HMPV Virus Guide Lines: ಹೋದ್ಯಾ ಪಿಶಾಚಿ ಅಂದ್ರೆ ಬಂದ್ಯಾ ಗವಾಕ್ಷಿ ಅನ್ನೋ ಹಾಗೆ ಚೀನಾದಲ್ಲಿ ಜೀವ ತಾಳಿರುವ ವೈರಸ್‌ಗಳು ಭಾರತಕ್ಕೂ ಕಾಲಿಟ್ಟಿದೆ. 2020 ಜನವರಿ ವೇಳೆಗೆ ಕಾಣಿಸಿಕೊಂಡ ಕೊರೊನಾ ವೈರಸ್ ಮೂರು ವರ್ಷ ಮರಣ ಮೃದಂಗ ಭಾರಿಸಿ ಲಕ್ಷಾಂತರ ಜನರ ಬದುಕನ್ನ ಹಿಂಡಿಹಿಪ್ಪೆ ಮಾಡಿತ್ತು. ಇದೀಗ ವೈರಸ್ ಸೃಷ್ಟಿಕರ್ತ ಚೀನಾದಿಂದಲೇ ಹೊಸ HMPV ವೈರಸ್ ಹರಡತೊಡಗಿದೆ.
ಇದನ್ನೂ ಓದಿ: ದಕ್ಷಿಣ ಭಾರತದಿಂದ ರಿಮೇಕ್ ಆಗಿರುವ ನಟ ಗೋವಿಂದ್ ನ 7 ಸೂಪರ್ ಹಿಟ್ ಸಿನಿಮಾಗಳು
ಚೀನಾ ದೇಶದ HMPV ವೈರಸ್ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡ್ತಿದೆ. ದೇಶದಲ್ಲೇ ಮೊದಲ HMPV ವೈರಸ್ ಈಗ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದೆ. ಇತ್ತ ಹೊಸ ರೂಪಾಂತರಿ HMPV ವೈರಸ್ ಸಿಲಿಕಾನ್ ಸಿಟಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ ಆಗಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿ ಕೆಲ ಮಾರ್ಗಸೂಚಿಗಳನ್ನ ನೀಡಿದೆ. ವೈರಸ್ ನ್ನು ಆರಂಭದಲ್ಲೇ ಮಟ್ಟಹಾಕಲು ಪ್ಲ್ಯಾನ್ ರೂಪಿಸಿಕೊಂಡಿದೆ.
ಸರಿಸುಮಾರು ಮೂರು ವರ್ಷಗಳ ಹಿಂದೆ ಕಾಟ ಕೊಟ್ಟಿದ್ದ ಕೊರೊನಾ ವೈರಸ್ ಸೈಲೆಂಟ್ ಆಗಿದೆ. ಆದರೆ ಇದರ ಬೆನ್ನಲ್ಲೆ ಮಗದೊಂದು ಹೊಸ ರೂಪಾಂತರಿ ತಳಿ ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ. ವಿದೇಶಗಳಲ್ಲಿ ಆರ್ಭಟಿಸ್ತಿರೋ ಈ ರೂಪಾಂತರಿಯನ್ನು ಸಿಲಿಕಾನ್ ಸಿಟಿಯಲ್ಲಿ ಆರಂಭದಲ್ಲೇ ಮಟ್ಟಹಾಕಲು ಅರೋಗ್ಯ ಇಲಾಖೆ ಪ್ಲಾನ್ ಮಾಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ 8 ತಿಂಗಳ ಹಾಗೂ 3 ತಿಂಗಳ ಹಸುಗೂಸಿನಲ್ಲಿ ಈ ವೈರಸ್ ಪತ್ತೆಯಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ತಜ್ಞರ ಅಭಿಪ್ರಾಯ ಪಡೆದು ಈ ರಾಕ್ಷಸ ತಳಿಗೆ ಆರಂಭದಲ್ಲೇ ಬ್ರೇಕ್ ಹಾಕಲು ಡಿಸೈಡ್ ಮಾಡಿದೆ. ಈ ನಿಟ್ಟಿನಲ್ಲಿ ಇಂದು ಅರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವರು ಹಲವು ಸಲಹೆಗಳನ್ನು ಪಡೆದು ಸಾರ್ವಜನಿಕರಿಗೆ ಕೆಲ ಸೂಚನೆಗಳನ್ನು ಕೊಟ್ಟಿದ್ದಾರೆ
ಬೆಂಗಳೂರಿನಲ್ಲಿ ಪತ್ತೆಯಾಗಿರುವ ಎರಡು ಪ್ರಕರಣಗಳಲ್ಲಿ ಈಗಾಗಲೇ ಮೂರು ತಿಂಗಳ ಮಗು ಗುಣಮುಖರಾಗಿ ಡಿಸ್ಸಾರ್ಜ್ ಆಗಿದೆ. 8 ತಿಂಗಳ ಮಗು ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿದೆ. 8 ತಿಂಗಳ ಮಗುವಿನ ಟ್ರಾವೆಲ್ ಹಿಸ್ಟರಿ ನೋಡಿದರೆ, ತಿರುಪತಿಗೆ ಹೋಗಿ ಬಂದಿರುತ್ತಾರೆ. ಇವರು ಬೆಂಗಳೂರಿನ ಯಲಹಂಕ ನಿವಾಸಿಗಳು ಎಂದು ಮಾಹಿತಿ ಇದ್ದು, ಈ ಬಗ್ಗೆ ಪಾಲಿಕೆ ಹೆಚ್ಚಿನ ನಿಗಾ ವಹಿಸಿದೆ.
ಮುಂಜಾಗ್ರತಾ ಕ್ರಮಗಳ ಬಗ್ಗೆ ಗೈಡ್ ಲೈನ್ಸ್ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ
- ಕರವಸ್ತ್ರ ಅಥವಾ ಮಾಸ್ಕ್‌ನಿಂದ ಬಾಯಿಯನ್ನ ಮುಚ್ಚಿಕೊಳ್ಳಬೇಕು.
- ಸ್ಯಾನಿಟೈಸರ್ ಬಳಕೆ
- ಗುಂಪು ಸೇರಬಾರದು
- ಜನಸಂದಣಿ ಪ್ರದೇಶದಲ್ಲಿ ಎಚ್ಚರವಹಿಸಬೇಕು.
- ಹೆಚ್ಚಿನ ಜನರ ಸಂಪರ್ಕಕ್ಕೆ ಬರದೇ ಮನೆಯಲ್ಲಿ ಇರಬೇಕು.
ಏನು ಮಾಡಬಾರದು..?
- ಬಳಸಿದ ಕರವಸ್ತ್ರವನ್ನೆ ಬಳಸಬಾರದು.
- ಸದಾ ಮೂಗು, ಬಾಯಿ, ಕಣ್ಣು ಮುಟ್ಟಿಕೊಳ್ಳಬಾರದು.
- ಸಾರ್ವಜನಿಕ ಸ್ಥಳಗಳಲ್ಲಿ ಉಗಿಯಬಾರದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ