Uddhav Thackeray on Savarkar row: ಅಂಡಮಾನ್ನ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ 14 ವರ್ಷ ಊಹಿಸಲಾಗದ ಹಿಂಸೆ ಅನುಭವಿಸಿದರು. ನಾವು ಸಾವರ್ಕರ್ ಅವರಿಗೆ ಆಗುವ ಅವಮಾನವನ್ನು ಸಹಿಸಲಾರೆವು ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಕೆ ಹರಿಪ್ರಸಾದ್ರವರೇ ಡಿಕೆಶಿ ಯಾವ ಕಾರಣಕ್ಕಾಗಿ ತಿಹಾರ್ ಜೈಲಿಗೆ ಹೋದರು ಎಂಬುದನ್ನೂ ಹೇಳಿ. ಹಾಗೆ ಜೈಲಿಗೆ ಹೋಗಿಬಂದ ಇತರ ಕಾಂಗ್ರೆಸಿಗರ ಬಗ್ಗೆಯೂ ತಿಳಿಸಿ. ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿ ಬಂದವರು ನಿಮ್ಮ ಪಕ್ಷದ ವಿನಯ್ ಕುಲಕರ್ಣಿಯೇ ವಿನಾ ವೀರ ಸಾವರ್ಕರ್ ಅಲ್ಲ ಅಂತಾ ಬಿಜೆಪಿ ಟೀಕಿಸಿದೆ.
ಸಾವರ್ಕರ್ ಬಗ್ಗೆ ಕಾಂಗ್ರೆಸ್ನವರಿಗೆ ಏನು ಗೊತ್ತು?, ಸಾವರ್ಕರ್ ಫೋಟೋ ಶಿವಮೊಗ್ಗದಲ್ಲಿ ಒಂದು ಸರ್ಕಲ್ಗೆ ಹಾಕಿದರೆ ಮುಸಲ್ಮಾನರಿಗೆ ಯಾಕೆ ಉರಿ ಅಂತ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ರು. ಬೆಂಗಳೂರಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ದೇಶ ಒಡೆಯುವ ವಿಭಜಕ ಶಕ್ತಿಗಳಿಗೆ ಸಿದ್ದರಾಮಯ್ಯ ಆದರ್ಶ ಆಗಿದ್ದಾರೆ ಅಂತ ಕಿಡಿಕಾರಿದ್ರು.
Ranjit Savarkar On Mahatma Gandhi - 'ಭಾರತದಂತಹ ವಿಶಾಲ ದೇಶದಲ್ಲಿ, ಈ ದೇಶವನ್ನು ಕಟ್ಟಲು ಸಹಾಯ ಮಾಡಿದ ಸಾವಿರಾರು ಮಹಾನ್ ವ್ಯಕ್ತಿಗಳನ್ನು ಮರೆತುಬಿಡಲಾಗಿದೆ. ಈ ದೇಶದ ಇತಿಹಾಸ 5000 ವರ್ಷಗಳಷ್ಟು ಹಳೆಯದು. ನನ್ನ ಪ್ರಕಾರ ಗಾಂಧಿ (Mahatma Gandhi) ರಾಷ್ಟ್ರಪಿತ (Father Of Nation) ಅಲ್ಲ. ಈ ದೇಶ ಕೇವಲ ನಲವತ್ತೈದು ವರ್ಷಗಳಷ್ಟು ಹಳೆಯದಲ್ಲ. ನಾನು ಕೂಡ ರಾಷ್ಟ್ರಪಿತನ ಕಲ್ಪನೆಯನ್ನು ನಂಬುವುದಿಲ್ಲ' ಎಂದು ವೀರ ಸಾವರ್ಕರ್ (Veer Savarkar) ಅವರ ಪುತ್ರ ರಂಜೀತ್ ಸಾವರ್ಕರ್ (Ranjit Savarkar) ಹೇಳಿದ್ದಾರೆ.
Mohan Bhagvat On Veer Savarkar - ಸರ್ ಸಯ್ಯದ್ ಅಹ್ಮದ್ ಖಾನ್ (Sir Sayed Ahmed Khan) ಅವರನ್ನು ಹಿಂದೂ ಮಹಾಸಭಾ (Muslim Mahasabha) ಮೂಲಕ ಸ್ವಾಗತಿಸಲಾಗಿತ್ತು ಮತ್ತು ಆಗ ಅವರನ್ನು ಮೊದಲ ಮುಸ್ಲಿಂ ಬ್ಯಾರಿಸ್ಟರ್ ಎಂದು ಉಲ್ಲೇಖಿಸಿದಾಗ ಅವರು ನಾನು ಇತರರಿಗಿಂತ ಭಿನ್ನವಾಗಿದ್ದೆನೆಯೇ? ಎಂದು ಪ್ರಶ್ನಿಸಿದ್ದರು ಎಂದು ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿಗಾಗಿ ಅವರ ಹೆಸರನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಬೆನ್ನಲ್ಲೇ ಈಗ ರಾಜ್ಯದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಿದ್ದಗಂಗಾ ಶ್ರೀಗಳಿಗೆ ಭಾರತ ನೀಡುವಂತೆ ಆಗ್ರಹಿಸಿದ್ದಾರೆ.
ವೀರ್ ಸಾವರ್ಕರ್ ಅವರಿಗೆ ಭಾರತ್ ರತ್ನ ಪ್ರಶಸ್ತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ಭಾರತ ರತ್ನದಂತ ಪುರಸ್ಕಾರವನ್ನು ನೀಡುವುದಾದರೆ ಸಾವರ್ಕರ್ ಬದಲು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರಂತಹವರಿಗೆ ನೀಡಬೇಕು ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಭಾರತ್ ರತ್ನಕ್ಕೆ ವಿನಾಯಕ್ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಬಿಜೆಪಿ ಪ್ರಸ್ತಾಪಿಸಿರುವ ಮಧ್ಯೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 1857 ರ ದಂಗೆಯನ್ನು ಭಾರತೀಯ ಸ್ವಾತಂತ್ರ್ಯದ ಮೊದಲ ಸಂಗ್ರಾಮ ಎಂದು ಕರೆದ ಕೀರ್ತಿ ಸಾವರ್ಕರ್ ಅವರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.