ಒಂದು ವೇಳೆ, ಹೈಪರ್ಲೂಪ್ ಯೋಜನೆ ಯಶಸ್ವಿಯಾದರೆ, ಎರಡು ಪ್ರತ್ಯೇಕ ರಾಜ್ಯಗಳಲ್ಲಿರುವ, 350 ಕಿಲೋಮೀಟರ್ ಅಂತರ ಹೊಂದಿರುವ ಬೆಂಗಳೂರು ಮತ್ತು ಚೆನ್ನೈಗಳ ನಡುವೆ ಕೇವಲ 30 ನಿಮಿಷಗಳ ಅವಧಿಯಲ್ಲಿ ಕ್ರಮಿಸಬಹುದು. ಅತ್ಯಂತ ಕಡಿಮೆ ಗಾಳಿಯ ಒತ್ತಡ ಹೊಂದಿರುವ, ಪ್ರತಿ ಗಂಟೆಗೆ 1,000ದಿಂದ 1,800 ಕಿಲೋಮೀಟರ್ ವೇಗದಲ್ಲಿ ಚಲಿಸುವ ಒಂದು ಪಾಡ್ನಲ್ಲಿ (ಸಣ್ಣದಾದ ಪ್ರಯಾಣಿಕರು ಸಾಗುವ ವಿಭಾಗ) ಪ್ರಯಾಣಿಸುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದು ಐಐಟಿ ಮದ್ರಾಸಿನ 'ಆವಿಷ್ಕಾರ್ ಹೈಪರ್ಲೂಪ್' ತಂಡ ವಿವರಿಸಿದೆ.
Made In India OS: ಸ್ವದೇಶಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಸಹಾಯದಿಂದ ಇದೀಗ ಭಾರತ ಅಂಡ್ರಾಯಿಡ್ ಹಾಗೂ ಐಓಎಸ್ ಗಳಿಗೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ. ಐಐಟಿ ಮದ್ರಾಸ್ ಅಭಿವೃದ್ಧಿಪಡಿಸಿರುವ ಈ ಆಪರೇಟಿಂಗ್ ಸಿಸ್ಟಂಗೆ ಕೇಂದ್ರ ಸರ್ಕಾರದ ಹಸಿರು ನಿಶಾನೆ ದೊರೆತಿದೆ.
ಐಐಟಿಗಳಿಗೆ ಜಾಗತಿಕ ಕ್ಯಾಂಪಸ್ಗಳನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೇಂದ್ರ ಸರ್ಕಾರವು 17 ಸದಸ್ಯರ ಸಮಿತಿಯನ್ನು ನೇಮಿಸಿದೆ. ಇದು ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಐಐಟಿ ಕೌನ್ಸಿಲ್ ಸ್ಥಾಯಿ ಸಮಿತಿ ಅಧ್ಯಕ್ಷ ಡಾ ಕೆ ರಾಧಾಕೃಷ್ಣನ್ ನೇತೃತ್ವದ ಸಮಿತಿಯು ಐಐಟಿಗಳ ಸಾಗರೋತ್ತರ ಕ್ಯಾಂಪಸ್ಗಳನ್ನು ಸ್ಥಾಪಿಸುವ ಶಿಫಾರಸನ್ನು ಹಂಚಿಕೊಂಡಿದೆ.
ಮದ್ರಾಸ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಶುಕ್ರವಾರದಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.