ಮಳೆ ಕಡಿಮೆ ಆಯ್ತು ಅಂತಾ ಬೆಂಗಳೂರಿಗರು ನಿಟ್ಟುಸಿರು ಬಿಡುವಂತಿಲ್ಲ. ಅಕ್ಟೋಬರ್, ನವೆಂಬರ್ನಲ್ಲೂ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರು ಮತ್ತೆ ಮುಳುಗುತ್ತಾ ಅನ್ನೋ ಆತಂಕ ಎದುರಾಗಿದೆ.
ರಾಯಚೂರು ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಅವಾಂತರ ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿತವಾಗಿವೆ. ಇಷ್ಟೆಲ್ಲಾ ಅನಾಹುತ ಆದ್ರೂ ಸರ್ವೇ ಶುರು ಮಾಡದ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.
ಯಾದಗಿರಿ ಜಿಲ್ಲೆಯಲ್ಲಿ ಮಳೆರಾಯನ ರಕ್ಕಸ ನರ್ತನಕ್ಕೆ ಜಮೀನುಗಳು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.. ಅಗ್ನಿ, ಮುದನೂರ, ಕೆಂಭಾವಿ, ನಗನೂರಿನಲ್ಲಿ ಅತಿಹೆಚ್ಚು ಮಳೆಯಾಗಿದೆ. ಹುಣಸಗಿಯ ಅಗ್ನಿ ಗ್ರಾಮದಲ್ಲಿ ಜಮೀನುಗಳು ಸಂಪೂರ್ಣ ಜಲಾವೃತವಾಗಿದೆ..
ಸಕ್ಕರೆ ನಾಡಿನಲ್ಲಿ ಮಂಡ್ಯದಲ್ಲಿ ಮತ್ತೆ ಮಳೆರಾಯನ ಅಬ್ಬರ ಮುಂದುವರಿದಿದೆ. ರಾತ್ರಿ ಸುರಿದ ಧಾರಾಕಾರ ಮಳೆಗೆ ಮಂಡ್ಯದ ಮದ್ದೂರು ತಾಲೂಕಿನ ಮಾದ ನಾಯಕನಹಳ್ಳಿಯಲ್ಲಿ ರಸ್ತೆ ಕೊಚ್ಚಿ ಹೋಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳದ ತುಂಗಭದ್ರಾ ನದಿ ಪಾತ್ರದಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಜಲಾಶಯದಿಂದ 1 ಲಕ್ಷದ 50 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಬೆನ್ನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಬಾಗಶಃ ಮುಳುಗಡೆಯಾಗಿದೆ. ದೇವಸ್ಥಾನ ಸುತ್ತಮುತ್ತಲಿನ ಭತ್ತದ ಗದ್ದೆಗಳಿಗೂ ನೀರು ನುಗ್ಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.