Virat Kohli: ಭಾರತದ ತಂಡದ ದಿಗ್ಗಜ ಬೌಲರ್ ಆರ್. ಅಶ್ವಿನ್ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ. ಗಬ್ಬಾ ಟೆಸ್ಟ್ ಬಳಿಕ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ಗೆ ವಿದಾಯ ಹೇಳಿದ್ದು, ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅವರಿಗೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ದುಡ್ಡಿದ್ರೆ ದುನಿಯಾನೆ ಆಳಬೋದು ಗುರು! 31 ವರ್ಷದ ಹಾಟ್ ನಟಿಯನ್ನ ಪಾಟಾಯಿಸಿದ 70 ವರ್ಷದ ಸ್ಟಾರ್ ನಟ?
ಮೂರನೆ ಟೆಸ್ಟ್ ಪಂದ್ಯಕ್ಕೆ ಸ್ಪಿನ್ನರ್ ಆಗಿ ರವೀಂದ್ರಾ ಜಡೇಜ ಅವರನ್ನು ಆಯ್ಕೆ ಮಾಡುವ ಮೂಲಕ ರೋಹಿತ್ ಆರ್ಮಾ ಆರ್ ಅಶ್ವಿನ್ ಅವರನ್ನು ಪಂದ್ಯದಿಂದ ಕೈ ಬಿಟ್ಟಿದ್ದರು. ಈ ಟೂರ್ನಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರಿಗೆ ಕೇವಲ ಒಂದೆ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶ ಸಿಕ್ಕಿತ್ತು. ಅಡಿಲೇಡ್ ಓವಲ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಕೇವಲ ಒಂದು ಪಂದ್ಯವನ್ನು ಆಡುವ ಮೂಲಕ ಇದೀಗ ಅವರು ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
ಗಬ್ಬಾ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತು, ಇದರ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಶ್ವಿನ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಈ ಘೋಷಣೆ ಮಾಡಿದ ಬಳಿಕ ಭಾವುಕರಾದ ಅಶ್ವಿನ್ ಪತ್ರಿಕಾಗೋಷ್ಠಿಯಿಂದ ನಿರ್ಗಮಿಸಿದರು.
ರವಿಚಂದ್ರನ್ ಅಶ್ವಿನ್ 5 ಜೂನ್ 2010 ರಂದು ಶ್ರೀಲಂಕಾ ವಿರುದ್ಧ ಮೊದಲ ODI ಆಡಿದರು. 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಪಡೆದು ಅರ್ಧಶತಕ ಸೇರಿದಂತೆ 707 ರನ್ ಗಳಿಸಿದ್ದಾರೆ. 6 ನವೆಂಬರ್ 2011 ರಂದು ಇವರು ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಒಟ್ಟು ಆಡಿರುವ 105 ಟೆಸ್ಟ್ಗಳಲ್ಲಿ ಅಶ್ವಿನ್ 536 ವಿಕೆಟ್ಗಳನ್ನು ಪಡೆದಿದ್ದು, 3474 ರನ್ ಗಳಿಸಿದ್ದಾರೆ.
ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಅವರು ಸ್ಟೇಡಿಯಂನಲ್ಲಿ ಕೂತು ಮಾತನಾಡುತ್ತ ಭಾವುಕರಾಗಿ ಅಪ್ಪಿಕೊಂಡ ವಿಡಿಯೋ ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿತ್ತು. ಇದೀಗ ಇದರ ಬೆನ್ನಲ್ಲೆ ವಿರಾಟ್ ಕೊಹ್ಲಿ ಅವರು ಭಾವುಕಗೊಂಡಿರುವ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದೆ. ಅಶ್ವಿನ್ ಅವರಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಕೇಕ್ ಕತ್ತರಿಸಿ ಬೀಳ್ಕೊಡಲಾಯಿತು, ಈ ಸಂದರ್ಭದಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಕೂಡ ಉಪಸ್ಥಿತರಿದ್ದರು. ಇದೇ ವೇಳೆ ಕೇಕ್ ಕತ್ತರಿಸಿದ ನಂತರ ಅಶ್ವಿನ್ ಅವರು ಭಾಷಣ ಮಾಡಿದ್ದರು. ಅಶ್ವಿನ್ ಅವರು ಮಾತು ಮುಗಿಸುತ್ತಿದ್ದಂತೆ ಕೊಹ್ಲಿ ಭಾವುಕರಾಗಿದ್ದರು, ಅಶ್ವಿನ್ ಅವರ ಮಾತುಗಳನ್ನು ಕೇಳಿ ಅವರ ಕಣ್ಣು ತುಂಬಿ ಬಂದಿತ್ತು. ಇದೀಗ ಇದಕ್ಕೆ ಸಂಬಂಧ ಪಟ್ಟ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Men 🥹
Retired to nahi ho rahe Ashwin? 🙂@ashwinravi99 pls aisa mat karo 💔
#GabbaTest
Ashwin
Rohit
Kohli @imVkohli
Video captured by @StarSportsIndia pic.twitter.com/gOqOP1ie6Y— Ajinkya Ajit Patil (@Ajinky__patil) December 18, 2024
Virat Kohli had tears in his eyes when Ravi Ashwin giving his final speech in the dressing room today. 🥺
- THE BOND OF KOHLI & ASHWIN IS TRULY SPECIAL..!!!! ❤️ pic.twitter.com/QR7FSci9wb
— Tanuj Singh (@ImTanujSingh) December 18, 2024
A Legend Bids Adieu to International Cricket 👏👏
Hear what R Ashwin’s parting words were to the Indian dressing room 🎥🔽#TeamIndia | @ashwinravi99 https://t.co/6wtwdDOmzX
— BCCI (@BCCI) December 18, 2024
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.