಕಂಡುಬರುತ್ತವೆ. ಇವುಗಳನ್ನು ಕಂಡು ಜನರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅವರನ್ನು ನೋಡಿ ನೆಟ್ಟಿಗರು ‘ನೀವು ತುಂಬಾ ಅದೃಷ್ಟವಂತರು’ ಎಂದು ಅಸೂಯೆ ಪಟ್ಟಿದ್ದಾರೆ. ನಿಧಿ ಸಿಕ್ಕಿದೆ ಎಂದು ಹೇಳುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅಂತಹದೊಂದು ವಿಡಿಯೋ ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಆ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ನೆಲ ಅಗೆಯುತ್ತಿದ್ದಾಗ ಮಣ್ಣಿನ ಮಡಕೆ ಸಿಕ್ಕಿದೆ. ಇದು ದೊಡ್ಡ ಮೊಟ್ಟೆಯಂತಿದ್ದು, ಅದನ್ನು ಸುತ್ತಿಗೆಯಿಂದ ಒಡೆದು ನೋಡಿದಾಗ ಅದರೊಳಗೆ ಕಣ್ಣು ಕುಕ್ಕುವ ನಿಧಿ ಪತ್ತೆಯಾಗಿದೆ. ಅದರಲ್ಲಿ ಚಿನ್ನದ ವಿಗ್ರಹ ಹಾಗೂ ಎರಡು ಚಿನ್ನದ ಬಳೆಗಳು ಪತ್ತೆಯಾಗಿವೆ. ಅವು ನಿಜವಾದ ಚಿನ್ನವೇ ಅಥವಾ ಅಲ್ಲವೇ ಎಂಬುದು ಇನ್ನೂ ಖಚಿತವಾಗಿ ತಿಳಿದಿಲ್ಲ, ಆದರೆ ಚಿನ್ನದ ವಸ್ತುಗಳನ್ನು ಇಷ್ಟೊಂದು ಉತ್ತಮ ಸ್ಥಿತಿಯಲ್ಲಿ ನೋಡಿದಾಗ ಆಚ್ಚರಿ ಉಂಟು ಮಾಡುವಂತಿದೆ.
ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು
ಈ ವೀಡಿಯೊವನ್ನು ಮೂರು ದಿನಗಳ ಹಿಂದೆ @treasure_sniiper Instagram ಖಾತೆಯಿಂದ ಹಂಚಿಕೊಳ್ಳಲಾಗಿದ್ದು, ಇದು ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು 2 ಕೋಟಿ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹಲವರು ಕಾಮೆಂಟ್ಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ಪೋಸ್ಟ್ ಮಾಡಿದವರ ಪ್ರೊಫೈಲ್ ನೋಡಿದರೆ ಗೊತ್ತಾಗುತ್ತದೆ, ಅವರು ಗುಪ್ತ ನಿಧಿಯನ್ನು ಹುಡುಕಿಕೊಂಡು ಹಲವು ಅದ್ಭುತ ಸಾಹಸಗಳನ್ನು ಮಾಡುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ, ಆ ಕುತೂಹಲಕಾರಿ ವಿಡಿಯೋಗಳನ್ನು ಹಲವರು ಲೈಕ್ ಮಾಡುತ್ತಿದ್ದು, ಇನ್ಸ್ಟಾಗ್ರಾಮ್ನಲ್ಲಿ 2.25 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.