IPL 2024, RCB vs LSG: ಆರ್​ಸಿಬಿ vs ಲಕ್ನೋ ಟೈಟ್‌ ಫೈಟ್‌ನಲ್ಲಿ ಗೆಲುವು ಯಾರಿಗೆ..?   

Indian Premier League 2024: ಐಪಿಎಲ್ ಚೊಚ್ಚಲ ಪಂದ್ಯದಲ್ಲೇ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿರುವ ಮಯಾಂಕ್ ಯಾದವ್ ಮತ್ತು ರನ್‌ ಮಷೀನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

Written by - Puttaraj K Alur | Last Updated : Apr 2, 2024, 03:30 PM IST
  • ಬೆಂಗಳೂರಿನಲ್ಲಿ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಟ್‌ ಪಂದ್ಯ
  • ಲಕ್ನೋ ವಿರುದ್ಧ ಗೆಲುವಿನ ವಿಶ್ವಾಸದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
  • ಮಯಾಂಕ್ ಯಾದವ್ ಮತ್ತು ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ
IPL 2024, RCB vs LSG: ಆರ್​ಸಿಬಿ vs ಲಕ್ನೋ ಟೈಟ್‌ ಫೈಟ್‌ನಲ್ಲಿ ಗೆಲುವು ಯಾರಿಗೆ..?    title=
RCB vs LSG

IPL 2024, RCB vs LSG: ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ 17ನೇ ಸೀಸನ್​ನ 15ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮುಖಾಮುಖಿಯಾಗಲಿವೆ. ಇದು ಲಕ್ನೋಗೆ ೩ನೇ ಪಂದ್ಯವಾಗಿದ್ದರೆ ಮತ್ತು ಆರ್‌ಸಿಬಿಗೆ ೪ನೇ ಪಂದ್ಯವಾಗಿದೆ. ಹೀಗಾಗಿ ಉಭಯ ತಂಡಗಳ ನಡುವೆ ಗೆಲುವಿಗಾಗಿ ಟೈಟ್‌ ಫೈಟ್‌ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. 

ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೆ ಆಡಿರುವ ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿವೆ. ಅಂಕಪಟ್ಟಿಯಲ್ಲಿ ಲಕ್ನೋ ೬ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ ೯ನೇ ಸ್ಥಾನದಲ್ಲಿದೆ. ಹೀಗಾಗಿ ಗೆಲುವಿವಾಗಿ ಉಭಯ ತಂಡಗಳು ನಡುವೆ ಹೈವೋಲ್ಟೇಜ್‌ ಫೈಟ್‌ ನಡೆಯುವ ನಿರೀಕ್ಷೆ ಇದೆ.   

ಇದನ್ನೂ ಓದಿ: “ಅವ ಇನ್ನೂ ಮಗು… ಮೊದಲು ಕಿತ್ತೊಗೆಯಿರಿ”- MI ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಫ್ಯಾನ್ಸ್ ಆಕ್ರೋಶ!

ಐಪಿಎಲ್ ಚೊಚ್ಚಲ ಪಂದ್ಯದಲ್ಲೇ 155.8 ಕಿಮೀ ವೇಗದಲ್ಲಿ ಬೌಲಿಂಗ್‌ ಮಾಡಿ ಗಮನ ಸೆಳೆದಿರುವ ಮಯಾಂಕ್ ಯಾದವ್ ಮತ್ತು ರನ್‌ ಮಷೀನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕೇವಲ ಒಂದು ಪಂದ್ಯವನ್ನು ಗೆದ್ದಿರುವ ಆರ್‌ಸಿಬಿ ತವರು ನೆಲದಲ್ಲಿ ಗೆಲುವಿಗಾಗಿ ಹಾತೊರೆಯುತ್ತಿದೆ. ತಂಡದಲ್ಲಿ ಉತ್ತಮ ಬ್ಯಾಟ್ಸಮನ್‌ಗಳಿದ್ದರೂ ಸ್ಥಿರ ಪ್ರದರ್ಶನ ತೋರುತ್ತಿಲ್ಲ. ಕೊಹ್ಲಿ ಮತ್ತು ದಿನೇಶ್‌ ಕಾರ್ತಿಕ್‌ ಬಿಟ್ಟರೆ ಇನ್ನುಳಿದವರು ಹೇಳಿಕೊಳ್ಳುವಂತಹ ಬ್ಯಾಟಿಂಗ್‌ ಮಾಡುತ್ತಿಲ್ಲ. 

ಬೌಲಿಂಗ್‌ನಲ್ಲಿಯೂ ಆರ್‌ಸಿಬಿ ಫೇಲ್‌ ಆಗುತ್ತಿದೆ. ಹೆಚ್ಚು ರನ್‌ ಬಿಟ್ಟುಕೊಡುವ ಮೂಲಕ ತಂಡ ಸೋಲು ಕಾಣುತ್ತಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಗೆಲುವು ಸುಲಭವಾಗಿ ದಕ್ಕುತ್ತದೆ. ಎರಡರ ಪೈಕಿ ಒಂದರಲ್ಲಿ ಫೇಲ್‌ ಆದರೂ ತಂಡಕ್ಕೆ ಸೋಲು ಗ್ಯಾರಂಟಿ ಅಂತಾನೇ ಹೇಳಬಹುದು. ಇನ್ನು ಕನ್ನಡಿಗ ಕೆ.ಎಲ್.ರಾಹುಲ್‌ ನೇತೃತ್ವದ ಲಕ್ನೋ ಗೆಲುವಿಗಾಗಿ ರೋಚಕ ಸೆಣಸಾಟ ನಡೆಸುವ ನಿರೀಕ್ಷೆ ಇದೆ. ಉತ್ತಮ ಬೌಲರ್‌ಗಳು ಮತ್ತು ಬ್ಯಾಟ್ಸಮನ್‌ಗಳನ್ನು ಹೊಂದಿರುವ ಲಕ್ನೋ ಗೆಲುವಿನ ವಿಶ್ವಾಸದಲ್ಲಿಯೇ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿWatch: ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರಿದ ಮಗ ರಿಯಾನ್ ಪರಾಗ್ ಮೇಲೆ ತಾಯಿಯ ಪ್ರೀತಿಯ ಸುರಿಮಳೆ: ಹೃದಯಸ್ಪರ್ಶಿ ವಿಡಿಯೋ ನೋಡಿ

ಎರಡೂ ತಂಡಗಳ ಸ್ಕ್ವಾಡ್‌ ಹೀಗಿದೆ ನೋಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್ (ವಿಕೆಟ್‌ ಕೀಪರ್), ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಅಲ್ಜಾರಿ ಜೋಸೆಫ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್, ವಿಜಯ್‌ಕುಮಾರ್ ವೈಶಾಕ್, ದಿನೇಶ್‌ ಕಾರ್ತಿಕ್, ಕರ್ಣ್ ಶರ್ಮಾ, ರೀಸ್ ಟೋಪ್ಲಿ, ಟಾಮ್ ಕರ್ರಾನ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗುಸನ್, ಮಹಿಪಾಲ್ ಲೊಮ್ರೋರ್, ವಿಲ್ ಜಾಕ್ಸ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಆಕಾಶ್ ದೀಪ್, ಸೌರವ್ ಚೌಹಾನ್, ರಾಜನ್ ಕುಮಾರ್, ಹಿಮಾಂಶು ಶರ್ಮಾ

ಲಕ್ನೋ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್), ನಿಕೋಲಸ್ ಪೂರನ್ (ನಾಯಕ), KL ರಾಹುಲ್, ದೇವದತ್ ಪಡಿಕ್ಕಲ್, ಮಾರ್ಕಸ್ ಸ್ಟೋನಿಸ್, ಆಯುಷ್ ಬಡೋನಿ, ಕೃನಾಲ್ ಪಾಂಡ್ಯ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ನವೀನ್-ಉಲ್- ಮಿಶ್ರಾ, ಕೈಲ್ ಮೇಯರ್ಸ್, ಆಷ್ಟನ್ ಟರ್ನರ್, ಕೃಷ್ಣಪ್ಪ ಗೌತಮ್, ಮ್ಯಾಟ್ ಹೆನ್ರಿ, ದೀಪಕ್ ಹೂಡಾ, ಪ್ರೇರಕ್ ಮಂಕಡ್, ಯಶ್ ಠಾಕೂರ್, ಶಿವಂ ಮಾವಿ, ಯುಧ್ವೀರ್ ಸಿಂಗ್ ಚರಕ್, ಅರ್ಷದ್ ಖಾನ್, ಶಮರ್ ಜೋಸೆಫ್, ಅರ್ಶಿನ್ ಕುಲಕರ್ಣಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News