Tokyo Olympics 2020: ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಘೋಷಿಸಿದ ಡೊಮಿನೊಸ್

ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ

Written by - Puttaraj K Alur | Last Updated : Jul 25, 2021, 10:11 AM IST
  • ಪಿಜ್ಜಾ ಅಂದರೆ ನನಗೆ ಬಹಳ ಇಷ್ಟ, ಭಾರತಕ್ಕೆ ಮರಳಿದ ಬಳಿಕ ನಾನು ಪಿಜ್ಜಾ ತಿನ್ನುತ್ತೇನೆ ಅಂದಿದ್ದ ಮೀರಾಬಾಯಿ
  • ಪಿಜ್ಜಾ ತಿನ್ನಲು ನಾವು ಮೀರಾಬಾಯಿಗೆ ಕಾಯಿಸುವುದಿಲ್ಲ, ಜೀವನಪೂರ್ತಿ ಉಚಿತ ಪಿಜ್ಜಾ ನೀಡುತ್ತೇವೆಂದ ಡೊಮಿನೊಸ್
  • ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿರುವ ಮೀರಾಬಾಯಿ ಚಾನು
Tokyo Olympics 2020: ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತ ಪಿಜ್ಜಾ ಘೋಷಿಸಿದ ಡೊಮಿನೊಸ್ title=
ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು

ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಟಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸೈಖೋಮ್ ಮೀರಾಬಾಯಿ ಚಾನುಗೆ ಜೀವನಪೂರ್ತಿ ಉಚಿತವಾಗಿ ಪಿಜ್ಜಾ ನೀಡುವುದಾಗಿ ಡೊಮಿನೊಸ್ ಇಂಡಿಯಾ ಘೋಷಿಸಿದೆ.

ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚಾನು(Mirabai Chanu) ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದರು. ಬಳಿಕ ನಡೆದ  ಸಂದರ್ಶನವೊಂದರಲ್ಲಿ ತಮ್ಮ ಮನದಾಸೆಯನ್ನು ವ್ಯಕ್ತಪಡಿಸಿದ್ದರು. ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹಮ್ಮೆ ತಂದಿರುವ ನೀವು ಭಾರತಕ್ಕೆ ಮರಳಿದ ಬಳಿಕ ಮಾಡುವ ಮೊದಲ ಕೆಲಸವೇನು ಎಂದು ಅವರಿಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ್ದ ಅವರು ಪಿಜ್ಜಾ ತಿನ್ನುತ್ತೇನೆ ಎಂದಿದ್ದರು.

ಇದನ್ನೂ ಓದಿ: India vs England 2021: ಬೆರಳಿನ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಹೊರಕ್ಕೆ

‘ಪಿಜ್ಜಾ ಅಂದರೆ ನನಗೆ ತುಂಬಾ ಇಷ್ಟ. ಬಹಳ ದಿನಗಳಿಂದ ನಾನು ಪಿಜ್ಜಾನೇ ತಿಂದಿಲ್ಲ. ಭಾರತಕ್ಕೆ ಮರಳಿದ ಬಳಿಕ ಜಾಸ್ತಿ ಪಿಜ್ಜಾ ತಿನ್ನುತ್ತೇನೆ’ ಅಂತಾ ಮೀರಾಬಾಯಿ ಹೇಳಿಕೊಂಡಿದ್ದರು. ಅವರ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಡೊಮಿನೊಸ್(Dominos India), ‘ಮೀರಾಬಾಯಿಯವರು ಹೇಳಿದ್ದಾರೆ ನಾವು ಕೇಳಿಸಿಕೊಂಡಿದ್ದೇವೆ. ಪಿಜ್ಜಾ ಸೇವಿಸಲು ಮೀರಾಬಾಯಿಯವರನ್ನು ನಾವು ಇನ್ನು ಮುಂದೆ ಕಾಯಿಸುವುದಿಲ್ಲ. ಹೀಗಾಗಿ ಅವರಿಗೆ ನಾವು ಜೀವನಪೂರ್ತಿ ಉಚಿತವಾಗಿ ಪಿಜ್ಜಾ ನೀಡುತ್ತೇವೆ’ ಅಂತಾ ಡೊಮಿನೊಸ್ ಟ್ವೀಟ್ ಮೂಲಕ ಘೋಷಿಸಿದೆ.

ಡೊಮಿನೊಸ್ ಅವರ ಹೇಳಿಕೆ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ‘ನೀವು ಜೀವನಪೂರ್ತಿ ಉಚಿತವಾಗಿ ಪಿಜ್ಜಾ ನೀಡುತ್ತೇವೆ ಅಂತಾ ಹೇಳಿದ್ದೀರಿ. ಅದನ್ನು ತಿಂದರೆ ಮೀರಾಬಾಯಿಯವರ ಆರೋಗ್ಯ ಹಾಳಾಗುತ್ತದೆ ಅಂತಾ ಒಬ್ಬರು, ಅವರಿಗೆ ಉಚಿತವಾಗಿ ಪಿಜ್ಜಾ ಘೋಷಿಸಿದ್ದೀರಿ, ನಾನು ಆರ್ಡರ್ ಮಾಡಿದ ಪಿಜ್ಜಾಗೆ ಹೆಚ್ಚಿಗೆ ಒಂದು ಕೆಚಪ್ ನೀಡುವುದಿಲ್ಲ ಅಂತಾ ಮತ್ತೊಬ್ಬರು ನಗೆ ಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ: Viral News: ಬೀಡಿ ಪ್ಯಾಕೆಟ್ ಮೇಲಿನ ಲಿಯೊನೆಲ್‌ ಮೆಸ್ಸಿ ಫೋಟೋ ವೈರಲ್!

ಟೋಕಿಯೊ ಒಲಂಪಿಕ್ಸ್ ಕ್ರೀಡಾಕೂಟ(Tokyo Olympic 2020)ದ ಮಹಿಳೆಯರ 49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ 4 ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಹಾಗೂ ಜರ್ಕ್‌ನಲ್ಲಿ 115 ಕೆಜಿ) ತೂಕವನ್ನು ಎತ್ತಿದ್ದಾರೆ. ಚೀನಾದ ಝಿಹೈ ಹು ಒಟ್ಟು 210 ಕೆಜಿ ತೂಕ ಎತ್ತಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡು ಹೊಸ ದಾಖಲೆ  ಸೃಷ್ಟಿಸಿದ್ದರು. ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ 194 ಕೆಜಿ ತೂಕ ಎತ್ತುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.     

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News