Reliance employees gift: ದೀಪಾವಳಿ ಎಂದರೆ ದೀಪಗಳ ಹಬ್ಬ..ಎಲ್ಲರೂ ತಮ್ಮ ಮನೆ, ಪಡಸಾಲೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ. ವಿಶೇಷವಾಗಿ ಈ ಹಬ್ಬದಂದು ಎಲ್ಲರೂ ಪರಸ್ಪರ ಉಡುಗೊರೆಗಳನ್ನು ನೀಡುತ್ತಾರೆ. ಅನೇಕ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಹಾಗೂ ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಉಡುಗೊರೆಗಳು ಮತ್ತು ಬೋನಸ್ಗಳನ್ನು ನೀಡುತ್ತಾರೆ. ಎಲ್ಲಾ ಕಂಪನಿಗಳಂತೆಯೇ ರಿಲಯನ್ಸ್ ಫೌಂಡೇಶನ್ ಕೂಡ ತನ್ನ ಉದ್ಯೋಗಿಗಳಿಗೆ ಗಿಫ್ಟ್ಗಳನ್ನು ಕೊಟ್ಟಿದೆ, ಇದೀಗ ಉದ್ಯೋಗಿಗಳು ಇದರ ವಿಡಿಯೋಗಳನ್ನು ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Unemployment: ಆಧುನಿಕ ಯುಗದಲ್ಲಿ ಬಹುತೇಕ ಕೆಲಸಗಳನ್ನು ಯಂತ್ರೋಪಕರಣಗಳೆ ಮಾಡಿ ಮುಗಿಸುವುದರಿಂದ ಸಾಕಷ್ಟು ಯುವಕ ಯುವತಿಯರು ನಿರುದ್ಯೋಗಿಗಳಾಗುತ್ತಿದ್ದಾರೆ. ಅಂತಹವರಿಗಾಗಿ ಕೇಂದ್ರ ಸರ್ಕಾರದಿಂದ ಸುವರ್ಣಾವಕಾಶ ನೀಡಲಾಗುತ್ತಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾಯಿತ ಸದಸ್ಯರಿಗೆ ಸಚಿವ ಆನಂದ್ ಸಿಂಗ್ ಭರ್ಜರಿ ಉಡುಗೊರೆ ನೀಡಿದ್ದಾರೆ. 10 ಗ್ರಾಪಂಗಳ ಚುನಾಯಿತ ಸದಸ್ಯರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ. ಲಕ್ಷಕ್ಕೂ ಹೆಚ್ಚು ಹಣ, ರೇಷ್ಮೆ ಬಟ್ಟೆ ಕೊಟ್ಟಿದ್ದಾರೆ.
ಅಕ್ಟೋಬರ್ 20 ರಿಂದ ಅಕ್ಟೋಬರ್ 31 ರವರೆಗೆ ಆಗಸ್ಟ್ ತಿಂಗಳ ಪಡಿತರ ವಿತರಣೆಯನ್ನು ಪೂರ್ಣಗೊಳಿಸಲಾಗುವುದು. ಅಕ್ಟೋಬರ್ 31 ರೊಳಗೆ ಪಡಿತರ ವಿತರಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಸರ್ಕಾರ ಆದೇಶ ನೀಡಿದೆ.
ಕಾರ್ಮಿಕ ಸುಧಾರಣೆಗಳತ್ತ ಹೆಜ್ಜೆ ಹಾಕುತ್ತಿರುವ ಸೌದಿ ಅರೇಬಿಯಾ ವಿವಾದಾತ್ಮಕ 'ಕಫಾಲಾ ವ್ಯವಸ್ಥೆಯನ್ನು' ಕೊನೆಗೊಳಿಸುವುದಾಗಿ ಘೋಷಿಸಿದೆ. ಸೌದಿ ಅರೇಬಿಯಾದ ಈ ನಿರ್ಧಾರವನ್ನು ಭಾರತೀಯರಿಗೆ ದೀಪಾವಳಿ ಉಡುಗೊರೆಯಾಗಿ ಕಾಣಬಹುದು. ಏಕೆಂದರೆ ಹೆಚ್ಚಿನ ಸಂಖ್ಯೆಯ ಭಾರತೀಯ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಾರೆ.
ಪೋಲೀಸ್ ಇಲಾಖೆಗೆ ಪೇದೆ ಹುದ್ದೆಗೆ ನೇಮಕವಾಗುವ ಅಭ್ಯರ್ಥಿಗಳಿಗೆ ಎಲ್ಲಾ ಭತ್ಯೆ ಸೇರಿ 30,427 ರೂ. ಬದಲಿಗೆ 34,267 ರೂ. ಸಿಗಲಿದೆ. ಅಲ್ಲಿಗೆ 4 ಸಾವಿರ ರೂ.ಗಳ ವೇತನ ಹೆಚ್ಚಳ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.