ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರತಿಮೆಯನ್ನು ಧ್ವಂಸಗೊಳಿಸಿದ ವ್ಯಕ್ತಿಯನ್ನೂ ಕಾಂಗ್ರೆಸ್ ಬ್ರದರ್ ಎನ್ನಬಹುದು. ಹೀಗಾದರೆ ಹಿಂದೂಗಳ ಕಥೆ ಏನೆಂದು ಚಿಂತೆಯಾಗುತ್ತದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಈಗಾಗಲೇ ಅಪ್ಲೋಡ್ ಮಾಡಿರುವ ಇ ಖಾತಾಗಳಲ್ಲಿ ಮಾಲೀಕರ ಹೆಸರು, ಭೂಮಿಯ ಅಳತೆಯಲ್ಲಿ ತಪ್ಪಾಗಿದೆ. ಆಸ್ತಿ ವಿವರ ಸರಿಯಾಗಿ ಸಿಗುತ್ತಿಲ್ಲ. ಎನ್ಆರ್ಐ ಮಾಲೀಕತ್ವದ ಆಸ್ತಿಗೆ ಅಫಿಡವಿಟ್ ಮಾಡಬೇಕಿದೆ. ಈ ಯಾವ ಕೆಲಸಗಳೂ ಆಗಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಸ್ವಾಮಿ ವಿರೋಧ ಪಕ್ಷದ ನಾಯಕ ಆರ್ ಆಶೋಕ್ ಅವರೇ, ನಿಮ್ಮ ಟ್ವೀಟ್ ನಿಮ್ಮ ಪರಮ ಅಜ್ಞಾನದ ಫಲವೋ? ಅಥವಾ ವಿರೋಧ ಪಕ್ಷದ ನಾಯಕ ಅಸ್ವಿತ್ವದಲ್ಲಿದ್ದಾರೆ ಎಂದು ಜನರಿಗೆ ತಿಳಿಸಲು ಟ್ವೀಟ್ ಮಾಡುತ್ತಿರೋ?? ಇದು ನಮ್ಮನ್ನೂ ಸೇರಿಸಿಕೊಂಡಂತೆ ರಾಜ್ಯದ ಜನಸಾಮಾನ್ಯರಿಗೂ ಅರ್ಥವಾಗದೆ ಇರುವ ಯಕ್ಷ ಪ್ರಶ್ನೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಪಾಪರ್ ಆಗಿ ದಿವಾಳಿಯ ಪರಮಾವಧಿಗೆ ತಲುಪಿದೆ. ಕೇರಳ ಸರ್ಕಾರ ದಿವಾಳಿಯಾಗಿ ಸಾಲವೂ ಸಿಗುತ್ತಿಲ್ಲ. ಅದೇ ರೀತಿ ನಮ್ಮ ರಾಜ್ಯವೂ ಆರ್ಥಿಕತೆಯಲ್ಲಿ ಕೊನೆಯ ಸ್ಥಾನಕ್ಕೆ ಬರಲಿದೆ. ಸರ್ಕಾರದ ಆಸ್ತಿಗಳನ್ನು ಮಾರಾಟ ಮಾಡಿ ದುಡ್ಡು ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, 40 ಸಾವಿರ ಕೋಟಿಯಲ್ಲಿ ಬಿಜೆಪಿಯ ದೆಹಲಿ ನಾಯಕರಿಗೆ ಪಾಲೆಷ್ಟು?, ರಾಜ್ಯದ ನಾಯಕರ ಪಾಲೆಷ್ಟು?, ಹೆಣದಿಂದ ಸಂಪಾದಿಸಿದ ಈ ಪಾಪದ ಹಣದಿಂದ ಮಾಲ್ಡಿವ್ಸ್ನಲ್ಲಿ ತಾವು ಹೂಡಿಕೆ ಮಾಡಿದ್ದೆಷ್ಟು? ಅಮೆರಿಕದಲ್ಲಿ ಖರೀದಿಸಿದ ಮನೆಗಳೆಷ್ಟು? ಫಾರ್ಮ್ ಲ್ಯಾಂಡ್ಗಳೆಷ್ಟು? ಮತ್ತು ದುಬೈನಲ್ಲಿ ಮಾಡಿದ ಆಸ್ತಿಗಳೆಷ್ಟು? ಮಾತಾಡಿ ವಿಜಯೇಂದ್ರ ಮಾತಾಡಿ! ಎಂದು ಕಾಂಗ್ರೆಸ್ ಟೀಕಿಸಿದೆ.
Rs 40,000 crore Covid scam: ಸ್ವಪಕ್ಷದವರಿಂದಲೇ ಬಿಜೆಪಿಯ 40 ಸಾವಿರ ಕೋಟಿಯ ಕೋವಿಡ್ ಹಗರಣವನ್ನು ಬಹಿರಂಗಪಡಿಸಿದರೂ "ನಾ ಖವುಂಗಾ ನಾ ಖಾನೆದುಂಗ" ಎಂದು ಭಾಷಣ ಬಿಗಿಯುವ ಪ್ರಧಾನಿ ಮೋದಿಯವರು "ಕೈ ಕಟ್ ಬಾಯ್ ಮುಚ್" ಎನ್ನುವಂತೆ ಸುಮ್ಮನಿರುವುದೇಕೆ? ಐಟಿ, ಇಡಿ, ಸಿಬಿಐ ಮುಂತಾದ ತನಿಖಾ ಸಂಸ್ಥೆಗಳು ಎಲ್ಲಿ ಹೋದವು? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Rs 40,000 crore Covid scam: ಸ್ವತಃ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರೂ, BSY & ಸನ್ಸ್ ವಿರುದ್ಧ ಇಷ್ಟೆಲ್ಲಾ ಮಾತಾಡಿದರೂ ಯತ್ನಾಳ್ ವಿರುದ್ಧ ಬಿಜೆಪಿ ಕಠಿಣ ಕ್ರಮ ಕೈಗೊಳ್ಳದಿರುವುದು ನೋಡಿದರೆ 40 ಸಾವಿರ ಕೋಟಿ ಹಗರಣದ ಕಬಂದ ಬಾಹುಗಳು ವಿಸ್ತಾರವಾಗಿ ಹಬ್ಬಿರುವುದು ಸ್ಪಷ್ಟವೆಂದು ಕಾಂಗ್ರೆಸ್ ಟೀಕಿಸಿದೆ.
ʼಬಿಜೆಪಿಯಲ್ಲಿನ ಕಚ್ಚಾಟದಿಂದಾಗಿ ಸಾಮ್ರಾಟರು "ಶೋಕ" ರಾಗ ಹಾಡುತ್ತಿದ್ದಾರೆ. ಅಶೋಕರಲ್ಲಿ ಆ ಕಳೆದು "ಶೋಕ" ಮಾತ್ರ ಉಳಿದುಕೊಂಡಿದೆ! ಸದನದಲ್ಲಿ ಏನು ಚರ್ಚಿಸಬೇಕು, ಏನು ಮಾಡಬೇಕು ಎನ್ನುವುದು ವಿರೋಧ ಪಕ್ಷದ ನಾಯಕನ ತೀರ್ಮಾನವೋ, ಶಾಸಕನೊಬ್ಬನ ತೀರ್ಮಾನವೋ? ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕ ಅಶೋಕ್ ಅವರೋ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಅವರೋ ಎಂಬ ಗೊಂದಲ ಸ್ವತಃ ಬಿಜೆಪಿಗರಿಗೆ ಇದ್ದಂತಿದೆ.
ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಮುಸ್ಲಿಮರ ಓಲೈಕೆಗೆ ಹತ್ತು ಸಾವಿರ ಕೋಟಿ ಅನುದಾನ ನೀಡುವುದಾಗಿ ರಾಜ್ಯ ಸರ್ಕಾರ ಹೇಳಿಕೊಂಡಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ರೈತ ವಿರೋಧಿ ಸರಕಾರವನ್ನು ಕಂಡಿರಲಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ತಮ್ಮ ಕಾರ್ಯಕರ್ತರಿಂದಲೇ ಛೀಮಾರಿ ಹಾಕಿಕೊಂಡ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ವಪಕ್ಷದವರ ಬೆನ್ನಿಗೆ ಚೂರಿ ಹಾಕಿದ ಮಾಜಿ ಸಚಿವ ಆರ್.ಅಶೋಕ್ ಅವರನ್ನು ಅವರ ಪಕ್ಷದ ನಾಯಕರು, ಕಾರ್ಯಕರ್ತರೇ ಒಪ್ಪುತ್ತಿಲ್ಲ, ಇನ್ನು ಜನತೆ ಒಪ್ಪುವರೇ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ದಿಶಾಂಕ್ ಆಪ್(Dishank App) ಡೌನ್ಲೋಡ್ ಮಾಡಿಕೊಳ್ಳಿ ನಂತರ ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ, ಲಾಗ್ ಇನ್ ಆಗಿ. ನಾಗರೀಕರು ಈ ಕೆಳಕಂಡ ಕಾರಣಗಳಿಗಾಗಿ ಭೂಮಾಪನ ಇಲಾಖೆಗೆ ಅವರ ಸ್ವಂತ ಜಮೀನಿನ ನಕ್ಷೆಗಾಗಿ ಅರ್ಜಿ ಸಲ್ಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.