ಕೊನೆಗೂ ಭಾರತ ತೊರೆಯಲು ವಿರಾಟ್‌ ಕೊಹ್ಲಿ ನಿರ್ಧಾರ.. ಪತ್ನಿ ಮಕ್ಕಳೊಂದಿಗೆ ಈ ದೇಶದಲ್ಲಿ ಸೆಟಲ್‌ !?

Virat Kohli Anushka Sharma: ವಿರಾಟ್‌ ಕೊಹ್ಲಿ ತಮ್ಮ ಕುಟುಂಬದೊಂದಿಗೆ ಭಾರತವನ್ನು ಶಾಶ್ವತವಾಗಿ ತೊರೆಯಲು ಪ್ಲಾನ್‌ ಮಾಡುತ್ತಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ. 

Written by - Chetana Devarmani | Last Updated : Dec 19, 2024, 04:08 PM IST
  • ಭಾರತ ತೊರೆಯಲು ವಿರಾಟ್‌ ಕೊಹ್ಲಿ ನಿರ್ಧಾರ?
  • ಪತ್ನಿ ಮತ್ತು ಮಕ್ಕಳೊಂದಿಗೆ ಕೊಹ್ಲಿ ಭಾರತ ಬಿಡಲಿರುವ ಕೊಹ್ಲಿ!
  • ವಿರಾಟ್‌ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ
ಕೊನೆಗೂ ಭಾರತ ತೊರೆಯಲು ವಿರಾಟ್‌ ಕೊಹ್ಲಿ ನಿರ್ಧಾರ.. ಪತ್ನಿ ಮಕ್ಕಳೊಂದಿಗೆ ಈ ದೇಶದಲ್ಲಿ ಸೆಟಲ್‌ !? title=
kohli

Virat Kohli Anushka Sharma leave india: ವಿರಾಟ್‌ ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್‌ಕುಮಾರ್ ಶರ್ಮಾ ಪ್ರಕಾರ, ಶೀಘ್ರದಲ್ಲೇ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಕೊಹ್ಲಿ ಭಾರತವನ್ನು ತೊರೆದು ಲಂಡನ್‌ನಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ. 

ಸ್ಟಾರ್ ಇಂಡಿಯನ್ ಬ್ಯಾಟರ್ ಮತ್ತು ಟೀಮ್‌ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರತವನ್ನು ತೊರೆಯಲು ಯೋಜಿಸುತ್ತಿದ್ದಾರೆ. ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಲು ಪ್ಲಾನ್‌ ಮಾಡುತ್ತಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ. ಲೆಜೆಂಡರಿ ಕ್ರಿಕೆಟಿಗನ ಬಾಲ್ಯದ ತರಬೇತುದಾರ ರಾಜ್‌ಕುಮಾರ್ ಶರ್ಮಾ ಪ್ರಕಾರ, ವಿರಾಟ್ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಜೊತೆಗೆ ಲಂಡನ್‌ ನಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ. ಶೀಘ್ರದಲ್ಲೇ ಭಾರತವನ್ನು ತೊರೆದು ಲಂಡನ್‌ಗೆ ಶಿಫ್ಟ್‌ ಆಗಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಈಕೆ ಸ್ಟಾರ್‌ ಕ್ರಿಕೆಟರ್‌ ಪತ್ನಿ, ಸ್ಟೇಡಿಯಂನಲ್ಲಿ ಪತಿ ಅರ್ಭಟಿಸಿದ್ರೆ ಈಕೆ ಇಂಟರ್‌ನೆಟ್‌ ಸೆನ್ಸೆಷನ್‌..! ಯಾರ್‌ ಗೊತ್ತೆ..?

ದೆಹಲಿಯಲ್ಲಿ ಹುಟ್ಟಿ ಬೆಳೆದ ವಿರಾಟ್‌ ಕೊಹ್ಲಿ ಕೆಲ ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರು. ಡಿಸೆಂಬರ್ 2017 ರಲ್ಲಿ ಇಟಲಿಯಲ್ಲಿ ಅನುಷ್ಕಾ ಅವರೊಂದಿಗೆ ಮದುವೆಯಾದರು. ಜನವರಿ 2021 ರಲ್ಲಿ ಮೊದಲ ಮಗುವಿನ ಜನ್ಮ ನೀಡಿದರು. ಫೆಬ್ರವರಿ 2024 ರಲ್ಲಿ ಎರಡನೇ ಮಗು ಜನಿಸಿತು. 

ಇದೀಗ ರಾಜ್‌ಕುಮಾರ್ ಶರ್ಮಾ ಕೊಹ್ಲಿಯ ಫಾರ್ಮ್ ಮತ್ತು ನಿವೃತ್ತಿಯ ಯೋಜನೆಗಳ ಬಗ್ಗೆಯೂ ಮಾತನಾಡಿದ್ದಾರೆ. ಅದಕ್ಕೆ ಅವರು ಕೊಹ್ಲಿಯ ಫಾರ್ಮ್ ಕಾಳಜಿಯ ವಿಷಯವಲ್ಲ. ಅವರು ಬಾರ್ಡರ್-ಗವಾಸ್ಕರ್‌ ಟ್ರೋಫಿಯ ಮುಂದಿನ ಎರಡು ಟೆಸ್ಟ್‌ಗಳಲ್ಲಿ ಭಾರತಕ್ಕಾಗಿ ಇನ್ನೂ ಎರಡು ಶತಕಗಳನ್ನು ಗಳಿಸಲಿದ್ದಾರೆ ಎಂದು ಹೇಳಿದರು. 

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದರು. ವಿರಾಟ್ ಇನ್ನೂ ತುಂಬಾ ಫಿಟ್ ಆಗಿದ್ದಾರೆ ಮತ್ತು ಅವರು ನಿವೃತ್ತಿ ತೆಗೆದುಕೊಳ್ಳುವಷ್ಟು ವಯಸ್ಸಾಗಿಲ್ಲ. ಅವರು ಇನ್ನೂ ಐದು ವರ್ಷಗಳ ಕಾಲ ಆಡುತ್ತಾರೆ. 2027ರ ಏಕದಿನ ವಿಶ್ವಕಪ್‌ನಲ್ಲಿ ಖಂಡಿತವಾಗಿಯೂ ಭಾರತದ ಪರ ಆಡಲಿದ್ದಾರೆ. ನಾನು ಅವರನ್ನು ಕಳೆದ 26 ವರ್ಷಗಳಿಂದ ತಿಳಿದಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: PV Sindhu : ನಿಶ್ಚಿತಾರ್ಥ ಮಾಡಿಕೊಂಡ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು..! ಫೊಟೋಸ್‌ ವೈರಲ್‌

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News