ಕಳ್ಳತನದ ಜೊತೆಗೆ ಬೆದರಿಕೆ ಮತ್ತು ಧಮ್ಕಿ ಹಾಕಿರುವ ಆರೋಪ ಕೇಳಿ ಬಂದಿದೆ. ಕಾಂಟ್ರಾಕ್ಟರ್ ದಯಾನಂದ್ ಕುಮಾರ್ ಎಂಬುವವರು ನೀಡಿರುವ ದೂರಿನ ಮೇಲೆ ಅಮೃತಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ವಿಧಾನಸಭೆ ಅಧಿವೇಶನ ಆರಂಭವಾಗಿ ಎರಡು ದಿನ ಆಗ್ತಿದ್ರೂ, ಇಲ್ಲ ಬಿಜೆಪಿ ಯಲ್ಲಿ ವಿಪಕ್ಷ ನಾಯಕನ ಆಯ್ಕೆ ರಾಜ್ಯ ಬಿಜೆಪಿಯಲ್ಲಿ ಕಗ್ಗಂಟಾಗಿಯೇ ಉಳಿದ ವಿಪಕ್ಷ ನಾಯಕನ ಆಯ್ಕೆ ವಿಚಾರ ಇಂದು ರಾಜ್ಯಕ್ಕೆ ಆಗಮಿಸಲಿರುವ ಕೇಂದ್ರದ ವೀಕ್ಷಕರ ತಂಡ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮಧ್ಯಾಹ್ನ ಕೇಂದ್ರ ತಂಡ ಆಗಮನ ಸಚಿವ ಮಾನ್ಸೂಕ್ ಮಾಂಡವೀಯ ಹಾಗೂ ವಿನೋದ್ ತಾವ್ಡೆ ಎಂಟ್ರಿ ಬೆಳಿಗ್ಗೆ 11 ಗಂಟೆ ವೇಳೆಗೆ ಓರ್ವರು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಆ ಬಳಿಕ ಬಿಜೆಪಿಯ 6 ಶಾಸಕರ ಜೊತೆ ಒನ್ ಟು ಒನ್ ಮಾತುಕತೆ
ಸರ್ಕಾರದ ಒಳಮೀಸಲಾತಿ ಪ್ರಸ್ತಾವನೆಯು ಅಸಂವಿಧಾನಿಕ ಮತ್ತು ಮೋಸದ ಉದ್ದೇಶವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಸಹ ಅಧ್ಯಕ್ಷ ಹೆಚ್ ಪಿ ಸುಧಾಮ್ ದಾಸ್ ಆರೋಪಿಸಿದರು. ಅಲ್ಲದೇ ಜಗದೀಶ್ ಶೆಟ್ಟರ್ ಅವರು ತಮ್ಮ ಆತ್ಮ ಗೌರವಕ್ಕಾಗಿ ಪಕ್ಷವನ್ನ ತೊರೆದು ನಂಬಿದವರಿಗಾಗಿ ಕಾಂಗ್ರೆಸ್ ಪಕ್ಷವನ್ನ ಸೇರಿದ್ದಾರೆ ಎಂದು ಶೆಟ್ಟರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಜೊತೆಗೆ ಯಡಿಯೂರಪ್ಪನವರ ಆಪ್ತರ ಮೇಲೆ CBI ಮತ್ತು EDಯಲ್ಲಿ ಕಡತ ತಯಾರಿಸಿದ್ದು, ಯಡಿಯೂರಪ್ಪ ರವರನ್ನು ಭಯದ ಬಂಧನದಲ್ಲಿ ಬಿಜೆಪಿ ನಾಯಕರುಗಳೇ ಇಟ್ಟಿದ್ದಾರೆ ಎಂದು ಸುಧಾಮ್ ದಾಸ್ ಬಾಂಬ್ ಸಿಡಿಸಿದ್ದಾರೆ.
ಈ ಬಾರಿಯ ಚುನಾವಣೆ ಬೂದಿ ಮುಚ್ಚಿದ ಕೆಂಡ.. ನಾವು ಕೂಡ ಜನರಿಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವಿರುದ್ಧ ಚಂದ್ರು ವಾಗ್ದಾಳಿ ನಡೆಸಿದ್ದಾರೆ..
ರಾಹುಲ್ ಗಾಂಧಿಯನ್ನು ಅನರ್ಹತೆ ಮಾಡಿರೋ ಕ್ರಮವನ್ನು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಖಂಡಿಸಿದ್ದಾರೆ.. ರಾಹುಲ್ ಗಾಂಧಿ ನೀಡಿರೋ ಹೇಳಿಕೆ ದೊಡ್ಡ ಅಪರಾಧವಲ್ಲ ಎಂದಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ..
ಚುನಾವಣೆಗೆ ಹತ್ತಾರು ಸಾವಿರ ಕೋಟಿ ಬೇಕಾಗಿದೆ.. ಹೀಗಾಗಿ ಕೊನೆಯ ಗಳಿಗೆಯಲ್ಲಿ ಟೆಂಡರ್ ಅಂತ ಮಾಡಿಬಿಟ್ಟು ಹಣ ಕಳಿಸಿ ಅಂತಾ ಬಿಜೆಪಿ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರಂತೆ.. ರಾಯಚೂರಿನಲ್ಲಿ ಮಾತನಾಡಿದ ಎಎಪಿ ನಾಯಕ ಮುಖ್ಯಮಂತ್ರಿ ಚಂದ್ರು ಅಮಿತ್ ಶಾ ವಿರುದ್ಧ ಈ ಆರೋಪ ಮಾಡಿದ್ದಾರೆ..
IND vs BAN 2nd Test : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ಕೆಎಲ್ ರಾಹುಲ್ 'ಫ್ಲಾಪ್-ಶೋ' ಮುಂದುವರೆದಿದೆ. ರಾಹುಲ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ, ಆದರೆ ಅವರ ಕಳಪೆ ಪ್ರದರ್ಶನ ಮುಂದುವರೆದಿರುವುದು ಟೀಕೆಗೆ ಗುರಿಯಾಗಿದೆ.
ದೇವೇಗೌಡರ ಹೆಸರಿಗೆ ಮಸಿ ಬಳಿಯಲು ಅವರ ಕುಟುಂಬದವರು ಮಾಡುತ್ತಿರುವ ಅಕ್ರಮ, ದಬ್ಬಾಳಿಕೆಯ ಬಗ್ಗೆ ಗೊತ್ತಿದ್ದರೂ ಹೊಳೆನರಸೀಪುರ ಕ್ಷೇತ್ರದ ಜನರು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ನಾನು ಅವರ ವಿರುದ್ಧ ಬರುವ ಚುನಾವಣೆಯಲ್ಲಿ ಬಿಜೆಪಿ ಅಥವಾ ಪಕ್ಷೇತರವಾಗಿಯಾದರೂ ಸ್ಪರ್ಧಿಸಿ ಗೆದ್ದು ಶಾಸಕನಾಗುತ್ತೇನೆ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.
ಇಂದು ರಾಜ್ಯಕ್ಕೆ ಆಗಮಿಸಲಿರೋ ಬಿಜೆಪಿ ನಾಯಕ ಅರುಣ್ ಸಿಂಗ್. ಇಂದು ಸಂಜೆ 5 ಗಂಟೆಗೆ ಆಗಮಿಸಲಿರುವ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್. ನಾಳೆ ರಾಜ್ಯ ಕಾರ್ಯಕಾರಿಣಿಯಲ್ಲಿ ಭಾಗಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.