Chandra Arya: ತುಮಕೂರು ಜಿಲ್ಲೆಯ ಸಿರಾ ಮೂಲದವರಾದ ಚಂದ್ರ ಆರ್ಯ ಕೆನಡಾದ ಒಟ್ಟಾವಾದಿಂದ ಅಲ್ಲಿನ ಸಂಸತ್ತಿಗೆ ಸ್ಪರ್ಧಿಸಿ ಗೆದ್ದು ಬೀಗಿದ್ದಾರೆ. ಅಷ್ಟೇಯಲ್ಲ, ಸಂಸದರಾಗಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಜಸ್ಟಿನ್ ಟ್ರುಡೊ ಪ್ರಧಾನ ಮಂತ್ರಿ ಹಾಗು ಲಿಬರಲ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಗ ಚಂದ್ರ ಆರ್ಯ ಅವರು ಕೆನಡಾದ ಪ್ರಧಾನ ಮಂತ್ರಿ ಅಭ್ಯರ್ಥಿ ಕೂಡ ಆಗಿ ಹೊರಹೊಮ್ಮಿದ್ದಾರೆ.
I am running for the position of Prime Minister of Canada.
Our nation faces structural challenges that require tough solutions.
We must make bold political decisions to secure prosperity for our children and grandchildren.
I have outlined everything in the statement provided… pic.twitter.com/bIdK0RFX18— Chandra Arya (@AryaCanada) January 12, 2025
ಮಗ ಬೇರೊಂದು ದೇಶದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗುತ್ತಾನೆ ಎನ್ನುವುದು ಯಾವ ತಂದೆಗೆ ತಾನೇ ಖುಷಿಯಾಗುವುದಿಲ್ಲ ಹೇಳಿ. ಅಚ್ಚರಿಯ ಬೆಳವಣಿಗೆಯಲ್ಲಿ ಕೆನಡಾದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿರುವ ಚಂದ್ರ ಆರ್ಯ ಅವರಿಗೆ ಅವರ ತಂದೆ ಕೆ. ಗೋವಿಂದಯ್ಯ ಮುಂದಿನ ತಲೆಮಾರಿಗೆ ಒಳಿತಾಗುವಂತಹ ಒಳ್ಳೆಯ ಕೆಲಸ ಮಾಡು ಎಂಬ ಅಪೂರ್ವವಾದ ಸಲಹೆಯನ್ನು ನೀಡಿದ್ದಾರೆ.
ಇದನ್ನೂ ಓದಿ- ಸಾಫ್ಟ್ವೇರ್ ಇಂಜಿನಿಯರ್ಗಳಿಗೆ ಉದ್ಯೋಗ ಘೋಷಣೆ ಮಾಡಿದ ಎಲಾನ್ ಮಸ್ಕ್
ಸಾಮಾನ್ಯವಾಗಿ ಚಂದ್ರ ಆರ್ಯ ಅವರು ತಂದೆ ಕೆ. ಗೋವಿಂದಯ್ಯ ಅವರಿಗೆ ಸಂಜೆ 6ರಿಂದ 7ಗಂಟೆಯ ನಡುವೆ ಫೋನ್ ಮಾಡುತ್ತಿದ್ದರಂತೆ. ಆದರೆ ಜನವರಿ 5ನೇ ತಾರೀಖು ಬೆಳಿಗ್ಗೆ 10ಗಂಟೆಗೆ ಕಾಲ್ ಮಾಡಿದ್ದಾರೆ. ಇದರಿಂದ ಸ್ವಲ್ಪ ಗಾಬರಿಯಾಗಿಯೇ ಕಾಲ್ ರಿಸೀವ್ ಮಾಡಿದ ಗೋವಿಂದಯ್ಯ ಅವರಿಗೆ ಆ ಕಡೆಯಿಂದ ಅಪ್ಪ… ನಾನು ಕೆನಡಾ ದೇಶದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಯೋಚಿಸುತ್ತಿದ್ದೇನೆ. ಕೆಲವೇ ಹೊತ್ತಿನಲ್ಲಿ ನಾಮಪತ್ರ ಸಲ್ಲಿಸಬೇಕು. ಆಶೀರ್ವಾದ ಮಾಡಿ’ ಎಂದು ಚಂದ್ರ ಆರ್ಯ ಹೇಳಿದರಂತೆ.
ಇದನ್ನೂ ಓದಿ- ಟಿಕ್ಟಾಕ್ನ ಹೊಸ ಮಾಲೀಕರಾಗ್ತಾರಾ ಎಲೋನ್ ಮಸ್ಕ್? ಮತ್ತೇ ಭಾರತಕ್ಕೆ ಬರುತ್ತಾ!
ಚಂದ್ರ ಆರ್ಯ ಯಾವಾಗಲೂ ನಾನು ರಾಜಕಾರಣಿ ಆಗುತ್ತೇನೆ, ಉನ್ನತ ಹುದ್ದೆಗೆ ಹೋಗುತ್ತೇನೆ ಎಂದು ಹೇಳುತ್ತಿದ್ದರಂತೆ. ಆ ಮಾತು ಇಂದು ನಿಜವಾಗಿದೆ ಎಂದು ಕೆ. ಗೋವಿಂದಯ್ಯ ಅಭಿಪ್ರಾಯಪಟ್ಟಿದ್ದಾರೆ. ಚಂದ್ರ ಆರ್ಯ 2015ರಲ್ಲಿ ಮೊದಲ ಬಾರಿಗೆ ಕೆನಡಾದ ಹೌಸ್ ಆಫ್ ಕಾಮನ್ಸ್ ಗೆ ಚುನಾಯಿತರಾದರು. ಈಗ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ. ಗೆದ್ದರೆ ಬಲು ಮುಖ್ಯವಾಗಿ ಹದಗೆಟ್ಟಿರುವ ಭಾರತ ಮತ್ತು ಕೆನಡಾ ಸಂಬಂಧ ಸುಧಾರಿಸುವಂತೆ ಮಾಡಬೇಕಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.