ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 10ಕ್ಕೆ ನಿಗದಿಪಡಿಸಿದೆ. ಮೈಸೂರಿನ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಂಗವಾರ ನಡೆಸಿತು.
ಬೆಂಗಳೂರು :ತುಮಕೂರು ಮತ್ತು ಹಾಸನದಲ್ಲಿ ಮುಂದಿನ ತಿಂಗಳ 2 ಮತ್ತು 5 ರಂದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ನಡೆಯಲಿದೆ. ಈ ಸಮಾವೇಶಗಳ ಮೂಲಕ ಸರ್ಕಾರ ತನ್ನ ಬದ್ದತೆಯನ್ನು ಜನತೆಗೆ ತಲುಪಿಸುವ ಯೋಜನೆಗಳನ್ನು ವಿಸ್ತರಿಸಲು ಸಜ್ಜಾಗಿದ್ದು. Muda, ವಾಲ್ಮೀಕಿ ಹಾಗೂ Wakf ಆರೋಪದಿಂದ ಗ್ಯಾರೆಂಟಿ ಕಡೆ ಜನರ ಗಮನ ಸೆಳೆಯಲು ಪ್ರಯತ್ನ ಮಾಡುತ್ತಿದೆ.
ಮೈಸೂರು ಲೋಕಾಯುಕ್ತ ಅಧಿಕಾರಿಗಳಿಂದ ಸಿಎಂಗೆ ಡ್ರಿಲ್
2 ಗಂಟೆಗಳ ಕಾಲ ವಿಚಾರಣೆ, ಸಿದ್ದರಾಮಯ್ಯ ಕೂಲ್ ಕೂಲ್
ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ರಿಂದ ಸಿಎಂ ವಿಚಾರಣೆ
ವಿರೋಧ ಪಕ್ಷದ ವಿರುದ್ಧ ಹರಿಹಾಯ್ದ ಸಿಎಂ
ಇದು ನನಗೆ ಕಪ್ಪು ಮಸಿ ಅಲ್ಲ, ಆರೋಪ ಅಷ್ಟೇ
ಸಿಎಂ ಸಿದ್ದರಾಮಯ್ಯ ಅವ್ರು ನಿನ್ನೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಮುಡಾ ಹಗರಣದಲ್ಲಿ ವಿಚಾರಣೆಗೆ ಹಾಜರಾಗಿದ್ದರು.. ಇನ್ನೂ ಈ ಬಗ್ಗೆ ಬಿಜೆಪಿ ನಾಯಕರು ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ್ರೆ ಕಾಂಗ್ರೆಸ್ ನಾಯಕರು ಸಿದ್ದು ಬೆನ್ನಿಗೆ ನಿಂತಿದ್ದಾರೆ.. ಈ ಬಗ್ಗೆ ಒಂದು ವರದಿ ನಿಮ್ಮ ಮುಂದೆ..
ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಕಂಟಕ..!
ಇಂದು ಲೋಕಾಯುಕ್ತ ವಿಚಾರಣೆಗೆ ಸಿಎಂ ಹಾಜರ್
ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ
ಬೆ.9:30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ
ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಸಿಎಂ ಭೇಟಿ
ಬಳಿಕ ಲೋಕಾಯುಕ್ತ ಕಚೇರಿಗೆ ಸಿದ್ದರಾಮಯ್ಯ ಭೇಟಿ
ಮೈಸೂರು ಲೋಕಾ ಎಸ್ಪಿ ಟಿ.ಕೆ.ಉದೇಶ್ ನೇತೃತ್ವದಲ್ಲಿ ವಿಚಾರಣೆ
ಈಗಾಗಲೇ ಹಲವು ಪ್ರಶ್ನೆ ಸಿದ್ಧಪಡಿಸಿಕೊಂಡಿರುವ ಅಧಿಕಾರಿಗಳು
ಮುಡಾ ವಿಚಾರಣೆ ಎದುರಿಸಲಿರುವ ಸಿಎಂ ಸಿದ್ದರಾಮಯ್ಯ
ತಮ್ಮ ರಾಜಕೀಯ ಇತಿಹಾಸದಲ್ಲೇ ಮೊದಲ ವಿಚಾರಣೆ
ಹಾಲಿ ಸಿಎಂ ವಿಚಾರಣೆ ಎದುರಿಸುತ್ತಿರುವ ಇದೇ ಮೊದಲು
ವಿಚಾರಣೆ ಬಳಿಕ ಮಧ್ಯಾಹ್ನ ಚನ್ನಪಟ್ಟಣದ ಕಡೆ ಪ್ರಯಾಣ
ಉಪಚುನಾವಣೆ ಪ್ರಚಾರ ನಡೆಸಲಿರುವ ಸಿದ್ದರಾಮಯ್ಯ
ಲೋಕಾ ವಿಚಾರಣೆ ಬಳಿಕ ಚನ್ನಪಟ್ಟಣ ಪ್ರಚಾರದಲ್ಲಿ ಭಾಗಿ
ಸಿಎಂ ಸ್ಥಾನಕ್ಕಾಗಿ ಮುಡಾ ದಾಖಲೆ ಹೊರ ತಂದಿದ್ದು ಡಿಕೆಶಿ
ಬಿಜೆಪಿಯವ್ರು ಸಿದ್ದರಾಮಯ್ಯರನ್ನ ಕೆಳಗಿಳಿಸುವ ಪ್ರಯತ್ನಿಸಿಲ್ಲ
ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಸ್ಫೋಟಕ ಹೇಳಿಕೆ
ಅಧಿಕಾರದಲ್ಲಿ ಇದ್ದವರೇ ಆ ರೀತಿ ದಾಖಲೆ ತೆಗೆಯಲು ಸಾಧ್ಯ
ವಿರೋಧ ಪಕ್ಷದವರು ಹೊರಗೆ ತೆಗೆಯಲು ಸಾಧ್ಯವಿಲ್ಲ ಎಂದ ರೆಡ್ಡಿ
ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಜಾತಿಜನಗಣತಿ ವರದಿ ಮತ್ತೆ ಸದ್ದು ಮಾಡ್ತಿದೆ. ಕಾಂತರಾಜು ವರದಿ ಅನುಷ್ಠಾನ ಒತ್ತಾಯ ಕೇಳಿ ಬಂದಿದೆ.ಆಡಳಿತ ಪಕ್ಷದ ಸಚಿವರು,ಶಾಸಕರ ವಿರೋಧದ ನಡುವೆ ವರದಿ ಜಾರಿಗೊಳಿ ಸುವ ಹುಳ ಬಿಟ್ಟಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಒಂದೇ ದಿನ ಬಾಕಿ ಇದ್ದು ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೈಸೂರು ಪ್ರವಾಸ ಕೈಗೊಂಡಿದ್ದಾರೆ. ಇಂದು ರಾತ್ರಿ 8.30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 3 ಗುರವಾರದಂದು ನಡೆಯುವ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಸಿಎಂ ಸಿದ್ದರಾಮಯ್ಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.