Symptoms of a lack of hemoglobin: ನಿಮ್ಮ ಆರೋಗ್ಯವನ್ನು ಸದೃಢವಾಗಿಡಲು ಬಯಸಿದರೆ, ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಿಮೋಗ್ಲೋಬಿನ್ನ ಸಾಮಾನ್ಯ ಶ್ರೇಣಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ, ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಆದಷ್ಟು ಬೇಗ ಗುರುತಿಸಿ ಚಿಕಿತ್ಸೆ ತೆಗೆದುಕೊಳ್ಳಬೇಕು. ಇದರಿಂದ ನಿಮ್ಮ ಆರೋಗ್ಯಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬಹುದು.
ಹಿಮೋಗ್ಲೋಬಿನ್ ಸಾಮಾನ್ಯ ಮಟ್ಟ
ಆರೋಗ್ಯಕರ ಮಾನವ ದೇಹದ ಹಿಮೋಗ್ಲೋಬಿನ್ 120 ಗ್ರಾಂ/ಲೀಟರ್ನಿಂದ 180 ಗ್ರಾಂ/ಲೀಟರ್ ನಡುವೆ ಇರಬೇಕು. NCBI ಪ್ರಕಾರ, ಪುರುಷರಲ್ಲಿ ಸಾಮಾನ್ಯ ಹಿಮೋಗ್ಲೋಬಿನ್ ಅಥವಾ Hb ಮಟ್ಟವು 14 ರಿಂದ 18 g/dl ಆಗಿರಬೇಕು. ಅದೇ ರೀತಿ ಮಹಿಳೆಯರ ಸಾಮಾನ್ಯ ಹಿಮೋಗ್ಲೋಬಿನ್ ಅಥವಾ Hb ಮಟ್ಟವು 12 ರಿಂದ 16 g/dl ನಡುವೆ ಇರಬೇಕು.
ಇದನ್ನೂ ಓದಿ: ತಲೆಕೆಳಗಾಗಿ ನಡೆಯುವುದರಿಂದ ಸಿಗುವ ಈ 6 ಪ್ರಯೋಜನಗಳ ಬಗ್ಗೆ ನಿಮಗೆಷ್ಟು ಗೊತ್ತು ..!
ಹಿಮೋಗ್ಲೋಬಿನ್ ಕೊರತೆಯ ಲಕ್ಷಣಗಳು
ದೇಹದ ಹಿಮೋಗ್ಲೋಬಿನ್ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆಯಿದ್ದರೆ, ನಿಮ್ಮ ದೇಹದಲ್ಲಿ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತಲೆನೋವು ಮತ್ತು ದಣಿವು ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯನ್ನು ಸೂಚಿಸುತ್ತದೆ. ಇದಲ್ಲದೆ ನಿಮ್ಮ ಹೃದಯ ಬಡಿತವು ಇದ್ದಕ್ಕಿದ್ದಂತೆ ಹೆಚ್ಚಾದರೆ, ಕೂಡಲೇ ವೈದ್ಯರ ಹತ್ತಿರ ಪರೀಕ್ಷಿಸಿಕೊಳ್ಳಬೇಕು. ಚರ್ಮದ ಹಳದಿ ಬಣ್ಣವು ಸಹ ಅಪಾಯದ ಸಂಕೇತವಾಗಿದೆ.
ಗಮನಿಸಬೇಕಾದ ವಿಷಯ
ನೀವು ತಲೆತಿರುಗುವಿಕೆಯನ್ನು ಅನುಭವಿಸುತ್ತಿದ್ದರೆ, ಈ ರೋಗಲಕ್ಷಣವನ್ನು ನಿರ್ಲಕ್ಷಿಸುವ ತಪ್ಪನ್ನು ಎಂದಿಗೂ ಮಾಡಬಾರದು. ಎದೆಯಲ್ಲಿ ನೋವಿನ ಭಾವನೆ, ಈ ರೋಗಲಕ್ಷಣವು ರಕ್ತಹೀನತೆಯನ್ನು ಸೂಚಿಸುತ್ತದೆ. ನೀವು ಒಟ್ಟಿಗೆ ಇಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಸಮಯಕ್ಕೆ ಸರಿಯಾಗಿ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನೀವು ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಹಿಮೋಗ್ಲೋಬಿನ್ ಮಟ್ಟವು ಕಡಿಮೆಯಾದರೆ ನೀವು ವಿವಿಧ ರೀತಿಯ ಕಾಯಿಲೆಗೆ ಗುರಿಯಾಗುತ್ತೀರಿ, ಕೆಲವರಿಗೆ ಪ್ರಾಣಕ್ಕೆ ಕುತ್ತುಂಟು ಮಾಡಬಹುದು. ಹೀಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತವಾಗಿದೆ.
ಇದನ್ನೂ ಓದಿ: Uric Acid: ಹೆಚ್ಚಿದ ಯೂರಿಕ್ ಆಮ್ಲವನ್ನ ಕಡಿಮೆ ಮಾಡಲು ಈ ಮನೆಮದ್ದುಗಳನ್ನ ಟ್ರೈ ಮಾಡಿ ನೋಡಿ!!
(ಗಮನಿಸಿರಿ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannda News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.