ಹುಬ್ಬಳ್ಳಿ ನಗರದ ಚಿನ್ಮಯ ಮಹಾವಿದ್ಯಾಲಯದಿಂದ ಪ್ರಾರಂಭಗೊಂಡ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ನೂರಾರು ವಿದ್ಯಾರ್ಥಿಗಳು, 21 ಅಡಿ ಉದ್ದ ಹಾಗೂ 14 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜವನ್ನು ಹಿಡಿದು, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಸರ್ಕಾರದ ನಿರ್ದೇಶನದಂತೆ,'ನನ್ನ ಮಣ್ಣು ನನ್ನ ದೇಶ' ಕಾರ್ಯಕ್ರಮ ಅಂಗವಾಗಿ “ಹರ್ ಘರ್ ತಿರಂಗಾ” ಅಭಿಯಾನ ನಡೆಸಲಾಗುತ್ತದೆ. ಅದರನ್ವಯ ಆಗಷ್ಟ್ 13 ರಿಂದ ಆಗಷ್ಟ್ 15ರವರೆಗೆ ರಾಜ್ಯಾದ್ಯಂತ ರಾಷ್ಟ್ರಧ್ವಜಗಳನ್ನು ಹಾರಿಸಲು ತೀರ್ಮಾನಿಸಲಾಗಿದ್ದು,
ಹರ್ ಘರ್ ತಿರಂಗಾ ಅಂಗವಾಗಿ ಮಲ್ಲೇಶ್ವರಂ ಕ್ಷೇತ್ರದ ಶಾಸಕರಾದ ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್.ಅಶ್ವತ್ಥ ನಾರಾಯಣ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯ ನಿವಾಸಿಗಳಾಗಿರುವ ವರನಟ, ದಿ. ಡಾ. ರಾಜಕುಮಾರ್ ಅವರ ಕುಟುಂಬದ ಸದಸ್ಯರಿಗೆ ರಾಷ್ಟ್ರಧ್ವಜ ಹಸ್ತಾಂತರಿಸಿದರು. ಪುನೀತ್ ರಾಜಕುಮಾರ್ ಮನೆಗೆ ತೆರಳಿದ ಅವರು, ಪುನೀತ್ ಅವರ ಪತ್ನಿ ಅಶ್ವಿನಿ ಅವರಿಗೆ ತ್ರಿವರ್ಣ ಧ್ವಜವನ್ನು ಕೈಗಿತ್ತರು. ನಂತರ ನಟ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ತೆರಳಿದ ಸಚಿವರು, ಅವರಿಗೂ ತಿರಂಗವನ್ನು ಹಸ್ತಾಂತರಿಸಿದರು.
ಕಾಂಗ್ರೆಸ್ನವ್ರು ತಿರಂಗಾ ಬಗ್ಗೆ ಉಡಾಫೆಯಾಗಿ ಮಾತಾಡ್ತಾರೆ ಎಂದು ಚಿಕ್ಕೋಡಿಯಲ್ಲಿ ಶಾಸಕ ಪಿ.ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಕಾಂಗ್ರೆಸ್ನವರ ಹತಾಶಾ ರಾಷ್ಟ್ರ ಪ್ರೇಮ ಬೇಕಾಗಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷವಾದ್ರೂ ಸಹ ಪ್ರತಿಯೊಬ್ಬ ಭಾರತೀಯ ರಾಷ್ಟ್ರ ಧ್ವಜ ಹಿಡಿರಿ ಎಂದು ಹೇಳಲು ಆಗಲಿಲ್ಲ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಸರ್ಕಾರ ಪಾಲಿಸ್ಟರ್ ಧ್ವಜಗಳ ಬಳಕೆಯ ಆದೇಶವನ್ನು ತಕ್ಷಣ ವಾಪಸು ಪಡೆದು ಖಾದಿ ಬಟ್ಟೆಯ ರಾಷ್ಟ್ರಧ್ವಜಗಳ ತಯಾರಿಕೆಗಷ್ಟೇ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಮೊದಲು ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿರುವ ಸಚಿವ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು. ಅವರನ್ನು ವಜಾ ಮಾಡಿದರೆ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.
ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು.ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ.ಈ ಘಟನೆಯಿಂದ ಬಿಜೆಪಿಯ ದೇಶಪ್ರೇಮದ ಹಿಂದಿರುವ ಸ್ವಾರ್ಥದ ಮುಖವಾಡ ಬಯಲಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಕಿಡಿ ಕಾರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.