ಮಹಾಕುಂಭಮೇಳದಲ್ಲಿ ಮೌನಿ ಬಾಬಾ ಜೀವಂತ ಸಮಾಧಿ..! ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ..

Maha kumbh mela 2025 : ಪರಮಹಂಸ ಪೀಠಾಧೀಶ್ವರ ಶಿವಯೋಗಿ ಅಕಾ ಮೌನಿ ಬಾಬಾ ಮಹಾಕುಂಭ ಮೇಳದಲ್ಲಿ 57 ನೇ ಬಾರಿಗೆ ಭೂಸಮಾಧಿಯಾದರು. ಮತ್ತೊಮ್ಮೆ ಕಾಲ್ತುಳಿತದಂತಹ ಘಟನೆ ನಡೆಯದಂತೆ ಮೌನಿ ಬಾಬಾ ಭೂ-ಸಮಾಧಿಯಾಗುವ ನಿರ್ಧಾರ ಕೈಗೊಂಡರು.. ಮಹಾರಾಜ ಶಿವಯೋಗಿಗಳು 13 ವರ್ಷಗಳಿಂದ ಮೌನ ವೃತ ಮಾಡುತ್ತಿದ್ದಾರೆ.. ಆದ್ದರಿಂದ ಜನರು ಅವರನ್ನು ಮೌನಿ ಮಹಾರಾಜ್ ಎಂದು ಕರೆಯುತ್ತಾರೆ.

Written by - Krishna N K | Last Updated : Feb 1, 2025, 06:09 PM IST
    • ಪರಮಹಂಸ ಪೀಠಾಧೀಶ್ವರ ಶಿವಯೋಗಿ ಅಕಾ ಮೌನಿ ಬಾಬಾ
    • ಮೌನಿ ಬಾಬಾ ಮಹಾಕುಂಭ ಮೇಳದಲ್ಲಿ 57 ನೇ ಬಾರಿಗೆ ಭೂಸಮಾಧಿಯಾದರು.
    • ಮಹಾರಾಜ ಶಿವಯೋಗಿಗಳು 13 ವರ್ಷಗಳಿಂದ ಮೌನ ವೃತ ಮಾಡುತ್ತಿದ್ದಾರೆ
ಮಹಾಕುಂಭಮೇಳದಲ್ಲಿ ಮೌನಿ ಬಾಬಾ ಜೀವಂತ ಸಮಾಧಿ..! ಈ ಕಠಿಣ ನಿರ್ಧಾರದ ಹಿಂದಿನ ಕಾರಣ ಕೇಳಿದ್ರೆ ಶಾಕ್‌ ಆಗ್ತಿರಾ.. title=

Maha kumbh mela Mouni Baba : 13 ವರ್ಷಗಳಿಂದ ಮೌನವಾಗಿರುವ ಮೌನಿ ಬಾಬಾ ಅವರು ಭೂ-ಸಮಾಧಿಯಾಗುವ ಮೂಲಕ ಮಹಾಕುಂಭದಲ್ಲಿ ಇಂತಹ ದುರಂತ ಮರುಕಳಿಸಬಾರದು ಎಂದು ಪ್ರಾರ್ಥಿಸುತ್ತಿದ್ದಾರೆ.. ಈ ಬಾಬಾ ಮಹಾಕುಂಭ್ ಪ್ರದೇಶದ ಸೆಕ್ಟರ್ -6 ರ ತಮ್ಮ ಶಿಬಿರದಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ. 

ಮೌನಿ ಅಮಾವಾಸ್ಯೆಯಂದು ಪ್ರಯಾಗರಾಜ್ ಮಹಾಕುಂಭದಲ್ಲಿ ನಡೆದ ಕಾಲ್ತುಳಿತ ಘಟನೆಯಿಂದ ಮನನೊಂದಿದ್ದ ಪರಮಹಂಸ ಪೀಠಾಧೀಶ್ವರ ಶಿವಯೋಗಿ ಮೌನಿ ಮಹಾರಾಜರು ಕಠಿಣ ಹಾದಿ ಹಿಡಿದಿದ್ದಾರೆ. ಮೌನಿ ಮಹಾರಾಜರು 10 ಅಡಿ ಆಳದ ಗುಂಡಿಯಲ್ಲಿ ಜೀವಂತ ಭೂ ಸಮಾಧಿಯಾಗಿದ್ದಾರೆ.. 

ಇದನ್ನೂ ಓದಿ:ಈ ಪ್ರಾಣಿಯ ಮಾಂಸ ತಿನ್ನುವ ಮುನ್ನ ಎಚ್ಚರ..! ಎಕ್ಸ್ ರೇನಲ್ಲಿ ಪತ್ತೆಯಾಯ್ತು ಜೀವ ತೆರೆಯುವ "ಹುಳು"..

ಮೌನಿ ಬಾಬಾ ಶುಕ್ರವಾರ ರಾತ್ರಿ ಭೂ ಸಮಾಧಿಯಾದರು. ಅವರು ಇದುವರೆಗೆ 55ಕ್ಕೂ ಹೆಚ್ಚು ಬಾರಿ ಭೂಸಮಾಧಿ ವೃತ ಆಚರಿಸಿದ್ದಾರೆ. ಇದು ಅವರ 57ನೇ ಸಮಾಧಿ ಸ್ಥಳವಾಗಿದೆ. ಪ್ರಯಾಗ್ರಾಜ್ ಮಹಾಕುಂಭದ ಘಟನೆಯಿಂದ ನಾನು ತುಂಬಾ ನೊಂದಿದ್ದೇನೆ ಎಂದು ಮೌನಿ ಬಾಬಾ ಹೇಳಿದ್ದಾರೆ. ಅಲ್ಲದೆ, ಮಹಾಕುಂಭದಲ್ಲಿ ಮೊಟ್ಟಮೊದಲ ಬಾರಿಗೆ ಮೌನಿ ಬಾಬಾ 7 ಕೋಟಿ 51 ಲಕ್ಷ ರುದ್ರಾಕ್ಷ ರತ್ನಗಳೊಂದಿಗೆ 12 ಜ್ಯೋತಿರ್ಲಿಂಗಗಳನ್ನು ಸ್ಥಾಪಿಸಿದ್ದಾರೆ. 

13 ವರ್ಷಗಳ ಮೌನ : ಮಹಾರಾಜ ಶಿವಯೋಗಿಗಳು 13 ವರ್ಷಗಳಿಂದ ಮೌನವಾಗಿದ್ದಾರೆ, ಆದ್ದರಿಂದ ಜನರು ಅವರನ್ನು ಮೌನಿ ಮಹಾರಾಜ್ ಎಂದು ಕರೆಯುತ್ತಾರೆ. ಮೌನಿಬಾಬಾ ಪ್ರತಾಪಗಢದ ಪಟ್ಟಿ ಪ್ರದೇಶದಲ್ಲಿ ಜನಿಸಿದರು. ಅಲ್ಲಿಯೇ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.. ಆ ನಂತರ ಜೀವನೋಪಾಯಕ್ಕಾಗಿ ಮುಂಬೈಗೆ ತೆರಳಿದ್ದರು.. ನಂತರ, ಲೌಕಿಕ ಜೀವನದಿಂದ ಬೇಸತ್ತು ಸನ್ಯಾಸತ್ವ ಸ್ವೀಕಾರ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News