ಬಾರ್ಡರ್ ಗವಾಸ್ಕರ್ ಟ್ರೋಫಿ (ಬಿಜಿಟಿ)ಯಲ್ಲಿನ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಸಿಡ್ನಿ ಟೆಸ್ಟ್ನ ಪ್ಲೇಯಿಂಗ್ XI ನಿಂದ ಅವರನ್ನು ಕೈ ಬಿಡಲಾಗಿದೆ. ವರದಿಯ ಪ್ರಕಾರ, ಟೀಮ್ ಇಂಡಿಯಾದ ಪ್ಲೇಯಿಂಗ್ XIನಲ್ಲಿ ರೋಹಿತ್ ಶರ್ಮ ಸ್ಥಾನ ಪಡೆದಿಲ್ಲ. ರೋಹಿತ್ ಬದಲಿಗೆ ಭಾರತ ತಂಡದ ನಾಯಕತ್ವ ಫಾಸ್ಟ್ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಹೆಗಲೇರಲಿದೆ.
ರೋಹಿತ್ ಶರ್ಮಾ ಎರಡನೇ ಬಾರಿಗೆ ತಂದೆಯಾದ ಕಾರಣ ಪರ್ತ್ ಟೆಸ್ಟ್ನಲ್ಲಿ ಆಡಲಿಲ್ಲ. ಈ ಅವಧಿಯಲ್ಲಿ ಬುಮ್ರಾ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಈ ಪಂದ್ಯವನ್ನು ಭಾರತ ತಂಡ ಅದ್ಭುತ ಶೈಲಿಯಲ್ಲಿ ಗೆದ್ದುಕೊಂಡಿತು. ಆದರೆ ಎರಡನೇ ಟೆಸ್ಟ್ನಲ್ಲಿ ರೋಹಿತ್ ಮರಳಿದ್ದರಾದರೂ ಭಾರತ ತಂಡ ಸೋಲನ್ನು ಎದುರಿಸಬೇಕಾಯಿತು. ರೋಹಿತ್ ಇದುವರೆಗೆ 6 ಇನ್ನಿಂಗ್ಸ್ಗಳಲ್ಲಿ ಕೇವಲ 31 ರನ್ ಗಳಿಸಿದ್ದಾರೆ. ಇದಾದ ನಂತರ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದುರಾದವು. ಇದೀಗ ಸಿಡ್ನಿ ಟೆಸ್ಟ್ಗೂ ಮುನ್ನ ರೋಹಿತ್ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಲಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಟೆಸ್ಟ್ ಸರಣಿಗೆ ಮರಳಿದ ನಂತರ ರೋಹಿತ್ ಶರ್ಮಾ ಗೊಂದಲಕ್ಕೆ ಒಳಗಾದ ಹಾಗೆ ಕಂಡು ಬಂತು. ಮೊದಲು ಕೆಎಲ್ ರಾಹುಲ್ ಮತ್ತು ಜೈಸ್ವಾಲ್ ಅವರೊಂದಿಗೆ ಓಪನರ್ ಆಗಿ ಬಂದರೆ ನಂತರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದರು. ಆದರೆ ಕಳಪೆ ಫಾರ್ಮ್ನಿಂದಾಗಿ ಹಿಟ್ಮ್ಯಾನ್ ಮೆಲ್ಬೋರ್ನ್ನಲ್ಲಿ ಮತ್ತೆ ಒಪನಿಂಗ್ ಮಾಡಲು ನಿರ್ಧರಿಸಿದ್ದರು. ಆದರೆ ಇಲ್ಲಿಯೂ ಅವರು ಎರಡೂ ಇನ್ನಿಂಗ್ಸ್ಗಳಲ್ಲಿ ವಿಫಲರಾಗಿದ್ದಾರೆ. ರೋಹಿತ್ ಕಾರಣದಿಂದ ಶುಭಮನ್ ಗಿಲ್ ಕೂಡಾ ಹೊರಗುಳಿಯಬೇಕಾಯಿತು. ಸಿಡ್ನಿಯಲ್ಲಿ ಭಾರತ ತಂಡದ ಆಟಗಾರರ ಪ್ಲೇಯಿಂಗ್ ಇಲೆವೆನ್ ಹೇಗಿದೆ ಎನ್ನುವುದು ಈಗ ಕುತೂಹಲ ಮೂಡಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ