ಲೋಕಾಯುಕ್ತಕ್ಕೆ ಮರುಜೀವ ಬಂದು ಆರು ತಿಂಗಳು..! ಆದ್ರೆ ಮೂಲಸೌಕರ್ಯ ನೀಡುವಲ್ಲಿ ಸರ್ಕಾರ ವಿಫಲ..? ಬಹುತೇಕ ಅಧಿಕಾರಿಗಳಿಗೆ ಉಸಿರುಗಟ್ಟುವ ಪರಿಸ್ಥಿತಿ ಆರೋಪ. ಲೋಕಾಯುಕ್ತಕ್ಕೆ ಸರ್ಕಾರದಿಂದ ಮಲತಾಯಿ ಧೋರಣೆ..? ಮೂಲಸೌಕರ್ಯ ನೀಡುವಲ್ಲಿ ಕರಾಳ ಮುಖ ಅನಾವರಣ.
ಎರಡನೇ ದಿನವೂ ಬಿರುಸಾದ MLA ಮಾಡಾಳ್ ವಿಚಾರಣೆ - ಲೋಕಾಯುಕ್ತ ಕಚೇರಿಯಲ್ಲಿ DySP ಅಂಥೋಣಿ ಜಾರ್ಜ್ ಪ್ರಶ್ನೆ - ನಿನ್ನೆ ಸತತ 6 ಗಂಟೆ ಕಾಲ ವಿಚಾರಣೆ ನಡೆದಿತ್ತು - ದಾಖಲೆಗಳನ್ನಿಟ್ಟು ಪೊಲೀಸರಿಂದ ಖಡಕ್ ವಿಚಾರಣೆ
ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಹಕಾರ ಕೊಡ್ತೀನಿ. ಯಾವಾಗ ಅಧಿಕಾರಿಗಳು ಕರೆದ್ರೂ ವಿಚಾರಣೆಗೆ ಹಾಜರಾಗ್ತೀನಿ ಎಂದು ವಿಚಾರಣೆ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿಕೆ ನೀಡಿದ್ದಾರೆ.
ಪ್ರಶಾಂತ್ ಮಾಡಾಳ್ ಹೆಸರಿನಲ್ಲಿ ಬೇನಾಮಿ ಆಸ್ತಿಯಿರುವ ಬಗ್ಗೆ ಆರೋಪಿ ಸಿದ್ದೇಶ್ ಮಾಹಿತಿ ನೀಡಿದ್ದು ಇದರ ಬಗ್ಗೆ ತನಿಖೆ ಮಾಡಲು ಎಫ್ಐಆರ್ ದಾಖಲಾಗಿದೆ. ಇದರಲ್ಲಿ ಪ್ರಶಾಂತ್ ಮಡಾಳ್, ಸುರೇಂದ್ರ, ಹಾಗೂ ಸಿದ್ದೇಶ್ ಆರೋಪಿಗಳಾಗಿದ್ದಾರೆ.
ಮನಿ ಕೇಸ್ ತನಿಖೆಗೆ ಸಹಕಾರ ನೀಡಬೇಕೆಂದು ಕೋರ್ಟ್ ಆದೇಶ ನೀಡಿರೋ ಹಿನ್ನೆಲೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಇಂದು ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ.. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಡಾಳ್ ಸಾಲು ಸಾಲು ಪ್ರಶ್ನೆ ಎದುರಿಸಬೇಕಿದೆ.
ಶಾಸಕ ವಿರೂಪಾಕ್ಷಪ್ಪ ಮಗ ಪ್ರಶಾಂತ್ ಮನೆಯಲ್ಲಿ ತಲಾಶ್ ಅಂತ್ಯವಾಗಿದೆ.. ಸಂಜಯ್ ನಗರದಲ್ಲಿ ನಿನ್ನೆ ಸಂಜೆ ʻಲೋಕಾʼ ಶೋಧ ನಡೆದಿದೆ.. ಐದು ಗಂಟೆಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ಸರ್ಚಿಂಗ್ ಮಾಡಿದ್ದಾರೆ.
6 ದಿನ ನಾಪತ್ತೆ, ಬೇಲ್ ಸಿಕ್ಕ ಮೂರೇ ಗಂಟೆಯಲ್ಲಿ ಪತ್ತೆ. ಜನರಿಗಿದ್ದ ನಂಬಿಕೆ ಕಳೆದುಕೊಂಡಿತಾ ಲೋಕಾಯುಕ್ತ..? ಶಾಸಕರಿಗೊಂದು ಜನಸಾಮಾನ್ಯರಿಗೊಂದು ಕಾನೂನಾ..? ಸಾರ್ವಜನಿಕೆ ವಲಯದಲ್ಲಿ ಅಧಿಕಾರಿಗಳ ನಡೆಗೆ ಆಕ್ರೋಶ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿಚಾರಣೆ ನಡೆಸೋದು ಪೊಲೀಸರಿಗೆ ಬಿಟ್ಟ ವಿಚಾರ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಲೋಕಾಯುಕ್ತ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ.
ಟೆಂಡರ್ಗಾಗಿ ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ ಪುತ್ರನ ಕಚೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ಸತತ 18 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಎಂಎಲ್ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ. ಈ ಅಕ್ರಮ ಹಣ ಸಂಗ್ರಹಿಸುವಲ್ಲಿ ಶಾಸಕರನ್ನೆ A1 ಆರೋಪಿ ಮಾಡಿರುವ ಲೋಕಾಯುಕ್ತ ಅಧಿಕಾರಿಗಳು ತಲೆಮರೆಸಿಕೊಂಡಿರೋ ವಿರೂಪಾಕ್ಷಪ್ಪನ ಪತ್ತೆಗೆ ಶೋಧ ನಡೆಸಿದ್ದಾರೆ. ಹಾಗಾದ್ರೆ ಲೋಕಾ ದಾಳಿಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಪ್ರಶಾಂತ್ ಮಾಡಾಳ್ ಮನೆಯಲ್ಲಿ ʻಪೈಸಾ ವಸೂಲ್ʼ. ಕಚೇರಿ ಮತ್ತು ಮನೆಯಲ್ಲಿ ಕೋಟಿ ಕೋಟಿ ಡೀಲ್ ..!. ಬರೋಬ್ಬರಿ 7.62 ಕೋಟಿ ಜಪ್ತಿ ಮಾಡಿದ ಲೋಕಾ. ಹಲವು ದಾಖಲೆ.. ಹಣ.. ಲೋಕಾಯುಕ್ತ ವಶಕ್ಕೆ.
ಪ್ರಶಾಂತ್ ಮಾಡಾಳ್ ಮನೆ ಮೇಲೆ ಲೋಕಾಯುಕ್ತ ದಾಳಿ ಕೇಸ್. ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನೋಟಿಸ್ ನೀಡಲು ತಯಾರಿ..? ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಸುತ್ತಿಕೊಳ್ಳುತ್ತಾ ಕೇಸ್..!? KSDLನಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರ ಆಗಿರೋ ಶಂಕೆ.? ಕೆ.ಸ್.ಡಿ.ಎಲ್ ನಿಗಮದ ಅಧ್ಯಕ್ಷರಾಗಿರೋ ಶಾಸಕ ವಿರೂಪಾಕ್ಷಪ್ಪ.
KSDL ಸಂಸ್ಥೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ.. ಇದುವರೆಗೆ ಲೋಕಾಯುಕ್ತಕ್ಕೆ 5 ದೂರುಗಳನ್ನು ನೀಡಲಾಗಿದೆ.. ನೌಕರರ ಸಂಘದಿಂದ KSDL ಸಂಸ್ಥೆ ವಿರುದ್ಧ ದೂರು ನೀಡಲಾಗಿದೆ. ಬರೋಬ್ಬರಿ 200 ಕೋಟಿ ಅಕ್ರಮದ ಬಗ್ಗೆ ದೂರು ನೀಡಲಾಗಿದೆ.
ರಾಜ್ಯಕ್ಕೆ ಮತ್ತೆ ಇಂದು ಹಾರಿ ಬಂದ ಅಮಿತ್ ಶಾ ಅವರಿಗೆ ಹಾರ್ದಿಕ ಸ್ವಾಗತ.. ಸುಸ್ವಾಗತ. ನಿಮ್ಮ ಡಬಲ್ ಎಂಜಿನ್ ಬಿಜೆಪಿ ಸರಕಾರ ಭರ್ತಿ 40% ಕಮೀಷನ್ ಉಡಾಯಿಸುತ್ತಿದೆ ಎನ್ನುವುಕ್ಕೆ ನಿಮ್ಮ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಕಂತೆ ಕಂತೆಗಳ ಪುರಾಣವೇ ದೊಡ್ಡ ಪುರಾವೆ- ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ
Karnataka Lokayukta: ದೇಶದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಜನರು ಲೋಕಾಯುಕ್ತ ಸಂಸ್ಥೆ ಜೊತೆಗೆ ಕೈಜೋಡಿಸಬೇಕು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.