ಆಸ್ಪತ್ರೆಯಲ್ಲಿ ಡಾಕ್ಟರ್‌, ಸಿನಿಮಾದಲ್ಲಿ ಹಾಟ್ ಆ್ಯಕ್ಟರ್..! ಈಕೆಯನ್ನ ನೋಡಿದ್ರೆ ಗೊತ್ತಾಗುತ್ತೆ.. ಹೆಣ್ಮಕ್ಳೇ ಸ್ಟ್ರಾಂಗು ಗುರು..

Kamakshi Bhaskarla : ಸ್ಟಾರ್ ನಾಯಕಿಯಾಗಿ ಗುರುತಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ನಿರ್ದೇಶಕರು ನೀಡುವ ಪ್ರತಿಯೊಂದು ಪಾತ್ರಕ್ಕೂ ನ್ಯಾಯ ಒದಗಿಸಬೇಕು. ಅಲ್ಲದೆ ಗ್ಲಾಮರ್ ಪಾತ್ರಗಳಿಗಳನ್ನ ಮಾಡಲು ರೆಡಿಯಾಗಬೇಕು.. ಆಗಲೇ ಒಬ್ಬ ಸಂಪೂರ್ಣ ನಟಿಯಾಗಿ ಗುರುತಿಸಿಕೊಳ್ಳಲು ಸಾಧ್ಯ.. ಈ ಚೆಲುವೆಯೂ ಇದೇ ಹಾದಿಯಲ್ಲಿ ಬಂದು ಇಂದು ಸಿನಿರಂಗದಲ್ಲಿ ಶೈನ್‌ ಆಗುತ್ತಿದ್ದಾಳೆ..

1 /6

ಇತ್ತೀಚಿನ ದಿನಗಳಲ್ಲಿ ಹೀರೋಯಿನ್ ಗಳು ಕೇವಲ ಗ್ಲಾಮರ್ ಪಾತ್ರಗಳನ್ನಷ್ಟೇ ಅಲ್ಲ, ಡಿ-ಗ್ಲಾಮರೈಸ್ಡ್ ಪಾತ್ರಗಳನ್ನೂ ಮಾಡಿ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುತ್ತಿದ್ದಾರೆ.. ಸ್ಟಾರ್ ಹೀರೋಯಿನ್ ಗಳೆಂದು ಗುರುತಿಸಿಕೊಳ್ಳಬೇಕಾದರೆ.. ಎಲ್ಲ ಪಾತ್ರಗಳಿಗೂ ಸಿದ್ಧರಾಗಿರಬೇಕು.. ಈ ಸಾಲಿಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಸೇರಿಕೊಳ್ಳುತ್ತಾರೆ..

2 /6

ನಟಿ ಕಾಮಾಕ್ಷಿ ತಮ್ಮ ವೃತ್ತಿಜೀವನದಲ್ಲಿ ಹೆಚ್ಚಾಗಿ ಡಿ-ಗ್ಲಾಮರ್ ಪಾತ್ರಗಳನ್ನು ಮಾಡಿದ್ದಾರೆ. ಆ ಪಾತ್ರಗಳಿಗಾಗಿ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ತೆರೆಯ ಮೇಲೆ ಡೈರೆಕ್ಟರ್‌ ನೀಡುವ ಎಲ್ಲಾ ಪಾತ್ರಗಳಿಗೂ ನ್ಯಾಯ ಒದಗಿಸುವ ಈ ಚೆಲುವೆ, ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾಳೆ.  

3 /6

ನಟಿ ಕಾಮಾಕ್ಷಿ ಚೀನಾದಲ್ಲಿ ವೈದ್ಯ ಪದವಿ ಪಡೆದ ನಂತರ ಅಪೋಲೋ ಆಸ್ಪತ್ರೆಯಲ್ಲಿ ಕೆಲಕಾಲ ವೈದ್ಯರಾಗಿ ಕೆಲಸ ಮಾಡಿದರು. ಅವರು 2018 ರಲ್ಲಿ ಮಿಸ್ ತೆಲಂಗಾಣ ಪ್ರಶಸ್ತಿಯನ್ನು ಗೆದ್ದರು. ಆ ನಂತರ ಆಕೆಗೆ ಸತತ ಸಿನಿಮಾ ಅವಕಾಶಗಳು ಬಂದವು.  

4 /6

‘ಪ್ರಿಯುರಾಲು’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪರಿಚಯವಾದರು. 'ಮಾ ಉರಿ ಪೊಲಿಮೆರಾ', 'ಇಟ್ಲು ಮರೆಡುಮಿಲ್ಲಿ ಪ್ರಜಾನಿಕಂ', 'ವಿರೂಪಾಕ್ಷ', 'ಪೊಲಿಮೆರಾ 2' ಮತ್ತು 'ಓಂ ಭೀಮ್ ಬುಷ್' ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.   

5 /6

ಮಾ ಉರಿ ಪೊಲಿಮೆರಾ ಮತ್ತು ಪೊಲಿಮೆರಾ 2 ಸಿನಿಮಾಗಳು ಈ ಸುಂದರಿಗೆ ಒಳ್ಳೆಯ ಹೆಸರು ತಂದುಕೊಟ್ಟವು. ಮತ್ತೊಂದೆಡೆ, 'ಝಾನ್ಸಿ', 'ಸೈತಾನ್' ಮತ್ತು 'ದೂತ' ನಂತಹ ವೆಬ್ ಸರಣಿಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನಗೆದ್ದರು..   

6 /6

ನಟಿ ಕಾಮಾಕ್ಷಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್ ಫೋಟೋಶೂಟ್‌ಗಳ ಮೂಲಕ ಹುಡುಗರನ್ನು ಮನ ಗೆಲ್ಲುವ ಕೆಲಸ ಮಾಡುತ್ತಿರುತ್ತಾರೆ.. ಇತ್ತೀಚಿಗೆ ನಟಿ ಹಂಚಿಕೊಂಡಿರುವ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿವೆ..