ಮೊದಲ ಟೆಸ್ಟ್ : ಜಡೇಜಾ, ಶಮಿ ದಾಳಿಗೆ ಹರಿಣಗಳ ತತ್ತರ, ಭಾರತಕ್ಕೆ 203 ರನ್ ಗಳ ಗೆಲುವು

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ಕ್ರೀಡಾಂಗಣದಲ್ಲಿ ನಡೆದಿದ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 203 ರನ್ ಗಳ ಗೆಲುವು ಸಾಧಿಸಿದೆ. 

Last Updated : Oct 6, 2019, 02:32 PM IST
ಮೊದಲ ಟೆಸ್ಟ್ : ಜಡೇಜಾ, ಶಮಿ ದಾಳಿಗೆ ಹರಿಣಗಳ ತತ್ತರ, ಭಾರತಕ್ಕೆ 203 ರನ್ ಗಳ ಗೆಲುವು  title=
Photo courtesy: Twitter

ನವದೆಹಲಿ: ವಿಶಾಖಪಟ್ಟಣದ ವೈ.ಎಸ್.ರಾಜಶೇಖರ್ ಕ್ರೀಡಾಂಗಣದಲ್ಲಿ ನಡೆದಿದ ದಕ್ಷಿಣ ಆಫ್ರಿಕಾದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 203 ರನ್ ಗಳ ಗೆಲುವು ಸಾಧಿಸಿದೆ. 

ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಇಳಿದ ಭಾರತ ತಂಡ ಆರಂಭದಲ್ಲಿ ಮಾಯಂಕ್ ಅಗ್ರವಾಲ್ ಹಾಗೂ ರೋಹಿತ್ ಶರ್ಮಾ ಅವರ ದ್ವಿಶತಕ ಹಾಗೂ ಶತಕಗಳಿಂದಾಗಿ  7 ವಿಕೆಟ್ ನಷ್ಟಕ್ಕೆ 502 ಬೃಹತ್ ಮೊತ್ತವನ್ನು ದಾಖಲಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಭಾರತಕ್ಕೆ ಸವಾಲು 431 ರನ್ ಗಳಿಗೆ ಸರ್ವಪತನವನ್ನು ಕಂಡಿತು.

ದಕ್ಷಿಣ ಆಫ್ರಿಕಾ ತಂಡವು ಮೊದಲ ಇನಿಂಗ್ಸ್ ನ ಆರಂಭದಲ್ಲಿ 63 ರನ್ ಗಳಿಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಆಘಾತ ಅನುಭವಿಸಿತ್ತು. ಈ ಸಂದರ್ಭದಲ್ಲಿ ಡೀನ್ ಎಲ್ಗರ್ ಅವರ 160 ಹಾಗೂ ಡಿಕಾಕ್ ಗಳಿಸಿದ 111 ರನ್ ಗಳಿಂದ ತಂಡವು ಸಂಕಷ್ಟದಿಂದ ಪಾರಾಯಿತು. ಭಾರತದ ಪರವಾಗಿ ಆರ್.ಅಶ್ವಿನ್ 7 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡರು.

ತದನಂತರ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಇಳಿದ ಭಾರತ ತಂಡವು ರೋಹಿತ್ ಶರ್ಮಾ ಅವರ 127 ಹಾಗೂ ಚೇತೆಶ್ವರ್ ಪೂಜಾರ್ ಅವರ 81 ರನ್ ಗಳ ನೆರವಿನಿಂದ ನಾಲ್ಕು ವಿಕೆಟ್ ಕಳೆದುಕೊಂಡು 323 ರನ್ ಗಳಿಗೆ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

394 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ರವಿಂದ್ರ ಜಡೇಜಾ ಹಾಗೂ ಮೊಹಮ್ಮದ್ ಶಮಿ ಅವರ ಕರಾರುವಕ್ಕಾದ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 191 ರನ್ ಗಳಿಗೆ ಆಲ್ ಔಟ್ ಆಯಿತು. ಆ ಮೂಲಕ ಭಾರತ 203 ರನ್ ಗಳ ಅಂತರದಿಂದ ಗಗೆಲುವು ಸಾಧಿಸಿದೆ.

 

Trending News