ಬೆಂಗಳೂರು: ಚಿನ್ನದ ಚಮಚ ಬಾಯಲ್ಲಿಟ್ಟುಕೊಂಡು ಬೆಳೆದ ರಾಜಕೀಯ ನಿರುದ್ಯೋಗಿ ರಾಹುಲ್ ಗಾಂಧಿ ವೀರ ಸಾವರ್ಕರ್ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವೆಂದು ಬಿಜೆಪಿ ಟೀಕಿಸಿದೆ.
ಕ್ಷಮಾಪಣಾ ಪತ್ರ ಬರೆದು ಬ್ರಿಟಿಷರ ಅಡಿಯಾಳಾಗಿದ್ದ ವೀರ ಸಾವರ್ಕರ್ ವೀರನಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ‘ಕಠಿಣಾತಿ ಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ವೀರನಲ್ಲ ಎಂದಾದರೆ, ಅಪ್ರಬುದ್ಧ ನಡೆಗಳಿಂದ ನ್ಯಾಯಾಲಯದಿಂದ ಆಗಾಗ್ಗೆ ಛೀಮಾರಿ ಹಾಕಿಸಿಕೊಂಡು ಕ್ಷಮೆ ಕೇಳುವ ರಾಹುಲ್ ಗಾಂಧಿ ಏನು?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಮತದಾರರ ಜಾಗೃತಿ ಹೆಸರಲ್ಲಿ ಬಿಜೆಪಿಯಿಂದ ಡಾಟಾ ಕಳ್ಳತನ: ಕಾಂಗ್ರೆಸ್ ಗಂಭೀರ ಆರೋಪ
ಸಾವರ್ಕರ್ - ಅಂಡಮಾನ್ ಜೈಲು, 50 ವರ್ಷ ಜೀವಾವಧಿ ಶಿಕ್ಷೆ, ಹೆಗಲಲ್ಲಿ ಗಾಣ, ಏಕಾಂತ ವಾಸ, ಕಳಪೆ ಆಹಾರ ಪೂರೈಕೆ.
ನೆಹರೂ - ಪಂಜಾಬಿನ ನಭಾ ಜೈಲಿನಲ್ಲಿ ಕೇವಲ 2 ವರ್ಷ ಶಿಕ್ಷೆ. ಜೈಲಿನೊಳಗೆ ಸಕಲ ವ್ಯವಸ್ಥೆ. 2 ವರ್ಷದ ಶಿಕ್ಷೆ ಕ್ಷಮಾಪಣಾ ಪತ್ರದ ಮೂಲಕ ಕೆಲವೇ ದಿನದಲ್ಲಿ ಅಂತ್ಯ.
ನೆಹರೂ ಪರಾಕ್ರಮಿಯೇ?#VeerSavarkar
— BJP Karnataka (@BJP4Karnataka) November 18, 2022
‘ಸಾವರ್ಕರ್ - ಅಂಡಮಾನ್ ಜೈಲು, 50 ವರ್ಷ ಜೀವಾವಧಿ ಶಿಕ್ಷೆ, ಹೆಗಲಲ್ಲಿ ಗಾಣ, ಏಕಾಂತ ವಾಸ, ಕಳಪೆ ಆಹಾರ ಪೂರೈಕೆ. ನೆಹರೂ - ಪಂಜಾಬಿನ ನಭಾ ಜೈಲಿನಲ್ಲಿ ಕೇವಲ 2 ವರ್ಷ ಶಿಕ್ಷೆ. ಜೈಲಿನೊಳಗೆ ಸಕಲ ವ್ಯವಸ್ಥೆ. 2 ವರ್ಷದ ಶಿಕ್ಷೆ ಕ್ಷಮಾಪಣಾ ಪತ್ರದ ಮೂಲಕ ಕೆಲವೇ ದಿನದಲ್ಲಿ ಅಂತ್ಯ. ನೆಹರೂ ಪರಾಕ್ರಮಿಯೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
‘ನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ? ಕೇವಲ 2 ವರ್ಷದ ಶಿಕ್ಷೆಯನ್ನೇ ತಡೆದುಕೊಳ್ಳಲಾರದ ಕುಟುಂಬದವರು ಸ್ವಾತಂತ್ರ್ಯದ ಹೆಗ್ಗುರುತು, ಕಠಿಣಾತಿಕಠಿಣ ಶಿಕ್ಷೆ ಎದುರಿಸಿದ ಸಾವರ್ಕರ್ ಅವರ ವೀರತ್ವದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ’ ಅಂತಾ ಬಿಜೆಪಿ ಕುಟುಕಿದೆ.
ಇದನ್ನೂ ಓದಿ: ಹಿಂದೂ ಪದ ಕುರಿತ ಹೇಳಿಕೆ: ಸತೀಶ್ ಜಾರಕಿಹೊಳಿಗೆ ಚಕ್ರವರ್ತಿ ಸೂಲಿಬೆಲೆ ಬಹಿರಂಗ ಸವಾಲು!
ಸಾವರ್ಕರ್ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ ಅವರೇ "ಭಾರತದ ವೀರ ಸುಪುತ್ರ" ಎಂದು ಸಂಬೋಧಿಸಿ #VeerSavarkar ಜನ್ಮಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು.
ಸಾವರ್ಕರ್ ಕುರಿತಾಗಿ ಅಂಚೆಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯಚಿತ್ರ ನಿರ್ಮಿಸಲು ಆದೇಶ ನೀಡಿದ್ದರು. ಸಾವರ್ಕರ್ ಟ್ರಸ್ಟ್ಗೆ 11 ಸಾವಿರ ದೇಣಿಗೆ ಕೂಡಾ ನೀಡಿದ್ದರು. pic.twitter.com/UdjiE33zwk
— BJP Karnataka (@BJP4Karnataka) November 18, 2022
‘ಸಾವರ್ಕರ್ ಧೀರತೆಗೆ ಬೆರಗಾಗಿ ಸ್ವತಃ ಇಂದಿರಾ ಗಾಂಧಿ ಅವರೇ ‘ಭಾರತದ ವೀರ ಸುಪುತ್ರ’ ಎಂದು ಸಂಬೋಧಿಸಿ #VeerSavarkar ಜನ್ಮಶತಮಾನೋತ್ಸವ ಆಚರಣೆಗೆ ಸಹಕರಿಸಿದ್ದರು. ಸಾವರ್ಕರ್ ಕುರಿತಾಗಿ ಅಂಚೆ ಚೀಟಿ ಬಿಡುಗಡೆ ಮಾಡಿ, ಸಾಕ್ಷ್ಯಚಿತ್ರ ನಿರ್ಮಿಸಲು ಆದೇಶ ನೀಡಿದ್ದರು. ಸಾವರ್ಕರ್ ಟ್ರಸ್ಟ್ಗೆ 11 ಸಾವಿರ ರೂ. ದೇಣಿಗೆ ಕೂಡ ನೀಡಿದ್ದರು’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.