Rohit Sharma Injured Video: ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಈಗ ಎರಡು ಪಂದ್ಯಗಳು ಬಾಕಿ ಉಳಿದಿವೆ. ಸರಣಿಯ ಜೊತೆಗೆ ಈ ಎರಡೂ ಪಂದ್ಯಗಳು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿಯೇ ಮೆಲ್ಬೋರ್ನ್ ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಡಿಸೆಂಬರ್ 22 ರ ಭಾನುವಾರದಂದು ತಂಡದೊಂದಿಗೆ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು ತಲುಪಿದರು. ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ಅವರ ಮೊಣಕಾಲಿಗೆ ಗಾಯವಾಗಿದೆ. ಮೊದಲ ನೆಟ್ ಸೆಷನ್ನಲ್ಲಿ ಕೆಎಲ್ ರಾಹುಲ್ ಕೈಗೆ ಗಾಯವಾಗಿತ್ತು.
ಸರಣಿಯಲ್ಲಿ ಮುನ್ನಡೆ ಸಾಧಿಸಲು ಟೀಂ ಇಂಡಿಯಾ ಈಗಾಗಲೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಪ್ರಾಕ್ಟೀಸ್ ಆರಂಭಿಸಿದೆ. ಆದರೆ ಅದರ ಎರಡನೇ ನೆಟ್ ಸೆಷನ್ ವೇಳೆ ರೋಹಿತ್ ಗಾಯಗೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ರೋಹಿತ್ ಶರ್ಮಾ ಗಾಯಗೊಂಡಿದ್ದಾರೆ. ಅವರು ಥ್ರೋಡೌನ್ ಸ್ಪೆಷಲಿಸ್ಟ್ ದಯಾ ಅವರ ಬೌಲ್ ಎದುರಿಸುತ್ತಿದ್ದರು. ಈ ವೇಳೆ ಅವರ ಎಡ ಭಾಗದ ಮೊಣಕಾಲಿಗೆ ಗಾಯವಾಗಿದೆ.
ಇದನ್ನೂ ಓದಿ : ಕ್ರೀಡಾ ಲೋಕಕ್ಕೆ ಆಘಾತ..! ಇಹಲೋಕ ತ್ಯಜಿಸಿದ ನೆಚ್ಚಿನ ಸ್ಟಾರ್ ಪ್ಲೇಯರ್?
ಇದರ ಹೊರತಾಗಿಯೂ ರೋಹಿತ್ ಸ್ವಲ್ಪ ಹೊತ್ತು ಬ್ಯಾಟಿಂಗ್ ಮಾಡಲು ಯತ್ನಿಸಿದರು. ಆದರೆ ನೋವು ಹೆಚ್ಚಾದಾಗ ಅವರು ನಿಲ್ಲಿಸಿದರು. ಆಗ ರೋಹಿತ್ ಐಸ್ ಪ್ಯಾಕ್ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತಿರುವುದು ಕಾಣಿಸಿತು. ಈ ವೇಳೆ ತಂಡದ ಫಿಸಿಯೋ ಕೂಡ ಜೊತೆಗಿದ್ದರು. ವರದಿಯ ಪ್ರಕಾರ, ಈ ಗಾಯವು ತುಂಬಾ ಗಂಭೀರವಾಗಿಲ್ಲ. ಮಂಡಿಯಲ್ಲಿ ಊತ ಆಗದಂತೆ ಫಿಸಿಯೋಗಳು ಮುಂಜಾಗ್ರತೆ ವಹಿಸುತ್ತಿದ್ದಾರೆ. ಇದಲ್ಲದೇ ಬಾಕ್ಸಿಂಗ್ ಡೇ ಟೆಸ್ಟ್ ಗೆ ಇನ್ನೂ 4 ದಿನ ಬಾಕಿ ಇದೆ. ಆದ್ದರಿಂದ, ಅವರು ಸಂಪೂರ್ಣವಾಗಿ ಫಿಟ್ ಆಗಿರುವ ಸಾಧ್ಯತೆಯಿದೆ.
— Sunil Gavaskar (@gavaskar_theman) December 22, 2024
ರೋಹಿತ್ ಗಾಯದಿಂದ ಭಾರತ ತಂಡದ ಸಂಕಷ್ಟ ಹೆಚ್ಚಿದೆ. ಟೀಂ ಇಂಡಿಯಾದ ಬಹುತೇಕ ಬ್ಯಾಟ್ಸ್ಮನ್ಗಳು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅವರು ಇದುವರೆಗೆ ಆಸ್ಟ್ರೇಲಿಯಾದಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ. ಏತನ್ಮಧ್ಯೆ ತಂಡದ ಯಶಸ್ವಿ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಮತ್ತು ಈಗ ಭಾರತ ತಂಡದ ನಾಯಕ ಗಾಯಗೊಂಡಿದ್ದಾರೆ. ಮೊದಲ ನೆಟ್ ಸೆಷನ್ನಲ್ಲಿ ರಾಹುಲ್ ಅವರ ಬಲಗೈಗೆ ಗಾಯವಾಗಿತ್ತು. ಮೆಲ್ಬೋರ್ನ್ ಮೈದಾನ ಸ್ಪಿನ್ನರ್ಗಳಿಗೆ ಸೂಕ್ತವಾಗಿದೆ ಎಂಬ ನಿರೀಕ್ಷೆಯಿದೆ. ಆದರೆ ಪಂದ್ಯಕ್ಕೂ ಮುನ್ನವೇ ತಂಡದ ಅನುಭವಿ ಸ್ಪಿನ್ನರ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ. ಇವೆಲ್ಲವೂ ಭಾರತ ತಂಡದ ಒತ್ತಡವನ್ನು ಹೆಚ್ಚಿಸಿವೆ.
ಇದನ್ನೂ ಓದಿ : ಹುಟ್ಟಿದ 11 ತಿಂಗಳ ಬಳಿಕ ಅಕಾಯ್ ಕೊಹ್ಲಿ ಫೇಸ್ ರಿವೀಲ್! ಏನ್ ಮುದ್ದಾಗಿದ್ದಾನೆ ವಿರಾಟ್ ಕೊಹ್ಲಿ ಮಗ... ಫೋಟೋ ಇಲ್ಲಿದೆ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.